ಗ್ರಾಮೀಣ ಕೈಗಾರಿಕೆಗಳನ್ನು ಪ್ರೋತ್ಸಾಹಿಸಿ: ದೇವಮ್ಮ

| Published : Oct 07 2025, 01:02 AM IST

ಸಾರಾಂಶ

ಶೃಂಗೇರಿ, ಪ್ರಾಚೀನ ಕಾಲದಿಂದಲೂ ನಮ್ಮ ಪೂರ್ವಿಕರಿಂದ ಬಳುವಳಿಯಾಗಿ ಬಂದಿರುವ ಗೃಹ, ಕರಕುಶಲ, ಗುಡಿ ಕೈಗಾರಿಕೆಗಳು ಬೆರಳಣಿಯಷ್ಟು ಪ್ರಮಾಣದಲ್ಲಿ ಇಂದಿಗೂ ಉಳಿದುಕೊಂಡು ಬಂದಿದ್ದರೂ, ಪ್ರೋತ್ಸಾಹವಿಲ್ಲದೆ ಅವನತಿಯ ಅಂಚಿಗೆ ತಲುಪುತ್ತಿವೆ. ಇವುಗಳನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಬೇಗಾರು ಪಂಚಾಯಿತಿ ಮಟ್ಟದ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ದೇವಮ್ಮ ಹೇಳಿದರು.

ಬೇಗಾರು ಗ್ರಾಪಂ ಮಟ್ಟದ ಸಂಜೀವಿನಿ ಒಕ್ಕೂಟದ ಮಾಸಿಕ ಸಂತೆ

ಕನ್ನಡಪ್ರಭ ವಾರ್ತೆ, ಶೃಂಗೇರಿ

ಪ್ರಾಚೀನ ಕಾಲದಿಂದಲೂ ನಮ್ಮ ಪೂರ್ವಿಕರಿಂದ ಬಳುವಳಿಯಾಗಿ ಬಂದಿರುವ ಗೃಹ, ಕರಕುಶಲ, ಗುಡಿ ಕೈಗಾರಿಕೆಗಳು ಬೆರಳಣಿಯಷ್ಟು ಪ್ರಮಾಣದಲ್ಲಿ ಇಂದಿಗೂ ಉಳಿದುಕೊಂಡು ಬಂದಿದ್ದರೂ, ಪ್ರೋತ್ಸಾಹವಿಲ್ಲದೆ ಅವನತಿಯ ಅಂಚಿಗೆ ತಲುಪುತ್ತಿವೆ. ಇವುಗಳನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಬೇಗಾರು ಪಂಚಾಯಿತಿ ಮಟ್ಟದ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ದೇವಮ್ಮ ಹೇಳಿದರು.

ತಾಲೂಕಿನ ಬೇಗಾರು ಗ್ರಾಪಂ ಮಟ್ಟದ ಸಂಜೀವಿನಿ ಒಕ್ಕೂಟದ ಮಾಸಿಕ ಸಂತೆ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳ ಉದ್ಘಾಟಿಸಿ ಮಾತನಾಡಿದರು. ಗುಡಿ, ಗೃಹ ಕೈಗಾರಿಕೆಗಳ ಮೂಲಕ ಬುಟ್ಟಿ, ತಟ್ಟಿ, ಗೃಹೋಪಯೋಗಿ ವಸ್ತುಗಳು, ಕೈಮಗ್ಗ ವಸ್ತುಗಳು, ನೇಯುವಿಕೆ, ಆಹಾರ ಪದಾರ್ಥಗಳು, ಸಂಡಿಗೆ ಹಪ್ಪಳ, ವಿವಿಧ ರೀತಿಯ ಸೊಪ್ಪು ತರಕಾರಿಗಳು, ಹಣ್ಣು ಹಂಪಲುಗಳನ್ನು ಖರೀದಿಸಿ ಪ್ರೋತ್ಸಾಹಿಸಬೇಕು.

ಇವುಗಳನ್ನು ಖರೀದಿಸಿ ಬಳಸುವುದರಿಂದ ನಮ್ಮ ಆರೋಗ್ಯಕ್ಕೂ ಒಳ್ಳೆಯದು. ಅದೆಷ್ಟೊ ಕುಟುಂಬಗಳಿಗೆ ಈ ಉದ್ಯೋಗಗಳು ಜೀವನಾಧಾರವಾಗಿದೆ. ಅಂತಹ ಕುಟುಂಬಗಳಿಗೆ ಆದಾಯಗಳಿಸಿಕೊಟ್ಟು ಕುಟುಂಬಗಳ ಜೀವನ ನಿರ್ವಹಣೆಗೆ ಸಹಕರಿಸಿದಂತಾಗುತ್ತದೆ. ಅಲ್ಲದೇ ಗ್ರಾಮೀಣ, ಗೃಹ ಕೈಗಾರಿಕಾ ವಸ್ತುಗಳಿಗೆ ಮಾರುಕಟ್ಟೆ ಮಾಡಿಕೊಡಬೇಕು ಎಂದರು.

ಸಂಘಟನೆಯ ತಾಲೂಕು ವ್ಯವಸ್ಥಾಪಕ ಆದರ್ಶ, ಚೈತ್ರ ವಿನಯ್, ಜಿಪಿಎಲ್ ಎಫ್ ನ ಪದಾಧಿಕಾರಿಗಳಾದ ಪೂರ್ಣಿಮಾ, ಚೇತನಾ,ಶಾಲಸಿನಿ, ಗ್ರಾಪಂ ಉಪಾಧ್ಯಕ್ಷ ಲಕ್ಷಮೀಶ್ ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಗೃಹ, ಗುಡಿ, ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳ ನಡೆಯಿತು.

6 ಶ್ರೀ ಚಿತ್ರ 1-

ಶೃಂಗೇರಿ ಬೇಗಾರಿನಲ್ಲಿ ಸಂಜೀವಿನಿ ಒಕ್ಕೂಟದ ಮಾಸಿಕ ಸಂತೆ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ದೇಲಮ್ಮ ಉದ್ಘಾಟಿಸಿದರು.