ಸಾರಾಂಶ
ಭಾರತವು ಭವ್ಯವಾದ ಸಂವಿಧಾನ ಹೊಂದಿದೆ. ಸಂವಿಧಾನದ ಅಡಿಪಾಯ ಸರ್ವರಲ್ಲೂ ಸಮಾನತೆ ತರುವುದೇ ಆಗಿದೆ. ಸಂವಿಧಾನದ ಎಲ್ಲಾ ನಿಯಮಗಳನ್ನು ಪಾಲಿಸಲು ನಾವು ಮುಂದಾಗಬೇಕು. ಸಂವಿಧಾನದಿಂದ ಅನೇಕ ಸೌಲಭ್ಯಗಳು ಸಾಮಾನ್ಯ ವ್ಯಕ್ತಿಗೂ ಸಿಗಲು ಕಾರಣವಾಗಿದೆ ಎಂದು ಬಸವಾಪಟ್ಟಣ ಕೆ.ಪಿ.ಎಸ್ ಶಾಲೆಯ ಶಾಲಾಭಿವೃದ್ದಿ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ನಿರ್ವಾಣೆಗೌಡ ತಿಳಿಸಿದರು.
ಬಸವಾಪಟ್ಟಣ: ಭಾರತವು ಭವ್ಯವಾದ ಸಂವಿಧಾನ ಹೊಂದಿದೆ. ಸಂವಿಧಾನದ ಅಡಿಪಾಯ ಸರ್ವರಲ್ಲೂ ಸಮಾನತೆ ತರುವುದೇ ಆಗಿದೆ. ಸಂವಿಧಾನದ ಎಲ್ಲಾ ನಿಯಮಗಳನ್ನು ಪಾಲಿಸಲು ನಾವು ಮುಂದಾಗಬೇಕು. ಸಂವಿಧಾನದಿಂದ ಅನೇಕ ಸೌಲಭ್ಯಗಳು ಸಾಮಾನ್ಯ ವ್ಯಕ್ತಿಗೂ ಸಿಗಲು ಕಾರಣವಾಗಿದೆ ಎಂದು ಬಸವಾಪಟ್ಟಣ ಕೆ.ಪಿ.ಎಸ್ ಶಾಲೆಯ ಶಾಲಾಭಿವೃದ್ದಿ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ನಿರ್ವಾಣೆಗೌಡ ತಿಳಿಸಿದರು.
೭೬ನೇ ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಸಂವಿಧಾನದ ಮಹತ್ವದ ಕುರಿತು ಮಾತನಾಡಿದರು. ಇದೇ ವೇಳೆ ಕೆ.ಪಿ.ಎಸ್ ಶಾಲೆಯ ಹಿರಿಯ ಶಿಕ್ಷಕರಾದ ಎಸ್.ಬಿ ಚಿದಾನಂದ ಮಾತನಾಡಿ, ವಿಶ್ವದಲ್ಲೇ ಭಾರತದ ಸಂವಿಧಾನ ಭವ್ಯ ಹಾಗೂ ವಿಶಾಲವಾದದ್ದು. ದೇಶದಲ್ಲೆ ವೈವಿಧ್ಯತೆ ಇದೆ. ಏಕತೆಯನ್ನು ಕಾಪಾಡಿಕೊಂಡು ಹೋಗಲಾಗುತ್ತಿದೆ. ಸಮಾಜದಲ್ಲಿ ಅಭಿವೃದ್ಧಿಗಾಗಿ ಶಿಕ್ಷಣ ಪಡೆಯಬೇಕು. ಇದರಿಂದ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ. ಶಿಕ್ಷಣಕ್ಕೆ ಬದಲಾವಣೆಯ ಶಕ್ತಿ ಇದೆ ಎಂದು ತಿಳಿಸಿದರು.ಕೆ.ಪಿ.ಎಸ್ ಶಾಲೆಯ ಉಪಪ್ರಾಂಶುಪಾಲ ಚಂದ್ರಪ್ಪ, ಗ್ರಾಮಪಂಚಾಯ್ತಿ ಮಾಜಿ ಅಧ್ಯಕ್ಷ ಮಹೇಂದ್ರ ಕುಮಾರ್, ಹಿರಿಯ ಪ್ರಾಥಮಿಕ ಶಾಲಾ ವಿಭಾಗದ ಮುಖ್ಯಶಿಕ್ಷಕಿ ಸರಸ್ವತಿ ವಿದ್ಯಾರ್ಥಿಗಳ ದಿನದ ಮಹತ್ವ ಕುರಿತು ಮಾತನಾಡಿದರು. ಗ್ರಾಮಪಂಚಾಯ್ತಿ ಸದಸ್ಯ ಗೀತಾ ಕೆ.ಪಿ.ಎಸ್ ಶಾಲೆಯ ಅತಿಥಿ ಶಿಕ್ಷಕ ಹರೀಶ್ ಕಾರ್ಯಕ್ರಮ ನಿರೂಪಿಸಿದರು. ಕಾಲೇಜು ವಿಭಾಗದ ಪ್ರಾಂಶುಪಾಲ ಹರೀಶ್, ಶಿಕ್ಷಕವರ್ಗ, ಸಾರ್ವಜನಿಕರು, ವಿದ್ಯಾರ್ಥಿಗಳು ಹಾಜರಿದ್ದರು.