ಹಿಂದು ಧರ್ಮ ರಕ್ಷಣೆಗಾಗಿ ವಿಹಿಂಪ ಸ್ಥಾಪನೆ

| Published : Sep 05 2024, 02:18 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಚಿಕ್ಕೋಡಿ ಹಿಂದು ಧರ್ಮದ ರಕ್ಷಣೆ ಹಾಗೂ ಸಂವರ್ಧನೆಗಾಗಿ ವಿಶ್ವ ಹಿಂದು ಪರಿಷತ್‌ನ್ನು 60 ವರ್ಷಗಳ ಹಿಂದೆ ಸ್ಥಾಪಿಸಿದ್ದಾಗಿ ಕನ್ಹೇರಿ, ಕೊಲ್ಲಾಪೂರ ಜಗದ್ಗುರು ಸಿದ್ಧಸಂಸ್ಥಾನ ಮಠದ ಅದೃಶ್ಯ ಕಾಡಸಿದ್ದೇಶ್ವರ ಶ್ರೀ ಹೇಳಿದರು. ಚಿಕ್ಕೋಡಿ ತಾಲೂಕಿನ ತೋರನಹಳ್ಳಿ ಗ್ರಾಮದಲ್ಲಿ ವಿಶ್ವ ಹಿಂದು ಪರಿಷತ್ ಚಿಕ್ಕೋಡಿ ಜಿಲ್ಲೆ ಆಯೋಜಿಸಿದ್ದ ಶಷ್ಠಾಬ್ದಿ ಧರ್ಮಾಚಾರ್ಯ ಸಂಪರ್ಕವಿಭಾಗ, ಮಠ ಮಂದಿರ, ವಯಂ ಅರ್ಚಕ ಪುರೋಹಿತ ಸಂಪರ್ಕ ಆಯಾಮ ಗೋರಕ್ಷಾ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿರು.

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ಹಿಂದು ಧರ್ಮದ ರಕ್ಷಣೆ ಹಾಗೂ ಸಂವರ್ಧನೆಗಾಗಿ ವಿಶ್ವ ಹಿಂದು ಪರಿಷತ್‌ನ್ನು 60 ವರ್ಷಗಳ ಹಿಂದೆ ಸ್ಥಾಪಿಸಿದ್ದಾಗಿ ಕನ್ಹೇರಿ, ಕೊಲ್ಲಾಪೂರ ಜಗದ್ಗುರು ಸಿದ್ಧಸಂಸ್ಥಾನ ಮಠದ ಅದೃಶ್ಯ ಕಾಡಸಿದ್ದೇಶ್ವರ ಶ್ರೀ ಹೇಳಿದರು. ಚಿಕ್ಕೋಡಿ ತಾಲೂಕಿನ ತೋರನಹಳ್ಳಿ ಗ್ರಾಮದಲ್ಲಿ ವಿಶ್ವ ಹಿಂದು ಪರಿಷತ್ ಚಿಕ್ಕೋಡಿ ಜಿಲ್ಲೆ ಆಯೋಜಿಸಿದ್ದ ಶಷ್ಠಾಬ್ದಿ ಧರ್ಮಾಚಾರ್ಯ ಸಂಪರ್ಕವಿಭಾಗ, ಮಠ ಮಂದಿರ, ವಯಂ ಅರ್ಚಕ ಪುರೋಹಿತ ಸಂಪರ್ಕ ಆಯಾಮ ಗೋರಕ್ಷಾ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿರು. ವಿಶ್ವ ಹಿಂದು ಪರಿಷತ್ ಸ್ಥಾಪಿಸಿ 60 ವರ್ಷಗಳು ಗತಿಸಿವೆ. ಹಿಂದೆ ಗೋಲ್ವಾಲ್ಕರ್‌ ಗುರೂಜಿ, ಸ್ವಾಮೀ ಚಿನ್ಮಯಾನಂದ ಗುರೂಜಿ, ಪೇಶಾವರ ಸ್ವಾಮೀಜಿ ಸೇರಿದಂತೆ ನೂರಾರು ಮಠಾಧೀಶರು ವಿಶ್ವ ಹಿಂದು ಪರಿಷತ್‌ ನ್ನು ಸ್ಥಾಪಿಸಿದರು ಎಂದರು.

