ವಿದ್ಯಾರ್ಥಿ ಪ್ರತಿಭೆಗೆ ಪ್ರೋತ್ಸಾಹಿಸಿ

| Published : Mar 20 2025, 01:15 AM IST

ಸಾರಾಂಶ

ಪ್ರತಿಭಾನ್ವಿತ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ನಾವೆಲ್ಲರೂ ಸಹಾಯ ಮಾಡಬೇಕು. ಮಕ್ಕಳ ಓದು-ಬರಹಕ್ಕೆ ಪೂರಕವಾಗಿ ಬರವಣಿಗೆ ಸಾಮಗ್ರಿಗಳನ್ನು ವಿತರಿಸಲಾಗುತ್ತಿದೆ

ಗದಗ: ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಗೆ ಪ್ರೋತ್ಸಾಹ ನೀಡಿ ಅವರಿಗೆ ಇನ್ನಷ್ಟು ಸ್ಫೂರ್ತಿ ತುಂಬುವ ಕಾರ್ಯ ಗದುಗಿನ ಜೇಂಟ್ಸ್ ಗ್ರುಫ್ ಆಫ್ ಸಖಿ-ಸಹೇಲಿ ಸಂಘಟನೆಯಿಂದ ನಡೆಯಲಿದೆ ಎಂದು ಅಧ್ಯಕ್ಷೆ ಸುಮಾ ಪಾಟೀಲ ಹೇಳಿದರು.

ಅವರು ಭೇಟಿ ಬಚಾವೋ-ಭೇಟಿ ಪಢಾವೋ ಕಾರ್ಯಕ್ರಮದನ್ವಯ ಗದುಗಿನ ಸರ್ಕಾರಿ ಶಾಲೆ ನಂ.19ರ ಪ್ರತಿಭಾನ್ವಿತ ವಿದ್ಯಾರ್ಥಿನಿ ಸೌಮ್ಯಾ ಸಿದ್ದೀಗೇರಿಗೆ ಸನ್ಮಾನಿಸಿ ಮಾತನಾಡಿದರು.

ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಸಮುದಾಯಗಳು ಕೈ ಜೋಡಿಸಬೇಕು. ಪ್ರತಿಭಾನ್ವಿತ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ನಾವೆಲ್ಲರೂ ಸಹಾಯ ಮಾಡಬೇಕು. ಮಕ್ಕಳ ಓದು-ಬರಹಕ್ಕೆ ಪೂರಕವಾಗಿ ಬರವಣಿಗೆ ಸಾಮಗ್ರಿಗಳನ್ನು ವಿತರಿಸಲಾಗುತ್ತಿದೆ ಎಂದರು.

ಮಾಧುರಿ ಮಾಳೆಕೊಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಬಡ ಹಾಗೂ ಪ್ರತಿಭಾನ್ವಿತ ಮಕ್ಕಳನ್ನು ದತ್ತು ಪಡೆದು ಅವರಿಗೆ ಪ್ರೋತ್ಸಾಹ ನೀಡುವಲ್ಲಿ ನಮ್ಮ ಸಂಘಟನೆಯು ಶ್ರಮಿಸುವುದಾಗಿ ಹೇಳಿದರು.

ಶಶಿಕಲಾ ಮಾಲಿಪಾಟೀಲ ಸ್ವಾಗತಿಸಿದರು. ಜ್ಯೋತಿ ಭರಮಗೌಡ್ರ ವಂದಿಸಿದರು. ಕಾರ್ಯಕ್ರಮದಲ್ಲಿ ಕವಿತಾ ದಂಡಿನ, ಮಂಗಲಾ ಬನ್ನಿಮಟ್ಟಿ, ಅನುರಾಧಾ ಬಸವಾ, ಸಾಗರಿಕಾ ಅಕ್ಕಿ, ನಿರ್ಮಲಾ ಪಾಟೀಲ, ಸುಗ್ಗಲಾ ಯಳಮಲಿ, ರೇಖಾ ರೊಟ್ಟಿ, ಶಾಂತಾದೇವಿ ತುಪ್ಪದ, ಸುಶ್ಮಿತಾ ವೇರ್ಣೆಕರ, ವಿದ್ಯಾ ಶಿವನಗುತ್ತಿ, ಅನುರಾಧಾ ಅಮತ್ಯಾಗೌಡ್ರ, ಮಂಜುಳಾ ಹಪ್ಪಗತ್ತಿ, ಅಶ್ವಿನಿ ಮದಗುಂಡಿ, ಚಂದ್ರಕಲಾ ಸ್ಥಾವರಮಠ, ಪ್ರಿಯಾಂಕಾ ಹಳ್ಳಿ ಸೇರಿದಂತೆ ಅತಿಥಿ ಗಣ್ಯರು ಉಪಸ್ಥಿತರಿದ್ದರು.