ಲಿಂಗಬೇಧ ಬಿಟ್ಟು ಮಕ್ಕಳಿಗೆ ಸಮಾನತೆ ಶಿಕ್ಷಣ ನೀಡಬೇಕು: ಬಿಇಒ ಜಕಣಾಚಾರಿ

| Published : Feb 28 2024, 02:34 AM IST

ಲಿಂಗಬೇಧ ಬಿಟ್ಟು ಮಕ್ಕಳಿಗೆ ಸಮಾನತೆ ಶಿಕ್ಷಣ ನೀಡಬೇಕು: ಬಿಇಒ ಜಕಣಾಚಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಜಾತಿ, ಧರ್ಮ ಹಾಗೂ ಅದಕ್ಕಿಂತ ಮುಖ್ಯವಾಗಿ ಲಿಂಗಬೇಧ ಬಿಟ್ಟು ಮಕ್ಕಳಿಗೆ ಸಮಾನತೆಯೊಂದಿಗೆ ಶಿಕ್ಷಣ ನೀಡಬೇಕು.

ಮುಂಡಗೋಡ:

ಜಾತಿ, ಧರ್ಮ ಹಾಗೂ ಅದಕ್ಕಿಂತ ಮುಖ್ಯವಾಗಿ ಲಿಂಗಬೇಧ ಬಿಟ್ಟು ಮಕ್ಕಳಿಗೆ ಸಮಾನತೆಯೊಂದಿಗೆ ಶಿಕ್ಷಣ ನೀಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಕಣಾಚಾರಿ ಹೇಳಿದರು.

ಮಂಗಳವಾರ ಇಲ್ಲಿಯ ಲೊಯೋಲಾ ವಿಕಾಸ ಕೇಂದ್ರ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ತಾಲೂಕು ಮಟ್ಟದ ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಶಿಕ್ಷಣ ಪ್ರತಿಯೊಬ್ಬರ ಹಕ್ಕು, ಹೆಣ್ಣು ಮಕ್ಕಳು ಶಿಕ್ಷಣ ಪಡೆದರೆ ತಾವೇ ದುಡಿದು ಜೀವಿಸುವ ಸಾಮರ್ಥ್ಯ ಹೊಂದುತ್ತಾರೆ. ಹಾಗಾಗಿ ಪಾಲಕರು ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೂ ಕಡ್ಡಾಯವಾಗಿ ಶಿಕ್ಷಣ ನೀಡಬೇಕು. ಮಕ್ಕಳ ಹಕ್ಕು ಹಾಗೂ ಪೋಕ್ಸೊ ಕಾಯ್ದೆ ಕುರಿತು ಅರಿತುಕೊಂಡರೆ ಸಮಾಜದಲ್ಲಿ ಅಪರಾಧ ಕಡಿಮೆಯಾಗುತ್ತವೆ ಎಂದ ಅವರು, ಅಪಾಯಕಾರಿ ಕೆಲಸಗಳಿಗೆ ಮಕ್ಕಳನ್ನು ಬಳಸಿಕೊಳ್ಳುವಂತಿಲ್ಲ. ಮಕ್ಕಳಿಗೆ ತೊಂದರೆಯಾದರೆ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಮತ್ತು ಕಾರ್ಮಿಕ ಇಲಾಖೆ ಅದರ ಹೊಣೆ ಹೊರಬೇಕಾಗುತ್ತದೆ ಎಂದರು.ವಕೀಲ ರಾಘವೇಂದ್ರ ಮಳಗಿಕರ ಮಾತನಾಡಿ, ಸ್ವಾತಂತ್ರ್ಯ ತೊರೆತು ೭೫ ವರ್ಷ ಕಳೆದರೂ ಸಹ ಇಂದಿಗೂ ಕೆಲವರಲ್ಲಿ ಸಂವಿಧಾನ ಮತ್ತು ಕಾನೂನಿನ ಅರಿವು ಇಲ್ಲ. ಮೊದಲು ಕಾನೂನಿನ ಬಗ್ಗೆ ಅರಿತುಕೊಳ್ಳಬೇಕು. ಸಂವಿಧಾನ ಹಕ್ಕುಗಳೊಂದಿಗೆ ಕರ್ತವ್ಯ ಸಹ ನೀಡಿದೆ. ಕಾನೂನು ಜ್ಞಾನವಿಲ್ಲದಿದ್ದರೂ ಸಾಮಾನ್ಯ ಜ್ಞಾನವನ್ನಾದರೂ ಹೊಂದಿರಬೇಕು ಎಂದು ಹೇಳಿದರು.ಮೋಸ, ವಂಚನೆ ತಡೆಯಲು ಕಾನೂನು ತಿಳಿದುಕೊಳ್ಳದಿದ್ದರೆ ಅನ್ಯಾಯಕ್ಕೆ ಒಳಗಾಗಬೇಕಾಗುತ್ತದೆ. ಬೇರೆಯವರಿಗೆ ಏನಾದರೂ ತಿಳಿವಳಿಕೆ ನೀಡಬೇಕಾದರೂ ಅದರ ಬಗ್ಗೆ ಅರಿತುಕೊಂಡಿರಬೇಕಾಗುತ್ತದೆ. ನಮ್ಮ ಸಂವಿಧಾನ ಸರ್ವ ಧರ್ಮಿಯರ ರಕ್ಷಾ ಕವಚವಾಗಿದೆ ಎಂದರು.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ರೂಪಾ ಅಂಗಡಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಪೋಕ್ಸೋ ಪ್ರಕರಣಗಳು ದಾಖಲಾಗುತ್ತಿರುವುದು ವಿಷಾದನಿಯ ಸಂಗತಿ. ಲಿಂಗಾನುಪಾತ ಕುಸಿತ ತಡೆದು ಹೆಣ್ಣು ಮಕ್ಕಳಿಗೆ ರಕ್ಷಣೆ ಒದಗಿಸುವ ಉದ್ದೇಶದಿಂದ ಬೇಟಿ ಬಜಾವೋ ಬೇಟಿ ಪಡಾವೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಂಬಂಧಿಸಿದ ಎಲ್ಲ ಇಲಾಖೆಗಳು ಸೇರಿಕೊಂಡು ಕೆಲಸ ಮಾಡಿದರೆ ಅಪರಾಧ ತಡೆಯಲು ಸಾಧ್ಯವಿದೆ ಎಂದರು.ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಜಿ.ಎನ್. ನಾಯ್ಕ ಮಾತನಾಡಿ, ಸುತ್ತಮುತ್ತಲಿನ ವಾತಾವರಣ ಉತ್ತಮವಾಗಿರಬೇಕು. ಅನಾಹುತ ನಡೆಯುವ ಮುನ್ನವೇ ಮುಂಜಾಗ್ರತೆ ವಹಿಸಿದರೆ ಅದನ್ನು ತಡೆಯಲು ಸಾಧ್ಯವಿದೆ. ಪಾಲಕರು ಕೂಡ ಮಕ್ಕಳ ಚಲನ-ವಲನಗಳ ಬಗ್ಗೆ ಗಮನಿಸುತ್ತಿರಬೇಕು ಎಂದರು.ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಶೈಲ ಪಟ್ಟಣಶೆಟ್ಟಿ, ದೈಹಿಕ ಶಿಕ್ಷಣ ಪರಿವೀಕ್ಷಕ ವಿಜಯಕುಮಾರ, ಚಿಗಳ್ಳಿ ಗ್ರಾಪಂ ಅಧ್ಯಕ್ಷೆ ಪುಷ್ಪಾ ಗೋಸಾವಿ ಉಪಸ್ಥಿತರಿದ್ದರು.