ಮಳೆ ನಡುವೆಯೂ ಕುಂದದ ಕಲಾವಿದರ ಉತ್ಸಾಹ- ನಾಡಿನ ಸಾಂಸ್ಕೃತಿಕ, ಕಲೆಗಳ ಪ್ರದರ್ಶನ

| Published : Oct 13 2024, 01:05 AM IST

ಮಳೆ ನಡುವೆಯೂ ಕುಂದದ ಕಲಾವಿದರ ಉತ್ಸಾಹ- ನಾಡಿನ ಸಾಂಸ್ಕೃತಿಕ, ಕಲೆಗಳ ಪ್ರದರ್ಶನ
Share this Article
  • FB
  • TW
  • Linkdin
  • Email

ಸಾರಾಂಶ

ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಗೊರ್ಲೆಕೊಪ್ಪದ ಶ್ರೀ ಕಟ್ಟಿ ಬಸವಲಿಂಗೇಶ್ವರ ಜಾನಪದ ಕಲಾ ಸಂಘದಿಂದ ಕರಡೆ ಮಜಲು, ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕೆಂಪಿಸಿದ್ದನಹುಂಡಿಯ ಶ್ರೀ ಮಲೈ ಮಹದೇಶ್ವರ ಕಂಸಾಳೆ ಕಲಾವಿದರ ಸಂಘ, ವಿದ್ಯಾರಣ್ಯಪುರಂನ ಕಂಸಾಳೆ ಮಹದೇವಯ್ಯ ಕಲಾ ಸಂಘದಿಂದ ಬೀಸು ಕಂಸಾಳೆ, ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ನೀರಮಾನ್ವಿಯ ಲಿಂಗರಾಜು ಡೊಳ್ಳು ಕುರಿತ ಕಲಾವಿದರ ಸಂಘದಿಂದ ಡೊಳ್ಳು ಕುಣಿತ ಕಣ್ಮನ ಸೆಳೆಯಿತು.

ಎಲ್.ಎಸ್. ಶ್ರೀಕಾಂತ್

ಕನ್ನಡಪ್ರಭ ವಾರ್ತೆ ಮೈಸೂರು

ವಿಶ್ಚವಿಖ್ಯಾತ, ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂತಿಮ ದಿನದ ಜಂಬೂಸವಾರಿಯಲ್ಲಿ ಭಾರಿ ಮಳೆಯ ನಡುವೆಯು ವಿವಿಧ ರಾಜ್ಯ ಹಾಗೂ ಜಿಲ್ಲೆಯ ಕಲೆಗಳನ್ನು ಕಲಾವಿದರು ಪ್ರದರ್ಶಿಸಿ, ಲಕ್ಷಾಂತರ ಜನರು ಮನಸೊರೆಗೊಂಡರು.

ನಮ್ಮ ಸಂಸ್ಕೃತಿಯ ಕಲೆಗಳು, ಜಾನಪದ ಶೈಲಿಯ ನೃತ್ಯ, ಕುಣಿತಗಳು, ಲಂಬಾಣಿ ನೃತ್ಯ, ಕೊಡವರ ನೃತ್ಯವನ್ನು ಅರಮನೆಯಲ್ಲಿ ಆವರಣದಿಂದ ಬನ್ನಿಮಂಟಪಕ್ಕೆ ಜಂಬೂಸವಾರಿಯ ಮೆರವಣಿಗೆಯಲ್ಲಿ ಮಳೆಯನ್ನು ಲೆಕ್ಕಿಸದೆ ರಸ್ತೆಯುದ್ದಕ್ಕೂ ಜನರನ್ನು ರಂಜಿಸುತ್ತ ಸಾಗಿದವು.

ಡೊಳ್ಳು, ತಮಟೆ ಮತ್ತು ನಗಾರಿಯ ಶಬ್ದಕ್ಕೆ ಹಲವಾರು ಮಂದಿ ಹೆಜ್ಜೆ ಹಾಕಿದರು.

ಮೊದಲಿಗೆ ಮೈಸೂರಿನ ಅರಮನೆ ಮುಂಭಾಗ ಮಹದೇವಪ್ಪ ಉಡಿಗಾಲ ಹಾಗೂ ಶ್ರೀ ಗುರುಮಲ್ಲೇಶ್ವರ ನಂದೀಧ್ವಜ ಸಂಘದ ಎನ್. ಮಲ್ಲೇಶಯ್ಯ ತಂಡದ ನಂದೀಧ್ವಜಕ್ಕೆ ಸಿಎಂ ಸಿದ್ದರಾಮಯ್ಯ ಅವರು ಪೂಜೆ ಸಲ್ಲಿಸಿ ಮೆರವಣಿಗೆಗೆ ನಾಂದಿ ಹಾಡಿದರು.

