ಬೇಸಿಗೆ ಸಂಭ್ರಮ-16 ಸಮಾರೋಫ ಸಮಾರಂಭ

ಕನ್ನಡಪ್ರಭ ವಾರ್ತೆ, ತರೀಕೆರೆ

ಪ್ರತಿಯೊಂದು ಮಗುವಿನಲ್ಲೂ ಇರುವ ಒಂದು ವಿಶೇಷತೆ ಗುರುತಿಸುವ ವ್ಯವದಾನ ಪೋಷಕರು ಹಾಗೂ ಶಾಲಾ ಶಿಕ್ಷಕರಲ್ಲೂ ಇದ್ದರೆ ಮಕ್ಕಳನ್ನು ಒಳ್ಳೆಯ ಪ್ರಜೆಗಳನ್ನಾಗಿ ಬೆಳಸಬಹುದು ಎಂದು ಪ್ರಕೃತಿಶ್ರೀ ಕಲಾ ಕುಟೀರ ಅಧ್ಯಕ್ಷೆ ಉಮಾ ಪ್ರಕಾಶ್ ಹೇಳಿದ್ದಾರೆ.ಪ್ರಕೃತಿಶ್ರೀ ಕಲಾ ಕುಟೀರದ ಬೇಸಿಗೆ ಸಂಭ್ರಮ-16 ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಮಕ್ಕಳೇ ನಾಟಕದ ವಸ್ತು ಸಂಭಾಷಣೆ, ಎಲ್ಲವನ್ನು ಸ್ವತಃ ಮಾಡಲು ಹೇಳುವುದು ಈ ಶಿಬಿರದ ವಿಶೇಷತೆ. ಮಕ್ಕಳಿಗೆ ನಾವು ಹೇಳಿ ಕೊಟ್ಟು ಮಾಡಿಸಿದರೆ ಅವರಿಗೆ ಸ್ವಂತ ಯೋಚನೆ ಮಾಡುವುದು ಕಡಿಮೆ ಅವರ ಅದ್ಭುತ ಕಲ್ಪನಾ ಶಕ್ತಿ ಇಲ್ಲಿ ಗೊತ್ತಾಗುತ್ತದೆ ಎಂದು ಹೇಳಿದರು,

ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತರಾದ ಕಮಲಮ್ಮ ಮಾತನಾಡಿ, ಶಿಬಿರಗಳು ಮಕ್ಕಳ ಅಭಿರುಚಿ, ಆಸಕ್ತಿ ಬೆಳೆಸಲು ಸಹಕಾರಿ. ಮುಂದೆ ಆದನ್ನು ಪೋಷಿಸಿ ಬೆಳಸುವ ಜವಾಬ್ದಾರಿ ಪೋಷಕರ ದ್ದಾಗಿರುತ್ತದೆ ಎಂದು ಹೇಳಿದರು.ಮಮತ ಮಹಿಳಾ ಸಮಾಜ ಅಧ್ಯಕ್ಷೆ ಸಹನಾ ರಾಘವೇಂದ್ರ ಮಾತನಾಡಿ ಸತತ 16 ವರ್ಷಗಳಿಂದ ಮಕ್ಕಳ ವ್ಯಕ್ತಿತ್ವ ವಿಕಸನ ಶಿಬಿರ ನಡೆಸುತ್ತಿರುವ ಪ್ರಕೃತಿಶ್ರೀ ಕಲಾ ಕುಟೀರ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಗಮನ ಕೊಡುತ್ತಿದೆ ಎಂದರು. ಮಕ್ಕಳು ಶಿಬಿರದಲ್ಲಿ ಕಲಿತ ಶ್ಲೋಕಗಳು, ಲಘು ವ್ಯಾಯಾಮ, ಹಾಡು, ನೃತ್ಯ, ನಾಟಕಗಳನ್ನು ಪ್ರದರ್ಶಿಸಿದರು. ಶಿಬಿರದಲ್ಲಿ ಕಲಿತ ಕರಕುಶಲ ವಸ್ತುಪ್ರದರ್ಶನದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಶ್ರೀ ಶಾರದ ಸಭಾ ಭವನ ಅಡಳಿತಾದಿಕಾರಿ ಕೃಷ್ಣಮೂರ್ತಿ, ಮಂಜುನಾಥ್, ಟಿ.ಎಸ್. ಟಿ.ಆರ್.ಪ್ರಕಾಶ್, ಟಿ.ಪಿ.ತೇಜಸ್ವಿ, ಗಾಯಿತ್ರಿ ದಳವಾಯಿ, ಮೇಘನಾ ಟಿ.ಎಚ್. ವಿಷ್ಣು ಆರ್. ಗಂಡಿಕೋಟೆ, ಶಕುಂತಲಾ ದಾನಪ್ಪ, ಮೀನಾ ಚಿತ್ರಾಸೇನ್. ಸಂಸ್ಕೃತಿ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


ಅತ್ಯುತ್ತಮ ಶಿಬಿರಾರ್ಥಿಗಳಾಗಿ ಹಿರಿಯರ ವಿಭಾಗದಲ್ಲಿ ನಂದನ ಎಂ. ಆರ್. ಕಿರಿಯರ ವಿಭಾಗದಲ್ಲಿ ಮೇಧಾ ಪ್ರಿಯ, ಎಳೆಯರ ವಿಭಾಗದಲ್ಲಿ ರಾಶಿ ರಾಣಿ ಘೋಷಿಸಲ್ಪಟ್ಟರು.---

15ಕೆಟಿಆರಕ್.ಕೆ.1ಃ ತರೀಕೆರೆಯಲ್ಲಿ ಪ್ರಕೃತಿಶ್ರೀ ಕಲಾ ಕುಟೀರದಿಂದ ನಡೆದ ಬೇಸಿಗೆ ಸಂಭ್ರಮ ಸಮಾರೋಪ ಸಮಾರಂಭದಲ್ಲಿ ಕುಟೀರ ಅಧ್ಯಕ್ಷೆ ಉಮಾ ಪ್ರಕಾಶ್, ಮಮತಾ ಮಹಿಳಾ ಸಮಾಜ ಅಧ್ಯಕ್ಷೆ ಸಹನಾ ರಾಘವೇಂದ್ರ, ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತೆ ಕಮಲಮ್ಮ ಮತ್ತಿತರರು ಇದ್ದರು.