ಸಾರಾಂಶ
ಮಳವಳ್ಳಿ ತಾಲೂಕಿನ ಶೆಟ್ಟಹಳ್ಳಿಯ ಹಲವು ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ರಸ್ತಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಗ್ರಾಮಕ್ಕೆ ಇನ್ನೂ ಹೆಚ್ಚಿನ ಅಭಿವೃದ್ಧಿ ಹಾಗೂ ಮೂಲ ಸೌಲಭ್ಯವನ್ನು ಕಲ್ಪಿಸಿ ಸಮಗ್ರವಾಗಿ ಅಭಿವೃದ್ಧಿಗೊಳಿಸಲಾಗುವುದು.
ಕನ್ನಡಪ್ರಭ ವಾರ್ತೆ ಮಳವಳ್ಳಿ
ತಾಲೂಕಿನ ಶೆಟ್ಟಹಳ್ಳಿಯ ಸರ್ವಾಂಗೀಣ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುವುದಾಗಿ ಶಾಸಕ ಪಿ.ಎಂ ನರೇಂದ್ರಸ್ವಾಮಿ ಭರವಸೆ ನೀಡಿದರು.ಗ್ರಾಮದಲ್ಲಿ ವಿಶೇಷ ಅನುದಾನದಡಿಯಲ್ಲಿ ಶೆಟ್ಟಹಳ್ಳಿಯಿಂದ ಸುಲ್ತಾನ್ ರಸ್ತೆಗೆ ತಲುಪುವ ಹಾಗೂ ಶೆಟ್ಟಹಳ್ಳಿಯಿಂದ ಬಿಸಿಎಂ ಹಾಸ್ಟಲ್ ವರೆಗೆ 1.43 ಕೋಟಿ ರು. ಅನುದಾನದಲ್ಲಿ ನಿರ್ಮಿಸಲಾಗುತ್ತಿರುವ ಸಿಸಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ ನೆರೆವೇರಿಸಿ ಮಾತನಾಡಿದರು.
ಹಲವು ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ರಸ್ತಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಗ್ರಾಮಕ್ಕೆ ಇನ್ನೂ ಹೆಚ್ಚಿನ ಅಭಿವೃದ್ಧಿ ಹಾಗೂ ಮೂಲ ಸೌಲಭ್ಯವನ್ನು ಕಲ್ಪಿಸಿ ಸಮಗ್ರವಾಗಿ ಅಭಿವೃದ್ಧಿಗೊಳಿಸುವುದಾಗಿ ಭರವಸೆ ನೀಡಿದರು.ಈ ವೇಳೆ ಗ್ರಾಪಂ ಉಪಾಧ್ಯಕ್ಷ ಮನುಅರಸು, ಮುಖಂಡರಾದ ಸುರೇಶ್, ಚಿಕ್ಕಯ್ಯ, ಪುಟ್ಟಸ್ವಾಮಿ, ಆರ್.ಎನ್ ವಿಶ್ವಾಸ್ ಸೇರಿದಂತೆ ಇತರರು ಇದ್ದರು.
ಧರ್ಮಸ್ಥಳ ಸಂಘದಲ್ಲಿ ಧರ್ಮದ ಕಾರ್ಯ ನಡೆಯೋಲ್ಲ: ಪಿ.ಎಂ.ನರೇಂದ್ರಸ್ವಾಮಿ ಕಿಡಿಕನ್ನಡಪ್ರಭ ವಾರ್ತೆ ಹಲಗೂರುಹೆಸರಿಗೆ ಮಾತ್ರ ಅದು ಧರ್ಮಸ್ಥಳ ಸಂಘ. ಆದರೆ, ಅದರಲ್ಲಿ ಧರ್ಮದ ಕೆಲಸವೇ ನಡೆಯುತ್ತಿಲ್ಲ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಕಿಡಿಕಾರಿದ್ದಾರೆ.