ಮೆರವಣಿಗೆಯಲ್ಲಿ 79 ಕಲಾತಂಡಗಳು ಬಾಗಿ

ಈ ಬಾರಿಯ ಆಕರ್ಷಕ ಜಂಬೂ ಸವಾರಿಯಲ್ಲಿ 79 ಕಲಾತಂಡಗಳು ಭಾಗವಹಿಸಿದ್ದು, ವಯೋಮಾನದ ಮಹಿಳೆಯರು, ಪುರುಷರು, ಯುವಕರು ಉತ್ಸಾಹದಿಂದ ಭಾಗವಹಿಸಿ, ಜಂಬೂಸವಾರಿಗೆ ಜೀವ ತುಂಬಿದರು.

ಕೊಂಬು ಕಹಳೆ, ವೀರಭದ್ರ ಕುಣಿತ:

ನಂದೀಧ್ವಜದ ನಂತರ ನಿಶಾನೆ ಆನೆಗಳು ತೆರಳಿದ ನಂತರ ಪ್ರಥಮವಾಗಿ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾರ ತಾಲೂಕಿನ ಬೂದಿತಿಟ್ಟು ಗ್ರಾಮದ ಶ್ರೀ ಬಸವೇಶ್ವರ ಕಲಾ ಬಳಗ ಕೊಂಬು ಕಹಳೆ ಹಾಗೂ ಸರಗೂರು ತಾಲೂಕಿನ ಹಳೆ ಹೆಗ್ಗುಡಿಲು ಕಂದಲಿಕೆ ಹೋಬಳಿಯ ರುದ್ರ ಶ್ರೀ ವೀರಭದ್ರೇಶ್ವರ ನೃತ್ಯ ಕಲಾ ಸಂಘವು ವೀರಭದ್ರ ಕುಣಿತ ಮೆರವಣಿಗೆಗೆ ಮುಂದಡಿ ಇಟ್ಟಿತು.

ನಂತರ ಯಾದಗಿರಿ ಜಿಲ್ಲೆಯ ಸುರುಪುರ ತಾಲೂಕಿನ ಮಂಜಲಾಪುರದ ಶ್ರೀ ಹೈಯ್ಯಳಲಿಂಗೇಶ್ವರ ಡೊಳ್ಳು ಕುಣಿತ ಸಂಘದಿಂದ ಡೊಳ್ಳು ಕುಣಿತ, ಯಾದಗಿರಿ ಜಿಲ್ಲೆಯ ತಾಂಡದ ವಿಶ್ವಾಸಪುರದ ಶ್ರೀ ಮನೋಹರ ಖೇಮುಪವಾರ, ಲಂಬಾಣಿ ನೃತ್ಯ ಕಲಾತಂಡದಿಂದ ಲಂಬಾಣಿ ನೃತ್ಯ, ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಅಮ್ಮತ್ತಿಯ ಶ್ರೀ ಶ್ರೀನಿವಾಸ ಮತ್ತು ತಂಡದಿಂದ ಕೊಡವರ ನೃತ್ಯ, ಕೊಡಗು ಜಿಲ್ಲೆಯ ಸೋಮವಾರಪೇಟೆಯ ತೋಳೂರು ಶೆಟ್ಟಳ್ಳಿಯ ಒಕ್ಕಲಿಗರ ಸುಗ್ಗಿಕುಣಿತ, ಕುಟ್ಟಪ್ಪ ಅವರಿಂದ ಕೊಡವ ಸುಗ್ಗಿ ಕುಣಿತ, ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಸಾ. ಅಮದಿಹಾಳದ ಸ್ರೀ ಕಡೆಪ್ಪಭಜಂತ್ರಿ, ಕಣಿವಾದನ ಜಾನಪದ ಕಲಾತಂಡದಿಂದ ಕಣಿ ವಾದನ, ಮಸ್ಕಿ ತಾಲೂಕಿನ ಹಸಮಕಲ್ ನ ಜಂಬಣ್ಣ ಹಸಮಕಲ್, ಹಗಲು ವೇಷ ಜಾನಪದ ಕಲಾವಿದರಿಂದ ಹಗಲು ವೇಷ ಪ್ರದರ್ಶಿಸಿದರು.

