ಹೃದಯಾಘಾತ ನಿಯಂತ್ರಿಸಲು ಸಂಶೋಧನೆಗೆ ಒತ್ತು ನೀಡಬೇಕು

| Published : Feb 17 2024, 01:21 AM IST

ಹೃದಯಾಘಾತ ನಿಯಂತ್ರಿಸಲು ಸಂಶೋಧನೆಗೆ ಒತ್ತು ನೀಡಬೇಕು
Share this Article
  • FB
  • TW
  • Linkdin
  • Email

ಸಾರಾಂಶ

ದೇಶದಲ್ಲಿ ಶೇ.೬೫ರಷ್ಟು ಸಾವುಗಳು ಬದಲಾವಣೆಯ ಜೀವನ ಶೈಲಿ ಕಾರಣದಿಂದ ಸಂಭವಿಸುತ್ತಿವೆ, ಹೃದ್ರೋಗ, ಮಧುಮೇಹ, ಕ್ಯಾನ್ಸರ್ ಸಾವಿಗೆ ಕಾರಣವಾಗುತ್ತಿವೆ

ಕನ್ನಡಪ್ರಭ ವಾರ್ತೆ ಕೋಲಾರ

ಮುಂದಿನ ವರ್ಷಗಳಲ್ಲಿ ಕ್ಯಾನ್ಸರ್ ಮತ್ತು ಹೃದಯಾಘಾತ ಸಂಬಂಧಿತ ಕಾಯಿಲೆಗಳು ಹೆಚ್ಚು ಸಂಭವಿಸುವ ಸಾಧ್ಯತೆ ಕಂಡು ಬರುತ್ತಿದೆ, ಇದನ್ನು ನಿಯಂತ್ರಿಸಲು ಪೂರಕ ಸಂಶೋಧನೆಗೆ ಹೆಚ್ಚು ಒತ್ತು ನೀಡಬೇಕು. ಪಾಶ್ಚಾತ್ಯ ದೇಶಗಳ ಮಾದರಿಗಳನ್ನು ನಾವು ಈ ವಿಭಾಗದಲ್ಲಿ ಅನುಕರಿಸಬೇಕಿದೆ ಎಂದು ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆ ಮಾಜಿ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಹೇಳಿದರು.

ನಗರದ ಟಮಕಾದ ಶ್ರೀ ದೇವರಾಜ ಅರಸು ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಅಕಾಡೆಮಿಯ ರಜತ ಮಹೋತ್ಸವ ಸಭಾಂಗಣದಲ್ಲಿ ನ್ಯಾಷನಲ್ ಸೈಂಟಿಫಿಕ್ ಕಾನ್‌ಕ್ಲೇವ್ ಆನ್ ಟ್ರಾನ್ಸಲೇಷನ್ ರೀಸರ್ಚ್ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಬದಲಾದ ಜೀವನ ಶೈಲಿ

ಕೋವಿಡ್ ಜಗತ್ತಿಗೆ ದೊಡ್ಡ ಪಾಠ ಕಲಿಸಿದೆ, ಸಂಶೋಧನೆಗೆ ದಾರಿ ಮಾಡಿಕೊಟ್ಟಿದೆ, ಹಿಂದೆಲ್ಲಾ ಲಸಿಕೆ ಅಭಿವೃದ್ಧಿಗೆ ೧೫ ವರ್ಷ ಕಾಲಾವಕಾಶ ಬೇಕಾಗುತಿತ್ತು, ಆದರೆ, ಕೋವಿಡ್ ಲಸಿಕೆಯನ್ನು ಕೇವಲ ಒಂದೂವರೆ ವರ್ಷದಲ್ಲಿ ಅಭಿವೃದ್ಧಿಪಡಿಸಲಾಯಿತು. ದೇಶದಲ್ಲಿ ಶೇ.೬೫ರಷ್ಟು ಸಾವುಗಳು ಬದಲಾವಣೆಯ ಜೀವನ ಶೈಲಿ ಕಾರಣದಿಂದ ಸಂಭವಿಸುತ್ತಿವೆ, ಹೃದ್ರೋಗ, ಮಧುಮೇಹ, ಕ್ಯಾನ್ಸರ್ ಸಾವಿಗೆ ಕಾರಣವಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಶ್ರೀ ದೇವರಾಜ ಅರಸು ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಅಕಾಡೆಮಿ ಅಧ್ಯಕ್ಷ ಜಿ.ಎಚ್.ನಾಗರಾಜ್, ಖಜಾಂಚಿ, ಜೆ.ರಾಜೇಂದ್ರ, ಕಾರ್ಯದರ್ಶಿ ಕೆ.ಜಿ.ಹನುಮಂತರಾಜು, ಟ್ರಸ್ಟಿ ಡಾ.ರಾಜೇಶ್ ಜಗದಾಳೆ, ಕುಲಪತಿ ವೆಂಗಮ್ಮ, ಡೀನ್ ಡಾ.ಕೆ.ಪ್ರಭಾಕರ್, ಕುಲಪತಿ ಡಿ.ವಿ.ಎಲ್.ಎನ್.ಪ್ರಸಾದ್, ಯೆನಪೋಯಾ ವಿಶ್ವವಿದ್ಯಾಲಯದ ವಿಜಯಕುಮಾರ್, ವೈದ್ಯಕಿಯ ಅಧೀಕ್ಷಕ ಡಾ.ಕೃಷ್ಣಪ್ಪ ಇದ್ದರು.

-