ಪರಿಸರ ದಿನ ಒಂದು ದಿನಕ್ಕೆ ಸಿಮಿತವಾಗಬಾರದು: ಶಾಂತಾಬಾಯಿ

| Published : Jun 06 2024, 12:30 AM IST

ಪರಿಸರ ದಿನ ಒಂದು ದಿನಕ್ಕೆ ಸಿಮಿತವಾಗಬಾರದು: ಶಾಂತಾಬಾಯಿ
Share this Article
  • FB
  • TW
  • Linkdin
  • Email

ಸಾರಾಂಶ

ನಾವು ಈಗ ಪರಿಸರವನ್ನು ಕಾಪಾಡದಿದ್ದರೆ ಕಾಲಕ್ಕೆ ತಕ್ಕಂತೆ ಮಳೆ ಬರದೆ ಅನಾವೃಷ್ಟಿಗೆ ಕಾರಣವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಗಿಡ- ಮರಗಳನ್ನು ಬೆಳೆಸುವ ಮೂಲಕ ಪರಿಸರ ಸಮತೋಲನಕ್ಕೆ ಆದ್ಯತೆ ನೀಡಬೇಕು.

ಕನ್ನಡಪ್ರಭ ವಾರ್ತೆ ಮಾಗಡಿ

ಒಂದು ದಿನಕ್ಕೆ ಮಾತ್ರ ಪರಿಸರ ದಿನ ಆಚರಿಸಿದರೆ ಪ್ರಯೋಜನವಾಗುವುದಿಲ್ಲ, ತಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಗಿಡ- ಮರಗಳನ್ನು ಪೋಷಿಸುವ ಕೆಲಸ ಆಗಬೇಕಿದೆ ಎಂದು ಬಾಚೇನಹಟ್ಟಿ ಗ್ರಾಪಂ ಅಧ್ಯಕ್ಷೆ ಶಾಂತಾಬಾಯಿ ಹೇಳಿದರು.

ತಾಲೂಕಿನ ಬಾಚೇನಹಳ್ಳಿ ಗ್ರಾಪಂಯಿಂದ ಪರಿಸರ ದಿನಾಚರಣೆ ಅಂಗವಾಗಿ ಸರ್ಕಾರಿ ಪಿಯು ಕಾಲೇಜು ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಾಂಕ್ರೀಟ್ ಯುಗದಲ್ಲಿ ಗಿಡ-ಮರಗಳನ್ನು ಕಡಿಯುತ್ತಿರುವುದರಿಂದ ಪರಿಸರಕ್ಕೆ ಸಾಕಷ್ಟು ತೊಂದರೆಯಾಗುತ್ತಿದೆ, ನಾವು ಈಗ ಪರಿಸರವನ್ನು ಕಾಪಾಡದಿದ್ದರೆ ಕಾಲಕ್ಕೆ ತಕ್ಕಂತೆ ಮಳೆ ಬರದೆ ಅನಾವೃಷ್ಟಿಗೆ ಕಾರಣವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಗಿಡ- ಮರಗಳನ್ನು ಬೆಳೆಸುವ ಮೂಲಕ ಪರಿಸರ ಸಮತೋಲನಕ್ಕೆ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.ಗ್ರಾಪಂ ಪಿಡಿಒ ಪುಟ್ಟರಾಮಯ್ಯ ಮಾತನಾಡಿ, ಪರಿಸರ ದಿನಾಚರಣೆ ಅಂಗವಾಗಿ 35ಕ್ಕೂ ಹೆಚ್ಚು ವಿವಿಧ ಸಸಿಗಳನ್ನು ನೆಟ್ಟು ಪೋಷಿಸಲಾಗುತ್ತಿದೆ ಎಂದು ತಿಳಿಸಿದರು. ತಾಪಂ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಧನಂಜಯ್ಯ ನಾಯಕ್, ಗ್ರಾಪಂ ಸದಸ್ಯರಾದ ಧರ್ಮ ನಾಯಕ್, ಗೋವಿಂದ ನಾಯಕ್, ವಾಟರ್ ಮ್ಯಾನ್ ಗಳಾದ ಕುಮಾರ್, ಉಮೇಶ್, ಲೋಕೇಶ್ ನಾಯಕ್, ಬಿಲ್ ಕಲೆಕ್ಟರ್ ನಾಗರಾಜು, ಕಂಪ್ಯೂಟರ್ ಆಪರೇಟರ್ ಕುಮಾರ್ ಸೇರಿ ಪಿಯು ಕಾಲೇಜಿನ ಪ್ರಾಂಶುಪಾಲರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

-----------

ಪೊಟೋ 5ಮಾಗಡಿ2: ಮಾಗಡಿ ತಾಲೂಕಿನ ಬಾಚೇನಹಟ್ಟಿ ಸರ್ಕಾರಿ ಪಿಯು ಕಾಲೇಜು ಆವರಣದಲ್ಲಿ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮಕ್ಕೆ ತಾಪಂ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಧನಂಜಯ ನಾಯಕ್ ಚಾಲನೆ ನೀಡಿದರು.