ಚಾಮರಾಜನಗರದ ಗೊರವರ ಕುಣಿತ ಆಕರ್ಷಕ:

ಚಾಮರಾಜನಗರ ತಾಲೂಕಿನ ರಾಮಸಮುದ್ರದ ಶ್ರೀ ಮೈಲಾರಲಿಂಗೇಶ್ವರ ಗೊರವರ ಕುಣಿತ ಯುವಕರ ಕಲಾ ತಂಡ ಹಾಗೂ ಶ್ರೀ ಪರಮೇಶ್ವರ ಜಾನಪದ ಗೊರವರ ಕುಣಿತ ಕಲಾ ಸಂಘದಿಂದ ಗೊರವರ ಕುಣಿತ, ಬನ್ನೂರಿನ ವೀರಭದ್ರೇಶ್ವರ ವೀರಗಾಸೆ ನೃತ್ಯ ತಂಡದಿಂದ ಹಾಗೂ ವರುಣ ಹೋಬಳಿಯ ಕಿರಾಳು ಗ್ರಾಮದ ಶ್ರೀ ಅಭಿನವ ಶೈವ ಕೇಸರಿ ನೃತ್ಯ ಕಲಾ ತಂಡದಿಂದ ವೀರಭದ್ರ ಕುಣಿತ, ಮೈಸೂರಿನ ಇಲವಾಲ ಹೋಬಳಿಯ ಹುಯಿಲಾಳು ಗ್ರಾಮದ ಶ್ರೀ ಮಲ್ಲೇಶ್ವರ ವೀರಮಕ್ಕಳ ಕುಣಿತ ಕಲಾತಂಡ, ಚಾಮರಾಜನಗರ ಜಿಲ್ಲೆಯ ಹೊಗ್ಗೋಠಾರ ಜಿಲ್ಲೆಯ ಶ್ರೀ ಮುದು ಮಾರಮ್ಮ ತಾಯಿ ಕಲಾ ಸಂಘದಿಂದ ವೀರಮಕ್ಕಳ ಕುಣಿತ ಆಕರ್ಷಿತು.

ಲಂಬಾಣಿ ನೃತ್ಯ, ನಂದಿಕೋಲು ಆಕರ್ಷಕ:

ವಿಜಯನಗರದ ಜಿಲ್ಲೆಯ ಹೂವಿನಡಗಲಿ ತಾಲೂಕಿನ ಲಿಂಗನಾಯನಹಳ್ಳಿ ತಾಂಡದ ಲಂಬಾಣಿ ನೃತ್ಯ, ಕೊಟ್ಟೂರು ತಾಲೂಕಿನ ಚಪ್ಪರದಳ್ಳಿಯ ಶ್ರೀ ವೀರಭದ್ರೇಶ್ವರ ಕಲಾ ತಂಡದಿಂದ ನಂದಿಕೋಲು, ಬೆಂಗಳೂರಿನ ಶ್ರೀ ಕೃಷ್ಣ ಜಾನಪದ ನವಿಲು ನೃತ್ಯ ಕಲಾ ತಂಡದಿಂದ ಕಾಕ್ಸ್ಟೌನ್ ನ ನವಿಲು ನೃತ್ಯ, ನಂಜನಗೂಡು ತಾಲೂಕಿನ ತಗಡೂರಿನ ಅಶೋಕ ತಮಟೆ, ಮತ್ತು ನಗಾರಿ ಕಲಾ ತಂಡದಿಂದ ತಮಟೆ ಮತ್ತು ನಗಾರಿ, ಬೀದರ್ ಜಿಲ್ಲೆಯ ಮಾಧವ ನಗರದ ಯೋಗೇಶ್ ಲೋಕೇಶ್ ಪವಾರ್ ಅವರಿಂದ ಲಂಬಾಣಿ ನೃತ್ಯ, ಮೈಸೂರಿನ ಬಂಬೂಬಜಾರ್ ನ ವೈಡ್ ಅಂಡ್ಬ್ಲಾಕ್ ನಾಡಿಕ್ ಡೋಲ್ ತಂಡಿಂದ ನಾಸಿಕ್ ಡೋಲು, ಕೊಪ್ಪಳ ಕುಷ್ಠಗಿ ರಸ್ತೆಯ ಸಿದ್ದೇಶ್ವರನಗರದ ಶ್ರೀ ಮಂಜುನಾಥ ಬುಡಗ ಜಂಗಮ ಹಗಲು ವೇಷ ಕಲಾವಿದರ ಸಂಘದಿಂದ ಹಗಲು ವೇಷ ಆಕರ್ಷಿಸಿತು.

