ತಾಲೂಕಿನ ನಗರಳ್ಳಿ ಗ್ರಾಮದ ಕೂತಿನಾಡು ಶ್ರೀ ಸಬ್ಬಮ್ಮ ದೇವಿಯ ದೇವರ ಮನೆ ಪ್ರತಿಷ್ಠಾಪನೆ ಕಾರ್ಯಕ್ರಮ ನಗರಳ್ಳಿಯ ಮೂಲ ದೇವಸ್ಥಾನದ ಬನದಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ತಾಲೂಕಿನ ನಗರಳ್ಳಿ ಗ್ರಾಮದ ಕೂತಿನಾಡು ಶ್ರೀ ಸಬ್ಬಮ್ಮ ದೇವಿಯ ದೇವರ ಮನೆ ಪ್ರತಿಷ್ಠಾಪನೆ ಕಾರ್ಯಕ್ರಮ ನಗರಳ್ಳಿಯ ಮೂಲ ದೇವಸ್ಥಾನದ ಬನದಲ್ಲಿ ನಡೆಯಿತು.ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ದೇವಾಲಯದ ಅರ್ಚಕ ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ ಕಳೆದ ಎರಡು ದಿನದಿಂದ ಹಲವು ಪೂಜಾ ಕಾರ್ಯಕ್ರಮ ನಡೆದಿದ್ದು, ಗುರುವಾರ ಪ್ರತಿಷ್ಠಾಪನೆ, ಬಿಂಬಶುದ್ದಿ, ಕಲಾವೃದ್ಧಿ ಹೋಮ, ಕಲಶ ಸ್ಥಾಪನೆ ಹಾಗೂ ಮಹಾ ಮಂಗಳಾರತಿ ನಡೆಯಿತು.ಶ್ರೀ ಸಬ್ಬಮ್ಮ ದೇವಿಯು ಕೂತಿ, ಯಡದಂಟೆ, ನಗರಳ್ಳಿ, ಕುಂದಳ್ಳಿ, ಹೆಮ್ಮನಗದ್ದೆ, ಕನ್ನಳ್ಳಿ, ಬೇಕನಳ್ಳಿ, ಹಳ್ಳಿಯೂರು, ಬೆಟ್ಟದಳ್ಳಿ, ಬೆಟ್ಟದಕೊಪ್ಪ, ಜಕ್ಕನಳ್ಳಿ, ಇನಕನಳ್ಳಿ, ಕೊತ್ತನಳ್ಳಿ, ಕುಡಿಗಾಣ, ಬೆಂಕಳ್ಳಿ, ಬೀಕಳ್ಳಿ, ನಾಡಳ್ಳಿ, ತಡ್ಡಿಕೊಪ್ಪ ಹಾಗೂ ಸಕಲೇಶಪುರ ತಾಲೂಕಿನ ಓಡಳ್ಳಿ ಗ್ರಾಮಗಳ ಗ್ರಾಮ ದೇವತೆಯಾಗಿದೆ. ಪೂಜಾ ಕಾರ್ಯದಲ್ಲಿ ಭಕ್ತಾದಿಗಳು ಪಾಲ್ಗೊಂಡಿದ್ದರು. ಜೀಣೋದ್ಧಾರ ಸಮಿತಿ ಅಧ್ಯಕ್ಷ ಸಿ.ಎನ್. ಬೋಪ್ಪಯ್ಯ, ಗೌರವ ಅಧ್ಯಕ್ಷ ಕೆ.ಬಿ. ಜಗದೀಶ್, ಕಾರ್ಯದರ್ಶಿ ಕೆ.ಯು. ಜಗದೀಶ್ ಖಜಾಂಚಿ ಎನ್.ಬಿ. ಸುರೇಶ್, ಜಿ.ಆರ್. ಸುರೇಶ್, ಬಿ.ಪಿ. ಪ್ರದೀಪ್ ಕುಮಾರ್, ಎನ್.ಪಿ. ರುದ್ರಪ್ಪ, ಎನ್.ಬಿ. ರಮೇಶ್, ಬಿ.ಎಂ. ಪ್ರಕಾಶ್, ಕೆ.ಕೆ. ರಜಿತ್ ಇದ್ದರು ಈ ಸಂದರ್ಭ ಎಸ್.ಜಿ. ಮೇದಪ್ಪ, ಕೂತಿ ಗ್ರಾಮಧ್ಯಕ್ಷ ಜಯರಾಮ್, ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಕೆ.ಎಂ. ಲೋಕೇಶ್, ಕೂತಿನಾಡು ಶ್ರೀ ಸಬ್ಬಮ್ಮ ದೇವರ ಸಮಿತಿಯ ಮಾಜಿ ಅಧ್ಯಕ್ಷ ಕೆ.ಟಿ. ಜೋಯಪ್ಪ, ದಾನಿಗಳಾದ ಎನ್.ಎಂ. ಚಂದ್ರಶೇಖರ್, ಕೆ.ಟಿ. ನಂದೀಶ್, ಕೃಷ್ಣ, ಪ್ರಕಾಶ್ ಇದ್ದರು.