ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರನಮ್ಮ ವಿದೇಶಿ ಬಂಡವಾಳ ಹೂಡಿಕೆ ಸಮಾವೇಶ ಯಶಸ್ವಿಯಾಗಿದೆ, ಕೇವಲ ಕಾಗದದಲ್ಲಿಯಷ್ಟೇ ಅಲ್ಲ, ಅದನ್ನು ಕಾರ್ಯ ರೂಪಕ್ಕೆ ತರುವುದು ನಮ್ಮ ಆದ್ಯತೆಯಾಗಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದರು.ತಾಲೂಕಿನ ವೇಮಗಲ್ ಕೈಗಾರಿಕಾ ವಲಯದಲ್ಲಿ ಜರ್ಮನಿ ಮೂಲದ ಕೈಗಾರಿಕೆಯ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.6 ಲಕ್ಷ ಉದ್ಯೋಗ ಸೃಷ್ಟಿ
೧೦ ಲಕ್ಷ ಕೋಟಿ ಹೂಡಿಕೆಯಲ್ಲಿ ಕನಿಷ್ಟ ೭ ಲಕ್ಷ ಕೋಟಿ ಹೂಡಿಕೆ ಆಗಬೇಕು, ಕನಿಷ್ಠ ೬ ಲಕ್ಷ ಮಂದಿಗೆ ಉದ್ಯೋಗ ಸೃಷ್ಟಿಯಾಗುತ್ತದೆ, ಇದೆಲ್ಲವನ್ನೂ ನಾವು ಪಾರದರ್ಶಕವಾಗಿ ಮಾಡುತ್ತೇವೆ. ನೂತನ ಕೈಗಾರಿಕಾ ಕೇಂದ್ರಗಳಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಲಾಗುವುದು, ಇದಕ್ಕೆ ಸ್ಥಳೀಯ ತಾಂತ್ರಿಕ ನಿಪುಣತೆ ಇರುವವರಿಗೆ ಮೊದಲ ಆದ್ಯತೆ ನೀಡಲಾಗುವುದು. ಎಐ ತಂತ್ರಜ್ಞಾನ ಬಂದ ನಂತರ ಉದ್ಯೋಗಗಳ ಸೃಷ್ಟಿ ಕಡಿಮೆ ಆಗಲಿದೆ, ಹೀಗಾಗಿ ನಮ್ಮ ಕೈಗಾರಿಕಾ ನೀತಿಯಲ್ಲಿ ಸ್ಪಷ್ಟತೆ ಇದೆ ಎಂದು ವಿವರಿಸಿದರು.ಹೆಚ್ಚು ಉದ್ಯೋಗ ಸೃಷ್ಟಿಸುವ ಕೈಗಾರಿಕೆಗಳಿಗೆ ಆದ್ಯತೆ ನೀಡುವುದು ನಮ್ಮ ಕೈಗಾರಿಕಾ ನೀತಿಯಾಗಿದೆ, ಕನ್ನಡಿಗರಿಗೆ, ಮಹಿಳೆಯರಿಗೆ, ಉದ್ಯೋಗ ನೀಡುವ ಸಂಸ್ಥೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು, ರಾಜ್ಯದಲ್ಲಿ ಈಗಾಗಲೆ ಇರುವ ಕೈಗಾರಿಕೆಗಳಲ್ಲಿ ಸಿ ಮತ್ತು ಡಿ ದರ್ಜೆಯ ಹುದ್ದೆಗಳಲ್ಲಿ ಮೀಸಲು ನೀಡುವುದಕ್ಕೆ ಬೇಡಿಕೆ ಇದೆ ಎಂದು ತಿಳಿಸಿದರು.ಸ್ಥಳೀಯರಿಗೆ ಶೇ. 65ರಷ್ಟು ಹುದ್ದೆಎ ಮತ್ತು ಬಿ ದರ್ಜೆಯ ಹುದ್ದೆಗಳಲ್ಲಿ ಶೇ.೬೫ ರಷ್ಟು ಉದ್ಯೋಗಗಳನ್ನು ಸ್ಥಳೀಯರಿಗೆ ನೀಡಲಾಗುತ್ತಿದೆ, ನಮ್ಮ ಕರ್ನಾಟಕ ಗ್ಲೋಬಲ್ ಇನ್ವೆಸ್ಟ್ ಮೆಂಟ್ ಸಮಾವೇಶ ಯಶಸ್ವಿಯಾಗಿದೆ, ಇದೇ ರೀತಿ ಕೈಗಾರಿಕಾ ವಲಯದಲ್ಲಿ ಎಲ್ಲ ವಿಭಾಗದಲ್ಲಿ ರಾಜ್ಯವನ್ನು ಮುನ್ನೆಡಸಲು ಮತ್ತೊಂದು ಸಮಾವೇಶ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.ಮಾಜಿ ವಿಧಾನಪರಿಷತ್ ಸಭಾಪತಿ ವಿ.ಆರ್.ಸುದರ್ಶನ್, ಮುಖಂಡರಾದ ವಿ.ಬಿ.ಉದಯಶಂಕರ್, ಜಯದೇವ್ ಇದ್ದರು.