ಕಣ್ಮನ ಸೆಳೆದ ಕರಡೆ ಮಜಲು, ಬೀಸು ಕಂಸಾಳೆ:

ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಗೊರ್ಲೆಕೊಪ್ಪದ ಶ್ರೀ ಕಟ್ಟಿ ಬಸವಲಿಂಗೇಶ್ವರ ಜಾನಪದ ಕಲಾ ಸಂಘದಿಂದ ಕರಡೆ ಮಜಲು, ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕೆಂಪಿಸಿದ್ದನಹುಂಡಿಯ ಶ್ರೀ ಮಲೈ ಮಹದೇಶ್ವರ ಕಂಸಾಳೆ ಕಲಾವಿದರ ಸಂಘ, ವಿದ್ಯಾರಣ್ಯಪುರಂನ ಕಂಸಾಳೆ ಮಹದೇವಯ್ಯ ಕಲಾ ಸಂಘದಿಂದ ಬೀಸು ಕಂಸಾಳೆ, ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ನೀರಮಾನ್ವಿಯ ಲಿಂಗರಾಜು ಡೊಳ್ಳು ಕುರಿತ ಕಲಾವಿದರ ಸಂಘದಿಂದ ಡೊಳ್ಳು ಕುಣಿತ ಕಣ್ಮನ ಸೆಳೆಯಿತು.

ಉಕ ಜಿಲ್ಲೆಯ ಢಕ್ಕೆ ಕುಣಿತ, ಹಾಲಕ್ಕಿ ಸುಗ್ಗಿ ಕುಣಿತಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿ ಹಾಡವಳ್ಳಿಯ ಬುಡಕಟ್ಟು ಗಿರಿಜನ ಗೊಂಡರ ಢಕ್ಕೆ ಕುಣಿತ, ಹೊನ್ನಾವರ ತಾಲೂಕಿನ ಕೋಣಕಾರ ಗ್ರಾಮದ ಹಾಲಕ್ಕಿ ಸುಗ್ಗಿ ಕುಣಿತ ತಂಡದಿಂದ ಹಾಲಕ್ಕಿ ಸುಗ್ಗಿ ಕುಣಿತ ಆಕರ್ಷಿಸಿತು.

ರಾಜಸ್ಥಾನದ ಜಾಗ್ರೀ ನೃತ್ಯ, ಉತ್ತರಖಂಡದ ತಡಿಯಾಚಪ್ಲಾ ನೃತ್ಯ:

ರಾಜಸ್ಥಾನ ಜನಪದ ಕಲಾ ತಂಡದಿಂದ ಜಾಕ್ರೀ ನೃತ್ಯ, ಉತ್ತರಖಂಡದ ಜನಪದ ಕಲಾ ತಂಡದಿಂದ ತಡಿಯಾಚಾಪ್ಲಾ ನೃತ್ಯ ಮನಸೂರೆಗೊಂಡಿತು.

ಹೊನ್ನಾಳಿಯ ಡೊಳ್ಳು ಕುಣಿತ:

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಸುರಹೊನ್ನೆ ಗ್ರಾಮದ ಶ್ರೀ ಬೀರಲಿಂಗೇಶ್ವರ ಯುವಕರ ಸಂಘದಿಂದ ಡೊಳ್ಳು ಕುಣಿತ, ಕೊಲರಾ ಜಿಲ್ಲೆಯ ಸುಳದೇವನಹಳ್ಳಿ ಶ್ರೀ ಮಾರುತಿ ಕಲಾವಿದರ ಸಂಘದಿಂದಗಾರುಡಿ ಗೊಂಬೆ, ಮಂಚಂಡಹಳ್ಳಿಯ ಕೀಲುಕುದುರೆ ತಂಡದಿಂದ ಕೀಲು ಕುದುರೆ, ಮಾಲೂಕು ತಾಲೂಕಿನ ಅಗ್ರಾಹರದ ಈ ಭೂಮಿ ತಮಟೆ ಕಲಾ ತಂಡದಿಂದ ತಮಟೆ ವಾದನ, ಉಡುಪಿಯ ದರ್ಪಟ ಸ್ಕೂಲ್ ಆಫ್ ಪರ್ಫಾರ್ಮಿಂಗ್ಆರ್ಟ್ಸ್ನಿಂದ ಹುಲಿ ವೇಷ, ಮಂದಾರ್ತಿಯ ಶ್ರೀ ಮಲ್ಲಿಕಾರ್ಜುನ ಕುಡುಬಿ ಹೋಳಿ ಜಾನಪದ ಕಲಾಸಮಿತಿಯಂ ಕುಡುಬಿ ನೃತ್ಯ, ಹಿಂಬದಿ ಗ್ರಾಮದ ಶ್ರೀ ನಾರಾಯಣಗುರು ಕಲ್ಯಾಣ ಮಂಟರದ ಚೆಂಡೆವಾದನ, ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹೆಗ್ಗೋಡು ಗ್ರಾದಮ ಶ್ರೀ ಸಿಗಂದೂರೇಶ್ವರಿ ಮಹಿಳಾ ಡೊಳ್ಳು ಜಾನಪದ ಕಲಾ ಟ್ರಸ್ಟ್ನಿಂದ ಡೊಳ್ಳು ಕುಣಿತ, ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಹಕ್ಕಿ-ಪಿಕ್ಕಿ ಬುಡಕಟ್ಟು ಮಹಿಳಾ ನೃತ್ಯ ಕಲಾ ತಂಡದಿಂದ ಹಕ್ಕಿ ಪಿಕ್ಕಿ ನೃತ್ಯ ಮನಸೊರೆಗೊಂಡಿತು.

ಹೂವಿನ ನೃತ್ಯ ಝಾಂಜ್ ಪಥಕ್:

ಬಾಗಲಕೋಟೆ ಜಿಲ್ಲೆಯ ಶಿರೂರ ಗ್ರಾಮದ ಶ್ರೀ ಗಾಜನನ ಯುವಕ ಮಂಡಳ ಕಮ್ಮಾರ ಓಣೆಯ ಹೂವಿನ ನೃತ್ಯ, ಜಮಖಂಡಿ ತಾಲೂಕಿನ ಮಧುರಬಂಡಿ ಗ್ರಾಮದ ಶ್ರೀ ಭಕ್ತ ಕನಕದಾಸ ಝಾಂಜ್ ಪಥಕ ದ ವತಿಯಿಂದ ಝಾಂಜ್ ಪಥಕ್ ನೃತ್ಯ, ಬನಹಟ್ಟಿಯ ತಾಲೂಕಿನ ರಬಕವಿ ಕರಡೆ ಮಜಲು, ಜಮಖಂಡಿ ತಾಲೂಕಿನ ಮಧುರ ಬಂಡಿಯ ಜೈ ಗಣೇಶ ಝಾಂಜ್ ಪಥಕ್ಅವರಿಂದ ಝಾಂಜ್ ಪಥಕ್ ಪ್ರದರ್ಶಿಸಿದರು.

ಮಂಡ್ಯ ಜಿಲ್ಲೆಯ ಮೂಡಲಪಾಯ ಯಕ್ಷಗಾನ ವೇಷ:

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ನೆಲ್ಲಿಗೆರೆಯ ಶ್ರೀ ಕಾಳಿಕಾಂಭದೇವಿ ಪ್ರಸನ್ನದ ಮೂಡಲಪಾಯ ಯಕ್ಷಗಾನವೇಷ, ಝಾಂಜ್ ಪಥಕ್, ಮದ್ದೂರು ತಾಲೂಕಿನ ಗೋಪನಹಳ್ಳಿಯ ಶ್ರೀ ವಿನಾಯಕ ಜಾನಪದ ಕಲಾ ಬಳಗದಿಂದ ದೊಣ್ಣೆ ವರಸೆ ನಡೆಯಿತು.

ಹೀಗೆ ರಾಜ್ಯದ ಹಲವು ಜಿಲ್ಲೆಯ ವಿವಿಧ ಗ್ರಾಮಗಳಿಂದ ಪುರವಂತಿಕೆ, ಪೂಜಾಕುಣಿತ, ಕರಕ ನೃತ್ಯ, ಚೆಂಡೆವಾದನ, ಕೋಲಾ, ಬಂಬಾಣಿ ನೃತ್ಯ ಕೋಳಿ ಕುಣಿತ, ಗೊಂಬೆ ಮೇಳ, ಸತ್ತಿಗೆ ಕುಣಿತ ಹೆಜ್ಜೆಮೇಳ, ಕರಂಗೋಲು, ಕಂಗಿಲು ನೃತ್ಯ, ತಮಟೆ ಮತ್ತು ನಗಾರಿ, ಪೂಜಾ ಕುಣಿತ ಬೀಸು ಕಂಸಾಳೆ, ಮರಗಾಲು, ಜೋಗತಿ ನೃತ್ಯ, ಚಿಟ್ಮೇಳ, ಕತ್ತಿ-ಗುರಾಣಿ, ಅರೆ ವಾದ್ಯ, ಗೇರ್ ನೃತ್ಯ ಎಲ್ಲರನ್ನು ಆಕರ್ಷಿತು.