ಸಮೀಪದ ಹಾಡ್ಲಿ ಸರ್ಕಲ್‌ನಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿ, ಈ ಸಂಘ ಬಡವರಿಗೆ ಕೊಟ್ಟ ಸಾಲಕ್ಕೆ ಶೇ.40 ಪರ್ಸೆಂಟ್ ಬಡ್ಡಿ ವಸೂಲಿ ಮಾಡ್ತಿದೆ. ನೀವು ಅವರು ಕೊಡೋ 10-20 ಸಾವಿರ ಹಣ ಪಡೆದುಕೊಂಡು ಎಷ್ಟು ಬಡ್ಡಿ ಕಟ್ಟುತ್ತಿದ್ದೀರೆಂದು ನಿಮಗೇ ಗೊತ್ತಾಗುತ್ತಿಲ್ಲ ಎಂದರು.ಶ್ರೀಮಂಜುನಾಥನನ್ನು ನೋಡಿಕೊಂಡು ಹಣ ಕಟ್ಟುತ್ತಿದ್ದೀರಿ. ಆದರೆ, ಅದು ಧರ್ಮಸ್ಥಳ ಸಂಘ. ಆ ಸಂಘದಲ್ಲಿ ಧರ್ಮದ ಕಾರ್ಯ ನಡೆಯುತ್ತಿಲ್ಲ. ಅದಕ್ಕಾಗಿಯೇ ಸರ್ಕಾರ ನಿಮ್ಮನ್ನು ಸಂಕಷ್ಟದಿಂದ ಪಾರು ಮಾಡಲು ಮಹಿಳೆಯರಿಗೆ ಪ್ರತಿ ತಿಂಗಳು 2 ಸಾವಿರ ರು. ನೀಡುತ್ತಿರುವುದಾಗಿ ತಿಳಿಸಿದರು.ಆ ಕಾರಣಕ್ಕಾಗಿ ನಾವು ಅವ್ರ ಶೋಷಣೆ ತಪ್ಪಿಸಲಿಕ್ಕೆ ಪ್ರತಿ ಮನೆಯ ಬಡ ಕುಟುಂಬಕ್ಕೆ 2 ಸಾವಿರ ಕೊಡ್ತಿದ್ದೀವಿ ಎಂದರು.ದೇವಸ್ಥಾನಕ್ಕೆ 1 ಲಕ್ಷ ರು. ಚೆಕ್ ವಿತರಣೆಪಾಂಡುವಪುರ:
ತಾಲೂಕಿನ ಹಳೇಬೀಡು ವಲಯ ಕಾಳೇನಹಳ್ಳಿ ಶ್ರೀಮಂಚಮ್ಮ ದೇವಿ ದೇವಸ್ಥಾನ ನಿರ್ಮಾಣಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮೇಲುಕೋಟೆ ಯೋಜನಾಧಿಕಾರಿ ಕಚೇರಿಯಿಂದ 1 ಲಕ್ಷ ಹಣದ ಚೆಕ್‌ನ್ನು ಸಂಸ್ಥೆ ಯೋಜನಾಧಿಕಾರಿ ಸರೋಜ ವಿತರಿಸಿದರು.ಈ ವೇಳೆ ಗ್ರಾಪಂ ಮಾಜಿ ಅಧ್ಯಕ್ಷೆ ಜಯಶೀಲಮ್ಮ ಸೇರಿದಂತೆ ದೇವಸ್ಥಾನದ ಕಮಿಟಿ ಅಧ್ಯಕ್ಷರು, ಉಪಾಧ್ಯಕ್ಷರು , ಗ್ರಾಮಾಭಿವೃದ್ಧಿ ಸಂಸ್ಥೆಯ ವಲಯದ ಮೇಲ್ವಿಚಾರಕರು ಹಾಗೂ ಸೇವಾ ಪ್ರತಿನಿಧಿ ಉಪಸ್ಥಿತರಿದ್ದರು.