, ಚಾಮರಾಜನಗರ ಜಿಲ್ಲೆಯ ವತಿಯಿಂದ ಪರಿಶುದ್ಧ ಪ್ರಜ್ಞೆ ನಡಿಗೆ ಒಂದು ಯಾತ್ರೆಯನ್ನು ಕೈಗೊಳ್ಳಲಾಗಿದೆ. ಅಂತಾರಾಷ್ಟ್ರೀಯ ಬೌದ್ಧ ಸಮ್ಮೇಳನಕ್ಕೆ ಪೂರ್ವಭಾವಿಯಾಗಿ ಎಲ್ಲ ಸಿದ್ದತೆಗಳು ಆಗಬೇಕು. ಭಾರತ ಒಂದು ಬೌದ್ಧ ಭವ್ಯ ಪರಂಪರೆ, ಅಶೋಕ ಸಾಮ್ರಾಜ್ಯ ಸುಖಿರಾಜ್ಯದ ಪರಿಕಲ್ಪನೆ ವಿಶ್ವದಲ್ಲಿ ಪಸರಿಸಬೇಕು. ಪ್ರಪಂಚದಲ್ಲೇ ಬುದ್ಧ, ಅಶೋಕ ಅವರಿಬ್ಬರು ಮಾತ್ರ ಮಹಾಪುರುಷರು. ಮೂರನೆಯವರು ಡಾ.ಬಿ.ಆರ್.ಅಂಬೇಡ್ಕರ್ ಅವರು. ಅವರು 1956 ಅಕ್ಟೋಬರ್ 14ರಲ್ಲಿ ಭೌದ್ಧ ಧರ್ಮ ಸ್ವೀಕಾರ ಮಾಡಿದ್ದಾರೆ ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಅಂತಾರಾಷ್ಟ್ರೀಯ ಬೌದ್ಧ ಸಮ್ಮೇಳನ ನಿಮಿತ್ತವಾಗಿ ಅಂತಾರಾಷ್ಟ್ರೀಯ ಬೌದ್ಧ ಮಹಾಸಮ್ಮೇಳನ ಸಮಿತಿ, ಬಿಕ್ಕು ಸಂಘ, ಭಾರತೀಯ ಬೌದ್ಧ ಮಹಾಸಭಾದ ವತಿಯಿಂದ ಹಮ್ಮಿಕೊಂಡಿರುವ ಧಮ್ಮ ಪಯಣ ಜಾಗೃತಿ ಜಾಥಾ ಟ್ಯಾಬ್ಲೋಗಳಿಗೆ ಬೌದ್ಧ ಬಿಕ್ಕುಗಳು, ಶಾಸಕ ಎ.ಆರ್.ಕೃಷ್ಣಮೂರ್ತಿ

ಚಾಲನೆ ನೀಡಿದರು.

ನಂತರ ರಾಮಸಮುದ್ರ ಗ್ರಾಮದ ಅಂಬೇಡ್ಕರ್ ಪ್ರತಿಮೆಗೆ ಪುಷ್ಷಾರ್ಚನೆ ಮಾಡಿ ಮಾತನಾಡಿದ ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಅಕ್ಟೋಬರ್ 24 ಮತ್ತು 25ರಂದು ನಡೆಯುವ ವಿಶ್ವ ಬೌದ್ಧ ಸಮ್ಮೇಳನ ಪ್ರಯುಕ್ತವಾಗಿ ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರವಾರು ಬುದ್ಧ, ಅಂಬೇಡ್ಕರ್ ಟ್ಯಾಬ್ಲೋಗಳಿಗೆ ಚಾಲನೆ ನೀಡಲಾಗಿದೆ. ಬೌದ್ಧ ಸಮ್ಮೇಳನಕ್ಕೆ 50ದಿನಗಳು ಮಾತ್ರ ಬಾಕಿ ಉಳಿದಿದೆ. ತಾವೆಲ್ಲರೂ ಹೆಚ್ಚಿನ ರೀತಿಯಲ್ಲಿ ಸಹಕರಿಸಿ ಧಮ್ಮದಾನ ಮಾಡುವ ಮುಖಾಂತರ ಸಮ್ಮೇಳನ ಯಶಸ್ವಿಯಾಗಲು ಸಹಕರಿಸಬೇಕು ಎಂದು ಮನವಿ ಮಾಡಿದರು.ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರದ ಪ್ರತಿಗ್ರಾಮಕ್ಕೂ ಪಯಣ ಮಾಡಿ ಸಮ್ಮೇಳನಕ್ಕೆ ಗ್ರಾಮದ ಯಜಮಾನರು, ಮುಖಂಡರು, ಸಮುದಾಯದ ಜನರು, ಅಂಬೇಡ್ಕ‌ರ್ ಸಂಘಟನೆ ಅಧ್ಯಕ್ಷರು, ಪದಾಧಿಕಾರಿಗಳನ್ನು ಆಹ್ವಾನ ಮಾಡುವುದು ಧಮ್ಮ ಪಯಣದ ಉದ್ದೇಶವಾಗಿದೆ. ಪ್ರತಿ ರಾತ್ರಿ ಆಯಾ ಗ್ರಾಮಗಳಲ್ಲಿ ವಾಸ್ತವ್ಯ ಮಾಡುತ್ತಾರೆ. ಗ್ರಾಮಸ್ಥರು ಮೊಂಬತ್ತಿ ಮೆರವಣಿಗೆಯೊಂದಿಗೆ ಸ್ವಾಗತ ಮಾಡಿ ತಮ್ಮ ತನುಮನ, ಧನ ಅರ್ಪಿಸುವ ಮೂಲಕ ಸಮ್ಮೇಳನ ಯಶಸ್ಸಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.ಸಾನ್ನಿಧ್ಯ ವಹಿಸಿದ್ದ ಕೊಳ್ಳೇಗಾಲ ಜೇತವನ ವಿಹಾರದ ಬೌದ್ಧಬಿಕ್ಕು ಮನೋರಕ್ಷಿತ ಬಂತೇಜಿ ಮಾತನಾಡಿ, ಚಾಮರಾಜನಗರ ಜಿಲ್ಲೆಯ ವತಿಯಿಂದ ಪರಿಶುದ್ಧ ಪ್ರಜ್ಞೆ ನಡಿಗೆ ಒಂದು ಯಾತ್ರೆಯನ್ನು ಕೈಗೊಳ್ಳಲಾಗಿದೆ. ಅಂತಾರಾಷ್ಟ್ರೀಯ ಬೌದ್ಧ ಸಮ್ಮೇಳನಕ್ಕೆ ಪೂರ್ವಭಾವಿಯಾಗಿ ಎಲ್ಲ ಸಿದ್ದತೆಗಳು ಆಗಬೇಕು. ಭಾರತ ಒಂದು ಬೌದ್ಧ ಭವ್ಯ ಪರಂಪರೆ, ಅಶೋಕ ಸಾಮ್ರಾಜ್ಯ ಸುಖಿರಾಜ್ಯದ ಪರಿಕಲ್ಪನೆ ವಿಶ್ವದಲ್ಲಿ ಪಸರಿಸಬೇಕು. ಪ್ರಪಂಚದಲ್ಲೇ ಬುದ್ಧ, ಅಶೋಕ ಅವರಿಬ್ಬರು ಮಾತ್ರ ಮಹಾಪುರುಷರು. ಮೂರನೆಯವರು ಡಾ.ಬಿ.ಆರ್.ಅಂಬೇಡ್ಕರ್ ಅವರು. ಅವರು 1956 ಅಕ್ಟೋಬರ್ 14ರಲ್ಲಿ ಭೌದ್ಧ ಧರ್ಮ ಸ್ವೀಕಾರ ಮಾಡಿದ್ದಾರೆ. ಭಾರತದಲ್ಲಿ ಬಡತನ ನಿರ್ಮೂಲನೆ ಆಗಬೇಕು. ಅನಕ್ಷರತೆ ನಿವಾರಣೆ ಆಗಬೇಕು. ದೇವಾಲಯ ತೀರ್ಥಯಾತ್ರೆಗೆ ಹೋಗುವ ಬದಲುