ಸಾರಾಂಶ
ಕಮತಗಿ ಪಟ್ಟಣದಲ್ಲಿನ ವಿಶ್ವಚೇತನ ಶಾಲೆಯ ಆವರಣದಲ್ಲಿ ಶ್ರೀನಿವಾಸ ಶಿಕ್ಷಣ ಸಂವರ್ಧನ ಸಮಿತಿಯ ವಿಶ್ವಚೇತನ ಕನ್ನಡ ಮಾಧ್ಯಮ ಶಾಲೆ ಹಾಗೂ ಕುಬೇರಪ್ಪ ಚಿತ್ರಗಾರ ಆಂಗ್ಲ ಮಾಧ್ಯಮ ಶಾಲೆ ಮತ್ತು ವಿಶ್ವಚೇತನ ಸೆಕೆಂಡರಿ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕನ್ನಡಪ್ರಭ ವಾರ್ತೆ ಕಮತಗಿ
ಇಂದಿನ ಮಕ್ಕಳು ಭವಿಷ್ಯದ ಉತ್ತರಾಧಿಕಾರಿಗಳು. ಬರೀ ಓದು ಬರಹ ಅಷ್ಟೇ ಶಿಕ್ಷಣವಲ್ಲ, ಇಂದಿನ ಸ್ಪರ್ಧಾತ್ಮಕ ಜಗತ್ತಿಗೆ ಮಕ್ಕಳನ್ನು ಸಜ್ಜುಗೊಳಿಸುವುದು ಶಿಕ್ಷಕರು, ಪಾಲಕರು ಜವಾಬ್ದಾರಿ ಎಂದು ಯುವ ಮುಖಂಡ ಸಂತೋಷ ಹೊಕ್ರಾಣಿ ಹೇಳಿದರು.ಪಟ್ಟಣದಲ್ಲಿನ ವಿಶ್ವಚೇತನ ಶಾಲೆಯ ಆವರಣದಲ್ಲಿ ಶ್ರೀನಿವಾಸ ಶಿಕ್ಷಣ ಸಂವರ್ಧನ ಸಮಿತಿಯ ವಿಶ್ವಚೇತನ ಕನ್ನಡ ಮಾಧ್ಯಮ ಶಾಲೆ ಹಾಗೂ ಕುಬೇರಪ್ಪ ಚಿತ್ರಗಾರ ಆಂಗ್ಲ ಮಾಧ್ಯಮ ಶಾಲೆ ಮತ್ತು ವಿಶ್ವಚೇತನ ಸೆಕೆಂಡರಿ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಮಕ್ಕಳ ಆಸಕ್ತಿಗೆ ಅನುಗುಣವಾಗಿ ಶಿಕ್ಷಕರು, ಪಾಲಕರು ಶಿಕ್ಷಣ ಕೊಡಿಸುವುದರ ಜೊತೆಗೆ ಅವರಿಗೆ 6,7 ಮತ್ತು 8ನೇ ತರಗತಿಯಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗಳಾದ ಐಎಎಸ್, ಕೆಎಎಸ್, ನೆಟ್, ಸೆಟ್ ಕುರಿತು ಬೋಧಿಸುವುದರೊಂದಿಗೆ ತರಬೇತಿ ನೀಡಬೇಕು ಎಂದರು.ಜಿಪಂ ಮಾಜಿ ಅಧ್ಯಕ್ಷೆ ಬಾಯಕ್ಕ ಆರ್. ಮೇಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮೊಬೈಲ್ ಹಾವಳಿಯಿಂದ ಮಕ್ಕಳ ಶೈಕ್ಷಣಿಕ ಮತ್ತು ಮಾನಸಿಕ ಬೆಳವಣಿಗೆಗೆ ಮಾರಕವಾಗಿದ್ದು, ಆದ್ದರಿಂದ ಮಕ್ಕಳನ್ನು ಮೊಬೈಲ್ ಬಳಕೆಯಿಂದ ದೂರ ಇಡುವ ಮೂಲಕ ಪಾಲಕರು ಅವರ ಶೈಕ್ಷಣಿಕ ಪ್ರಗತಿಯತ್ತ ಹೆಚ್ಚು ಗಮನ ಹರಿಸಬೇಕು ಎಂದರು.
ಕಮತಗಿ ಹೊಳೆ ಹುಚ್ಚೇಶ್ವರ ಸ್ವಾಮೀಜಿ, ಕಮತಗಿ ಹಿರೇಮಠದ ಶಿವಕುಮಾರ ಸ್ವಾಮೀಜಿ ಸಾನ್ನಿಧ್ಯ, ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಅಧ್ಯಕ್ಷತೆ, ಪಾರ್ವತಿ ಬ್ಯಾಂಕಿನ ಅಧ್ಯಕ್ಷ ಎಸ್.ಎಸ್. ಮಂಕಣಿ, ಜಿಲ್ಲಾ ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷ ಎನ್.ಎಲ್. ತಹಸೀಲ್ದಾರ್, ಪಪಂ ಮುಖ್ಯಾಧಿಕಾರಿ ಎಫ್.ಎನ್. ಹುಲ್ಲಿಕೇರಿ, ನಿವೃತ್ತ ಉಪನ್ಯಾಸಕ ಆರ್.ಆರ್. ಸಂದಿಮನಿ, ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ವಿ.ಬಿ. ಜೀರಗಿ, ಸಂಸ್ಥೆಯ ಅಧ್ಯಕ್ಷ ಎನ್.ಬಿ. ದೇಶಪಾಂಡೆ, ಉಪಾಧ್ಯಕ್ಷ ಪಿ.ಬಿ. ಬ್ಯಾಳಿ, ಕಾರ್ಯದರ್ಶಿ ನೀಲಪ್ಪ ಲಮಾಣಿ, ಸಂಸ್ಥಾಪಕ ಅಧ್ಯಕ್ಷ ಮಹಾಂತೇಶ ಅಂಗಡಿ, ಆಡಳಿತಾಧಿಕಾರಿ ದಾನೇಶ್ವರಿ ಎಂ. ಅಂಗಡಿ, ಮಾರುತಿ ಚಿತ್ರಗಾರ, ಸಿದ್ದು ಹೊಸಮನಿ, ಶಾಲೆಯ ಮುಖ್ಯಶಿಕ್ಷಕ ಆರ್.ಎನ್. ಕುಣಬೆಂಚಿ, ಎಂ.ಎಚ್. ನದಾಫ್, ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು. ನಂತರ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.