ಸರಳ ವಿವಾಹಗಳನ್ನು ಪ್ರೋತ್ಸಾಹಿಸಿ: ಸ್ವಾಮೀಜಿ ‌

| Published : Nov 19 2024, 12:50 AM IST

ಸಾರಾಂಶ

ಮಾಗಡಿ: ಸಮಾಜ ಸೇವಕರು ಸಾಮೂಹಿಕ ವಿವಾಹೋತ್ಸವಗಳನ್ನು ನೆರವೇರಿಸಲು ಮುಂದೆ ಬರಬೇಕಿದೆ ಎಂದು ಕಳ್ಳಿಪಾಳ್ಯದ ಶ್ರೀ ಭಕ್ತ ಮುನೇಶ್ವರಸ್ವಾಮಿ ಶಕ್ತಿ ಪೀಠಾಧ್ಯಕ್ಷರಾದ ಶ್ರೀ ರಂಗನಾಥ ಸ್ವಾಮೀಜಿ ‌ಹೇಳಿದರು.

ಮಾಗಡಿ: ಸಮಾಜ ಸೇವಕರು ಸಾಮೂಹಿಕ ವಿವಾಹೋತ್ಸವಗಳನ್ನು ನೆರವೇರಿಸಲು ಮುಂದೆ ಬರಬೇಕಿದೆ ಎಂದು ಕಳ್ಳಿಪಾಳ್ಯದ ಶ್ರೀ ಭಕ್ತ ಮುನೇಶ್ವರಸ್ವಾಮಿ ಶಕ್ತಿ ಪೀಠಾಧ್ಯಕ್ಷರಾದ ಶ್ರೀ ರಂಗನಾಥ ಸ್ವಾಮೀಜಿ ‌ಹೇಳಿದರು.

ತಾಲೂಕಿನ ಬನಶಂಕರಿ ಫಾರ್ಮ್ ಹೌಸ್‌ ದೊಡ್ಡಯ್ಯನಪಾಳ್ಯ(ಹೊಸಪಾಳ್ಯ) ಸೋಮೇಶ್ವರಸ್ವಾಮಿ ಸರಳ ವಿವಾಹ ವೇದಿಕೆ ಹಾಗೂ ಬಿಜೆಪಿ ಒಬಿಸಿ ರಾಜ್ಯ ಉಪಾಧ್ಯಕ್ಷ ಎ.ಎಚ್.ಬಸವರಾಜು ನೇತೃತ್ವದಲ್ಲಿ ಆಯೋಜಿಸಿದ್ದ ಎರಡು ಜೋಡಿಯ ಸರಳ ವಿವಾಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವ ಗಣ್ಯರು ಸರಳ ವಿವಾಹಗಳಿಗೆ ಪ್ರೋತ್ಸಾಹಿಸಬೇಕು. ಸಾಲಸೋಲ ಮಾಡಿ ಆಡಂಬರದ ವಿವಾಹ ಮಾಡುವ ಬದಲು ಸರಳ ವಿವಾಹಗಳಿಂದ ಎರಡೂ ಕಡೆಯ ಕುಟುಂಬಗಳಿಗೂ ಅನುಕೂಲವಾಗುತ್ತದೆ. ಆಡಂಬರದ ವಿವಾಹದಲ್ಲಿ ಖರ್ಚಾಗುವ ಹಣ ಕುಟುಂಬ ನಿರ್ವಹಣೆಗೆ ಬಳಸಿಕೊಳ್ಳುವ ಮೂಲಕ ಸರಳ ವಿವಾಹಕ್ಕೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.ಬಿಜೆಪಿ ಒಬಿಸಿ ರಾಜ್ಯ ಉಪಾಧ್ಯಕ್ಷ ಎ.ಎಚ್.ಬಸವರಾಜು ಮಾತನಾಡಿ, ತಾಯಿ ಬನಶಂಕರಿ ಸರಳ ವಿವಾಹ ಮಹೋತ್ಸವದ ಅಡಿಯಲ್ಲಿ ಪ್ರತಿ ವರ್ಷವೂ ಬೆಂಗಳೂರಿನ ಬನಶಂಕರಿ ದೇವಸ್ಥಾನದಲ್ಲಿ ಸರಳ ವಿವಾಹಗಳನ್ನು ನೆರವೇರಿಸಲಾಗುತ್ತಿದೆ. ಅಲ್ಲಿಗೆ ಬರಲು ಸಾಧ್ಯವಾಗದ ಕುಟುಂಬಗಳಿಗೆ ಪಟ್ಟಲದಮ್ಮ ದೇವಸ್ಥಾನದಲ್ಲಿ ಸರಳ ವಿವಾಹಗಳನ್ನು ನಡೆಸಲಾಗುತ್ತಿದೆ. ಇಲ್ಲಿಯೂ ಇದುವರೆಗೂ 14 ಜೋಡಿಗಳಿಗೆ ವಿವಾಹ ನೆರವೇರಿಸಿದ್ದೇವೆ. ನವ ದಂಪತಿ ದೇವಿ ಹಾಗೂ ಗುರುಗಳ ಆಶೀರ್ವಾದಿಂದ ನೆಮ್ಮದಿಯ ಜೀವನ ನಡೆಸುತ್ತಿರುವುದು ತುಂಬಾ ಸಂತೋಷ ಎಂದರು.