ಹಂತ ಹಂತವಾಗಿ ಭೂ ಪರಿಹಾರಕೈಗಾರಿಕಾ ಪ್ರದೇಶಕ್ಕೆ ವಶಪಡಿಸಿಕೊಂಡ ಜಮೀನುಗಳ ಪರಿಹಾರ ದೃಷ್ಟಿಯಲ್ಲಿ ಯಾವ್ಯಾವ ಅರ್ಜಿಗಳು ಕಾನೂನು ರೀತಿಯಲ್ಲಿ ಸರಿ ಇದಿಯೋ ಅಂತಹವರಿಗೆ ಸರ್ಕಾರದ ಇತಿಮಿತಿಯೊಳಗೆ ಹಂತ ಹಂತವಾಗಿ ಹಣ ಬಿಡುಗಡೆ ಮಾಡುತ್ತೇವೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದರು. ತಾಲೂಕಿನ ವೇಮಗಲ್‌ನ ವಾಲ್ಮೀಕಿ ಭವನದಲ್ಲಿ ರೈತರ ಸಮಸ್ಯೆಗಳನ್ನು ಆಲಿಸಿದ ನಂತರ ಮಾತನಾಡಿದ ಸಚಿವರು, ಸುಮಾರು ೨೫ ಎಕರೆ ಜಮೀನಿಗೆ ಸಂಬಂಧಿಸಿದಂತೆ ರೈತರ ವೈಯಕ್ತಿಕ ಭಿನ್ನಾಭಿಪ್ರಾಯಗಳಿವೆ. ಅದನ್ನೆಲ್ಲ ಕೋರ್ಟ್‌ನಲ್ಲಿ ಬಗೆಹರಿಸಿಕೊಳ್ಳಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದು, ರೈತರು ಅದಷ್ಟು ಬೇಗನೆ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಸಲಹೆ ನೀಡಿದರು.ಸಿಎಸ್‌ಅರ್ ಹಣ ಸ್ಥಳೀಯವಾಗಿ ಬಳಸಿಭೂಮಿ ಕಳೆದುಕೊಂಡಿರುವವರಿಗೆ ಅವರ ಅರ್ಹತೆಗೆ ತಕ್ಕಂತೆ ಕೆಲಸ ನೀಡಬೇಕು, ಆದರೆ ಇಲ್ಲಿನ ಸಮಸ್ಯೆಗಳು ಕೂಡ ನನ್ನ ಗಮನಕ್ಕೆ ಬಂದಿದೆ, ಅದನ್ನು ಕುಲಂಕುಶವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳುವೆ, ಸಿಎಸ್‌ಅರ್ ಅನುದಾನ ಸ್ಥಳೀಯವಾಗಿ ಬಳಸಬೇಕು ಎಂದು ಕಟ್ಚುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಹೇಳಿದರು.