ಸ್ವಚ್ಛ ಕಾವೇರಿಗಾಗಿ ನಡೆಯುತ್ತಿರುವ ತಲಕಾವೇರಿ ಪೂಂಪ್ ಹಾರ್ ಕಾವೇರಿ ಜಾಗೃತಿ ರಥಯಾತ್ರೆಯ ಅಖಿಲ ಭಾರತ ಸಾಧು ಸಂತರ ತಂಡ ಕುಶಾಲನಗರದಲ್ಲಿ ಹುಣ್ಣಿಮೆಯ ಅಂಗವಾಗಿ ನಡೆದ 191ನೇಯ ಮಹಾ ಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಆಶ್ರಯದಲ್ಲಿ ಕುಶಾಲನಗರ ಕೊಪ್ಪ ಗಡಿಭಾಗದ ಕಾವೇರಿ ಉದ್ಯಾನವನದಲ್ಲಿ ಏರ್ಪಡಿಸಿದ್ದ ಧಾರ್ಮಿಕ ಸಾಂಸ್ಕೃತಿಕ ಮತ್ತು ಬೆಳದಿಂಗಳ ಊಟ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಕನ್ನಡಪ್ರಭ ವಾರ್ತೆ ಕುಶಾಲನಗರ
ಸ್ವಚ್ಛ ಕಾವೇರಿಗಾಗಿ ನಡೆಯುತ್ತಿರುವ ತಲಕಾವೇರಿ ಪೂಂಪ್ ಹಾರ್ ಕಾವೇರಿ ಜಾಗೃತಿ ರಥಯಾತ್ರೆಯ ಅಖಿಲ ಭಾರತ ಸಾಧು ಸಂತರ ತಂಡ ಕುಶಾಲನಗರದಲ್ಲಿ ಹುಣ್ಣಿಮೆಯ ಅಂಗವಾಗಿ ನಡೆದ 191ನೇಯ ಮಹಾ ಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಆಶ್ರಯದಲ್ಲಿ ಕುಶಾಲನಗರ ಕೊಪ್ಪ ಗಡಿಭಾಗದ ಕಾವೇರಿ ಉದ್ಯಾನವನದಲ್ಲಿ ಏರ್ಪಡಿಸಿದ್ದ ಧಾರ್ಮಿಕ ಸಾಂಸ್ಕೃತಿಕ ಮತ್ತು ಬೆಳದಿಂಗಳ ಊಟ ಕಾರ್ಯಕ್ರಮದಲ್ಲಿ ಭಾಗವಹಿಸಿದರು.ಕೊಡ್ಲಿಪೇಟೆ ಕಿರಿ ಕೊಡ್ಲಿ ಮಠಾಧೀಶ ಶ್ರೀ ಸದಾಶಿವ ಸ್ವಾಮೀಜಿ ಸಾನಿಧ್ಯದಲ್ಲಿ ಕಾವೇರಿ ಆರತಿ ಕ್ಷೇತ್ರದಲ್ಲಿ ನಡೆದ ಮಹಾ ಆರತಿ ಕಾರ್ಯಕ್ರಮದಲ್ಲಿ ಕಾವೇರಿ ಮಾತೆಗೆ ಅಭಿಷೇಕ ಅರ್ಚನೆ ಮತ್ತು ಕುಶಾಲನಗರ ಸಮಸ್ತ ಮಹಿಳಾ ಭಜನಾ ಮಂಡಳಿ ವತಿಯಿಂದ ಭಜನೆ ಹಾಗೂ ಲಲಿತಾ ಸಹಸ್ರನಾಮ ಕಾರ್ಯಕ್ರಮಗಳು ಭಕ್ತಿ ಭಾವಗಳೊಂದಿಗೆ ಜರುಗಿದವು.
ಕಾವೇರಿ ನದಿ ಜಾಗೃತಿ ರಥದಲ್ಲಿ ಪವಿತ್ರ ತೀರ್ಥ ಕಳಶಗಳೊಂದಿಗೆ ತಲಕಾವೇರಿ ಕ್ಷೇತ್ರದಿಂದ ಆಗಮಿಸಿದ ಮಾತೆ ಕಾವೇರಿ ಪ್ರತಿಮೆಗೆ ಅಷ್ಟಾಭಿಷೇಕ ನಂತರ ಕಾವೇರಿ ನದಿಗೆ ಮಹಾ ಆರತಿ ಬೆಳಗಾಯಿತು.ಈ ಸಂದರ್ಭ ಮಾತನಾಡಿದ ಶ್ರೀ ಸದಾಶಿವ ಸ್ವಾಮೀಜಿ, ಅವರು ಪ್ರತಿಯೊಬ್ಬರು ನದಿ ಜಲಮೂಲ ಪ್ರಕೃತಿಯ ಆರಾಧನೆಯಲ್ಲಿ ತೊಡಗಿಸಿಕೊಳ್ಳಬೇಕು. ಆ ಮೂಲಕ ಪ್ರಕೃತಿ ನದಿ ಜಲಮೂಲಗಳನ್ನು ಸಂರಕ್ಷಣೆ ಮಾಡಲು ಸಾಧ್ಯ ಎಂದರು.
ಪ್ರಧಾನ ಅರ್ಚಕ ಶ್ರೀ ಕೃಷ್ಣಮೂರ್ತಿ ಭಟ್ ಅವರ ನೇತೃತ್ವದಲ್ಲಿ ಅಭಿಷೇಕ ಅಷ್ಟೋತ್ತರ ನಂತರ ಆರತಿ ಕಾರ್ಯಕ್ರಮ ನಡೆಯಿತು. ಭಜನಾ ಮಂಡಳಿಯ ಮಹಿಳೆಯರಿಂದ ನದಿ ತಟದಲ್ಲಿ ಭಜನಾ ಕಾರ್ಯಕ್ರಮ ಲಲಿತ ಸಹಸ್ರನಾಮ ಕಾರ್ಯಕ್ರಮಗಳು ನಡೆದವು.ಕಾವೇರಿ ಮಹಾ ಆರತಿ ಬಳಗದ ಸಂಚಾಲಕರಾದ ವನಿತಾ ಅಧ್ಯಕ್ಷತೆಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ರಾಜ್ಯ ಸಂಚಾಲಕ ಎಂ ಎನ್ ಚಂದ್ರಮೋಹನ್, ಹರಿದ್ವಾರ ಅಖಂಡ ಪರಂಧಾಂ ಕ್ಷೇತ್ರದ ಸ್ವಾಮಿ ಅನಂತಾನಂದ ಗಿರಿ. ಜಿ, ಅಖಿಲ ಭಾರತ ಸನ್ಯಾಸಿಗಳ ಸಂಘದ ಕಾರ್ಯಕ್ರಮ ಸಂಯೋಜಕರಾದ ಸ್ವಾಮಿ ಬಾಲ ರಘುನಾಥನಂದ, ಪ್ರಮುಖರಾದ ಶಿವರಾಮಾನಂದ ಸ್ವಾಮೀಜಿ, ಪಾರಂಪರಿಕ ವೈದ್ಯರು ಹಾಗೂ ನಮಾಮಿ ಕಾವೇರಿ ಗೌರವ ಸಲಹೆಗಾರರಾದ ಸುಮನಾ ಮಳಲಗದ್ದೆ, ಹಾಸನ ಜಿಲ್ಲೆಯ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಂಚಾಲಕರಾದ ಎಂ ಎನ್ ಕುಮಾರಸ್ವಾಮಿ, ಕಾವೇರಿ ರಿವರ್ ಸೇವಾ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಮಂಡೆಪಂಡ ಬೋಸ್ ಮೊಣ್ಣಪ್ಪ, ಚೈತನ್ಯ, ಧರಣಿ, ರಾಮನಾಥಪುರ ಆರತಿ ಬಳಗದ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ಜಿಲ್ಲಾ ಅಧ್ಯಕ್ಷರಾದ ಕೊಡಗನ ಹರ್ಷ, ಬಿ ಜೆ ಅಣ್ಣಯ್ಯ ಧರ್ಮಸ್ಥಳ ಕ್ಷೇತ್ರ ಗ್ರಾಮೀಣಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರು ಹಾಗೂ ನಮಾಮಿ ಕಾವೇರಿ ಜಿಲ್ಲಾ ಸಂಚಾಲಕರಾದ ವಿಠಲ ಸಾಲಿಯಾನ್, ಯೋಜನಾಧಿಕಾರಿ ಹನುಮಂತಪ್ಪ ಅಂಗಡಿ ಮೇಲ್ವಿಚಾರಕರಾದ ಸುಧೀರ್ ಆರತಿ ಬಳಗದ ಪ್ರಮುಖರಾದ ಮೋಹನ್ ಪ್ರಸಾದ್, ಶೋಭಾ ಮೋಹನ್ ಮತ್ತು ವಿವಿಧ ಸಮಿತಿಗಳ ಪದಾಧಿಕಾರಿಗಳು ಟ್ರಸ್ಟ್ ಹಾಗೂ ಸದಸ್ಯರು ಮಹಾ ಆರತಿ ಬಳಗದ ಹಾಗೂ ನಮಾಮಿ ಕಾವೇರಿ ಸದಸ್ಯರು, ಕುಶಾಲನಗರ ಸಮಸ್ತ ಮಹಿಳಾ ಭಜನಾ ಮಂಡಳಿಯ ಸದಸ್ಯರು, ಕರ್ನಾಟಕ ರಕ್ಷಣಾ ವೇದಿಕೆಯ ಪ್ರಮುಖರು ಇದ್ದರು.
ಕೊಪ್ಪ ಕಾವೇರಿ ಪ್ರತಿಮೆಗೆ ಭಾರವಿ ಕನ್ನಡ ಸಂಘದ ಆಶ್ರಯದಲ್ಲಿ ಅಭಿಷೇಕ ಮತ್ತು ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು. ಭಕ್ತಾದಿಗಳಿಗೆ ಅನ್ನದಾನ ಏರ್ಪಡಿಸಲಾಗಿತ್ತು. ಸಂಘದ ಪ್ರಮುಖರಾದ ಬಬೀಂದ್ರ ಪ್ರಸಾದ್, ವಿಜಯೇಂದ್ರ ಪ್ರಸಾದ್, ರವೀಂದ್ರ ಪ್ರಸಾದ್ ಮತ್ತು ಇತರರು ಇದ್ದರು.-----------------------------ಚಿತ್ರ ಆರತಿ ಕಾರ್ಯಕ್ರಮ ಸಂದರ್ಭ