ಗಂಗಮ್ಮಗೆ ಸನ್ಮಾನ: ಮಾಗಡಿ ಮೂಲದ ಗಂಗಮ್ಮನವರು ನೇಪಾಳದಲ್ಲಿ ಕಮ್ಯುನಿಸ್ಟ್ ಪಕ್ಷದೊಂದಿಗೆ ಈಗಾಗಲೇ ಎರಡು ಬಾರಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದು ಮಾಗಡಿಗೆ ಬಂದಿದ್ದ ಹಿನ್ನೆಲೆಯಲ್ಲಿ ಸರಳ ವಿವಾಹದ ನಂತರ ಎ.ಎಚ್.ಬಸವರಾಜು ಹಾಗೂ ಶ್ರೀಗಳ ಸಮ್ಮುಖದಲ್ಲಿ ಗಂಗಮ್ಮ ಅವರನ್ನು ಸನ್ಮಾನಿಸಲಾಯಿತು.

ಈ ವೇಳೆ ಬಿಜೆಪಿ ತಾಲೂಕು ಅಧ್ಯಕ್ಷ ವೀರಭದ್ರಯ್ಯ, ಮಾಜಿ ಅಧ್ಯಕ್ಷ ಧನಂಜಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ, ಬಿಜೆಪಿ ಮುಖಂಡರಾದ ಮಾರಪ್ಪ, ಹೊಸಪೇಟೆ ಅಂಜು, ಯುವಕ ಮುಖಂಡರಾದ ಡೂಮ್ ಲೈಟ್ ನರಸಿಂಹಮೂರ್ತಿ, ಬೈಚಾಪುರ ಕಿರಣ್, ಕಲ್ಯಾ ಗ್ರಾಪಂ ಸದಸ್ಯ ಶ್ರೀಪತ್ರಿಹಳ್ಳಿ ಕೃಷ್ಣ, ಜಯರಾಂ, ದೊಡ್ಡಿ ಲಕ್ಷ್ಮಣ್, ಕಲ್ಕರೆ ಶಿವಣ್ಣ, ಜೀವಕ ಗಂಗಹನುಮಯ್ಯ, ಚಂದೂರಾಯನಹಳ್ಳಿ ಕೃಷ್ಣ, ದೊಡ್ಡಿ ಗೋಪಿ ಇತರರು ಭಾಗವಹಿಸಿದ್ದರು.

18ಮಾಗಡಿ1 :

ಮಾಗಡಿ ತಾಲೂಕಿನ ದೊಡ್ಡಯ್ಯನಪಾಳ್ಯ ಸೋಮೇಶ್ವರಸ್ವಾಮಿ ಸರಳ ವಿವಾಹ ವೇದಿಕೆ ವತಿಯಿಂದ ಪಟ್ಟಲದಮ್ಮ ದೇವಿ ದೇವಾಲಯದಲ್ಲಿ ಸರಳ ವಿವಾಹ ಮಹೋತ್ಸವಕ್ಕೆ ಕಳ್ಳಿಪಾಳ್ಯ ಶ್ರೀ ಭಕ್ತ ಮುನೇಶ್ವರ ದೇವಸ್ಥಾನದ ಶ್ರೀರಂಗನಾಥ ಸ್ವಾಮೀಜಿ ಚಾಲನೆ ನೀಡಿದರು. ಬಿಜೆಪಿ ಮುಖಂಡ ಬಸವರಾಜು ಇತರರು ಉಪಸ್ಥಿತರಿದ್ದರು.