ಲಿಂಗಾಯತ ಸಮಾಜದ ರುದ್ರಭೂಮಿ ಅತಿಕ್ರಮಣ

| Published : Oct 19 2024, 12:32 AM IST

ಸಾರಾಂಶ

ಮುಗಳಖೋಡ ಪಟ್ಟಣದ ಲಿಂಗಾಯತ ರುದ್ರಭೂಮಿ ಅತಿಕ್ರಮಣಗೊಂಡಿದ್ದು, ಪುರಸಭೆ ಮುಖ್ಯಾಧಿಕಾರಿಗಳು ಕೂಡಲೇ ತೆರವು ಗೊಳಿಸಬೇಕೆಂದು ರೈತ ಮುಖಂಡ ಸುರೇಶ ಹೊಸಪೇಟೆ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಮುಗಳಖೋಡ

ಪಟ್ಟಣದ ಲಿಂಗಾಯತ ರುದ್ರಭೂಮಿ ಅತಿಕ್ರಮಣಗೊಂಡಿದ್ದು, ಪುರಸಭೆ ಮುಖ್ಯಾಧಿಕಾರಿಗಳು ಕೂಡಲೇ ತೆರವು ಗೊಳಿಸಬೇಕೆಂದು ರೈತ ಮುಖಂಡ ಸುರೇಶ ಹೊಸಪೇಟೆ ಆಗ್ರಹಿಸಿದರು.

ಪಟ್ಟಣದ ಹೃದಯ ಭಾಗದಲ್ಲಿರುವ ಲಿಂಗಾಯತ ಸಮಾಜದ ರುದ್ರಭೂಮಿ 1 ಎಕರೆ 14 ಗುಂಟೆ ಜಮೀನು ಹೊಂದಿದ್ದು, ಕೆಲ ಪಟ್ಟಭದ್ರ ಹಿತಾಸಕ್ತಿಗಳು ಜಾಗ ಅತಿಕ್ರಮಣ ಮಾಡಿದ್ದಾರೆ. ಈ ಬಗ್ಗೆ ರಾಯಬಾಗ ದಿವಾಣಿ ನ್ಯಾಯಾಲಯದಲ್ಲಿ ದಾವೆಯನ್ನೂ ಹೂಡಲಾಗಿದೆ. ಪುರಸಭೆ ಮುಖ್ಯಾಧಿಕಾರಿಗಳು ಹಾಗೂ ಎಂಜಿನಿಯರ್ ಕೆಲ ಪುರಸಭೆ ಸದಸ್ಯರ ಮಾತು ಕೇಳಿ ಲಿಂಗಾಯತರ ರುದ್ರಭೂಮಿಯಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸುತ್ತಿರುವುದು ಖಂಡನೀಯ. ಈಗಾಗಲೇ ಬಸ್ ನಿಲ್ದಾಣ ಅತಿಕ್ರಮಣ ಮಾಡಿ ಕಟ್ಟಡ ನಿರ್ಮಿಸಿದ್ದಾರೆ. ರುದ್ರಭೂಮಿ ಶಿವನ ವಾಸ ಸ್ಥಳವಾಗಿದ್ದು. ಅಲ್ಲಿ ಶೌಚಾಲಯದ ನಿರ್ಮಾಣ ಬೇಡವೆಂದು ತಹಸಿಲ್ದಾರ್, ಉಪ ವಿಭಾಗಾಧಿಕಾರಿ, ಬೆಳಗಾವಿ ಜಿಲ್ಲಾ ನಗರಾಭಿವೃದ್ಧಿ ಯೋಜನಾಧಿಕಾರಿಗೆ ಲಿಖಿತ ದೂರು ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಒಂದು ವೇಳೆ ಶೌಚಾಲಯ ನಿರ್ಮಾಣ ಮಾಡಿದರೆ ಉಗ್ರ ಹೋರಾಟ ಮಾಡುವುದಾಗಿ ಸುರೇಶ ಹೊಸಪೇಟೆ ಎಚ್ಚರಿಸಿದರು.ಭೀಮರಾಯ ಖೇತಗೌಡ , ಭೀಮಪ್ಪ ಖಡಕಬಾವಿ, ಬಸವರಾಜ ಕರಗಾವಿ , ಶಿವಲಿಂಗ ಖಡಕಬಾವಿ, ಶಿವಪ್ಪ ಮುಗಳಿ, ಪರಶುರಾಮ ಮುಗಳಿ ಸಮಾಜದ ಮುಖಂಡರು ಇದ್ದರು. ಕೋಟ್‌......

ಮುಗಳಖೋಡ ಪಟ್ಟಣದ ಲಿಂಗಾಯತ ರುದ್ರಭೂಮಿ ಸರ್ವೇ ಮಾಡುವಂತೆ ರಾಯಬಾಗ ತಹಸೀಲ್ದಾರ್‌ಗೆ ತಿಳಿಸಲಾಗಿತ್ತು. ಅವರು ಸರ್ವೇ ಅಧಿಕಾರಿಗಳಿಗೆ ತಿಳಿಸಿದ್ದರೂ ಸರ್ವೇ ಅಧಿಕಾರಿಗಳು ವಿಳಂಬ ಮಾಡುತ್ತಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಕೂಡಲೇ ಸರ್ವೇ ಮಾಡಿ ಹದ್ದುಬಸ್ತ್ ಹಾಕಿಕೊಡಬೇಕು. ಇಲ್ಲದೇ ಹೋದರೆ ಪುರಸಭೆಯ ಮುಂದೆ ಧರಣಿ ನಡೆಸಲಾಗುವುದು.

-ಸುರೇಶ ಹೊಸಪೇಟಿ ರೈತ ಮುಖಂಡ ಮುಗಳಖೋಡ . 17ಎಂ.ಜಿ.ಕೆ.ಡಿ01

17 ಎಂಜಿಕೆಡಿ ಫೋಟೋ ಶೀರ್ಷಿಕೆ 1 ಎ