ಬಾಶೆಟ್ಟಿಹಳ್ಳಿ ಕೆರೆ ಪಕ್ಕದ ಗೋಡೆ ಮೇಲೆ ಪರಿಸರ ಜಾಗೃತಿ ಚಿತ್ತಾರ

| Published : Feb 10 2025, 01:45 AM IST

ಬಾಶೆಟ್ಟಿಹಳ್ಳಿ ಕೆರೆ ಪಕ್ಕದ ಗೋಡೆ ಮೇಲೆ ಪರಿಸರ ಜಾಗೃತಿ ಚಿತ್ತಾರ
Share this Article
  • FB
  • TW
  • Linkdin
  • Email

ಸಾರಾಂಶ

ದೊಡ್ಡಬಳ್ಳಾಪುರ: ಇಲ್ಲಿನ ಡಬ್ಲ್ಯೂಡಬ್ಲ್ಯೂಎಫ್ ಇಂಡಿಯಾ ಸಂಸ್ಥೆಯ ಯುವ ಉದ್ಯೋಗಿಗಳು ತಾಲೂಕಿನ ಬಾಶೆಟ್ಟಿಹಳ್ಳಿ ಕೆರೆಗೆ ಹೊಂದಿಕೊಂಡಿರುವ ಗೋಡೆ ಮೇಲೆ ಪರಿಸರ ಜಾಗೃತಿ ಮೂಡಿಸುವ ಪರಿಸರ ಮಾಹಿತಿ ಚಿತ್ರಗಳನ್ನು ಬಿಡಿಸಿದರು.

ದೊಡ್ಡಬಳ್ಳಾಪುರ: ಇಲ್ಲಿನ ಡಬ್ಲ್ಯೂಡಬ್ಲ್ಯೂಎಫ್ ಇಂಡಿಯಾ ಸಂಸ್ಥೆಯ ಯುವ ಉದ್ಯೋಗಿಗಳು ತಾಲೂಕಿನ ಬಾಶೆಟ್ಟಿಹಳ್ಳಿ ಕೆರೆಗೆ ಹೊಂದಿಕೊಂಡಿರುವ ಗೋಡೆ ಮೇಲೆ ಪರಿಸರ ಜಾಗೃತಿ ಮೂಡಿಸುವ ಪರಿಸರ ಮಾಹಿತಿ ಚಿತ್ರಗಳನ್ನು ಬಿಡಿಸಿದರು.

ದಾರಿಯಲ್ಲಿ ಹಾದು ಹೋಗುವವರಿಗೆ ಕೆರೆಯ ಸಂರಕ್ಷಣಾ ಮಹತ್ವ ತಿಳಿಸುವ ಉದ್ದೇಶದಿಂದ ಕೆರೆಯ ಜೀವವೈವಿದ್ಯತೆ, ಕೆರೆಗಳ ಮಹತ್ವ, ಕೆರೆಗಳಿಗೆ ಅನುಭವಿಸುತ್ತಿರುವ ತೊಂದರೆಗಳು ಮತ್ತು ಚಿಟ್ಟೆಗಳ ಬಗ್ಗೆ ಚಿತ್ರಗಳನ್ನು ಬಿಡಿಸಲಾಯಿತು.

ಅದೇ ಆವರಣದಲ್ಲಿ ಚಿಟ್ಟೆ ಉದ್ಯಾನ ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.

ಅರ್ಥ್ ಸ್ಟುಡಿಯೋಸ್‌ ಕಲಾವಿದರಾದ ಕೌಶಿಕ್, ಸಾಕ್ಷಿ, ಆಶಾ ಮಾರ್ಗದರ್ಶನದಲ್ಲಿ ಎಚ್ಎಸ್ ಬಿಸಿ 50 ಉದ್ಯೋಗಿಗಳು ಚಿತ್ರ ಬಿಡಿಸಿದರು. ಈ ಸಂದರ್ಭದಲ್ಲಿ ಡಬ್ಲ್ಯೂ ಎಫ್ ಇಂಡಿಯಾ ಸಂಸ್ಥೆಯ ಲೋಹಿತ್ ವೈ ಟಿ, ಶಶಿಕಲಾ ಐಯ್ಯೇರ್, ಡಾ. ಶಾಂತನು ಗುಪ್ತ, ಕಾರ್ತಿಕ್ ಗೌಡ ನವೋದಯ ಚಾರಿಟೆಬಲ್ ಟ್ರಸ್ಟಿನ ಜನಾರ್ಧನ ಆರ್ ಮತ್ತಿತರರಿದ್ದರು.