ಸನಾತನ ಧರ್ಮದ ಜಾಗೃತಿಗಾಗಿ ಬೇರೆ ಬೇರೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿಶ್ವ ಹಿಂದು ಪರಿಷತ್‌ ಅರವತ್ತನೇ ವರ್ಷದ ಆಚರಣೆ ಮಾಡುತ್ತಿದ್ದೇವೆ. ಹಿಂದು ಧರ್ಮದ ಮೇಲಾಗುತ್ತಿರುವ ಆಕ್ರಮಣಗಳನ್ನು ತಡೆಯಲು ದೇವಾಲಯಗಳು ಇನ್ನಷ್ಟು ಸುಂದರವಾಗಬೇಕು. ಸಂಸ್ಕಾರ ಕೇಂದ್ರಗಳಾಗಿಸುವ ನಿಟ್ಟಿನಲ್ಲಿ ಅರ್ಚಕರಿಗೆ ತರಬೇತಿ ನೀಡುವುದನ್ನು ಮಾಡಿಕೊಂಡು ಬರಲಾಗಿದೆ. ದೇವಾಲಯಗಳನ್ನು ಬಾಲಸಂಸ್ಕಾರ ಕೇಂದ್ರಗಳನ್ನಾಗಿ ಮಾಡುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಬಹಳಷ್ಟು ಆಯಾಮಗಳಿವೆ. ಧರ್ಮಕಾರ್ಯ ಮಾಡಲು ಒಂದು ಆಯಾಮವಿದ್ರೆ. ಸಾಮಾಜಿಕ ಕಾರ್ಯಗಳನ್ನು ಮಾಡಲು ಆಧ್ಯಾತ್ಮ ಆಯಾಮಗಳಿವೆ, ರಾಜನೀತಿ ಆಯಾಮಗಳಿವೆ. ಈ ಎಲ್ಲ ಆಯಾಮಗಳಲ್ಲಿ ಧರ್ಮಕ್ಕಾಗಿ ಇರುವ ಪ್ರಕಲ್ಪವೇ ವಿಶ್ವಹಿಂದು ಪರಿಷತ್. ಸನಾತನ ಧರ್ಮದ ಉಳಿಸುವ, ಬೆಳೆಸುವ ಹಾಗೂ ಗಟ್ಟಿಮುಟ್ಟಾಗಿ ಮಾಡುವ ಸಲುವಾಗಿ ಎಲ್ಲ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಹೇಳಿದರು.ಕಲಬುರ್ಗಿಯ ವಿ.ಹಿ ಪ್ರಾಂತೀಯ ಅಧ್ಯಕ್ಷ, ಲಿಂಗರಾಜಪ್ಪ ಅಧ್ಯಕ್ಷತೆ ವಹಿಸಿದ್ದರು. ವಿ.ಹಿ.ಪ್ರಾ. ಕ್ಷೇತ್ರ ಮಠ, ಮಂದಿರ, ವಯಂ ಆಚಾರ್ಜಕ ಪುರೋಹಿತ, ಸಂಪರ್ಕ ಮುಖ್ಯಸ್ಥರು ಬಸವರಾಜ, ಹುಬ್ಬಳ್ಳಿಯ ವಿ.ಹಿ.ಪ್ರಾ ಪ್ರಾಂತೀಯ ಉಪಾಧ್ಯಕ್ಷ ಗೋವರ್ಧನ ರವಾಜಿ, ಶಿವುಕುಮಾರ ಬೋಳಶೆಟ್ಟಿ, ಶ್ರೀಮಾರ್ತಾಂಡ ಶಾಸ್ತ್ರಿ, ಪ್ರದೀಪ ಶೆಟ್ಟಿ ಡಾ.ಆರ್.ಕೆ.ಬಾಗಿ, ವೆಂಕಟೇಶ ದೇಶಪಾಂಡೆ, ವಿಠಲಜಿ, ಶಾಸಕ ಡಿ.ಎಂ.ಐಹೊಳೆ, ಮಹೇಶ ಭಾತೆ, ಸತೀಶ ಅಪ್ಪಾಜಿಗೋಳ, ಬಿ.ಡಿ.ನಸಲಾಪೂರೆ, ಬಸವರಾಜ ಮಾಳಗೆ, ಸುದಾಮ ಖಾಡ ಉಪಸ್ಥಿತರಿದ್ದರು.ಚಿತ್ರ 4ಸಿಕೆಡಿ4

ಚಿಕ್ಕೋಡಿ ತಾಲೂಕಿನ ತೋರಣಹಳ್ಳಿ ಗ್ರಾಮದ ಜಾಗೃತ ಹನುಮ ದೇವಸ್ಥಾನದ ಆವರಣದಲ್ಲಿ ವಿಶ್ವಹಿಂದು ಪರಿ?ತ್ ಚಿಕ್ಕೋಡಿ ಜಿಲ್ಲೆ ಆಯೋಜಿಸಿದ ??್ಠಾಬ್ದಿ, ಧರ್ಮಾಚಾರ್ಯ ಸಂಪರ್ಕವಿಭಾಗ, ಮಠ ಮಂದಿರ, ವಯಂ ಅರ್ಚಕ ಪುರೋಹಿತ ಸಂಪರ್ಕ ಆಯಾಮ ಗೋರಕ್ಷಾ ಆಯಾಮಗಳ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಕನ್ಹೇರಿ ಅದೃಶ್ಯಕಾಡಸಿದ್ದೇಶ್ವರ ಮಹಾಸ್ವಾಮಿಜೀ ಮಾತನಾಡಿದರು.ಕೋಟ್‌ರೈತ. ರೈತನ ಆತ್ಮ ಕೃಷಿ. ಕೃಷಿ ಸಾವಯುವದತ್ತ ಸಾಗಬೇಕಾದರೆ ಪ್ರತಿಯೊಂದು ಮನೆಯಲ್ಲಿ ಹಸು ಸಾಕಣೆ ಮಾಡಬೇಕು. ಗೋವುಗಳ ಉತ್ಪನ್ನಗಳನ್ನು ಮನೆಮನೆಗಳಿಗೆ ತಲುಪಿಸಿ ರೋಗ ಮುಕ್ತ ಸಮಾಜವನ್ನು ನಿರ್ಮಾಣ ಮಾಡಬೇಕು.ಅದೃಶ್ಯಕಾಡಸಿದ್ದೇಶ್ವರ ಶ್ರೀ, ಕನ್ಹೇರಿ ಮಠ