ಮಕ್ಕಳ ಪ್ರತಿಭೆಗೆ ಪ್ರೋತ್ಸಾಹಿಸಿ:ಮುಜಾವರ

| Published : May 30 2024, 12:55 AM IST

ಮಕ್ಕಳ ಪ್ರತಿಭೆಗೆ ಪ್ರೋತ್ಸಾಹಿಸಿ:ಮುಜಾವರ
Share this Article
  • FB
  • TW
  • Linkdin
  • Email

ಸಾರಾಂಶ

ನ್ಮಾನ ಎನ್ನುವುದು ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಲು ಮಾತ್ರ

ಮುಳಗುಂದ: ಆಧುನಿಕ ಜೀವನದಲ್ಲಿ ಮಕ್ಕಳಿಗೆ ಸನ್ಮಾನಿಸಿ ಅವರಲ್ಲಿ ಹುದುಗಿರುವ ಪ್ರತಿಭೆ ಹೊರಹಾಕುವಂತೆ ಮಾಡಬೇಕು ಎಂದು ಅಂಜುಮನ್-ಏ-ಇಸ್ಲಾಂ ಪ್ರೌಢಶಾಲೆ ಅಧ್ಯಕ್ಷ ಅಬ್ದುಲ್ ಹಮೀದ್‌ ಮುಜಾವರ ಹೇಳಿದರು.

ಪಟ್ಟಣದ ಖಿದ್ಮತ್-ಏ-ಮಿಲ್ಲತ್ ಗ್ರುಪ್ ವತಿಯಿಂದ ಅಂಜುಮನ್‌ ಏ ಸ್ಲಾಂ ಪ್ರೌಢ ಶಾಲೆ ಹಾಗೂ ಸರ್ಕಾರಿ ಪಿಯು ಕಾಲೇಜಿನ 2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಮಾತನಾಡಿ, ಈ ಶಾಲೆಗೆ ವಿದ್ಯಾರ್ಥಿಗಳ ಕೊರತೆಯಿದ್ದು. ಅಲ್ಲದೇ ಮೈದಾನದ ಅಭಿವೃದ್ಧಿಯಾಗಬೇಕಿದೆ. ಮಕ್ಕಳು ಗುರುಗಳು ಹೇಳಿದ ಪಾಠ ಗಮನವಿಟ್ಟು ಆಲಿಸಿದಲ್ಲಿ ಉತ್ತಮ ಅಂಕ ಪಡೆಯಬಹುದು ಎಂದರು.

ನಂತರ ಕಾಲೇಜಿನ ಪ್ರಾಚಾರ್ಯ ಜಿ.ಎಸ್. ಸಿರ್ಸಿ ಮಾತನಾಡಿ, ಸನ್ಮಾನ ಎನ್ನುವುದು ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಲು ಮಾತ್ರ. ಇದರಿಂದ ಮಕ್ಕಳು ಉತ್ತೇಜಿತರಾಗಿ ಮುಂದಿನ ತರಗತಿಗಳಲ್ಲಿಯು ಉತ್ತಮ ಅಂಕ ಗಳಿಸಿ ಸಮಾಜದಲ್ಲಿ ಉತ್ತಮ ಪ್ರಜೆಯಾಗಬೇಕು ಎಂದರು. ಈ ವೇಳೆ ಸಯ್ಯದಲಿ ಶೇಖ, ತಾಜುದ್ದೀನ ಕಿಂಡ್ರಿ, ಚಮನಸಾಬ್‌ ಹಾದಿಮನಿ, ಮಹ್ಮದರಫೀ ದಲೀಲ, ಹೈದರಲಿ ಖವಾಸ್‌, ಮುನ್ನಾ ಡಾಲಾಯತ, ರಫೀಕ್‌ ಅಕ್ಕಿ, ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಶ್ರೀನಿವಾಸ ಉಮರ್ಜಿ ಹಾಗೂ ಇತರರು ಇದ್ದರು.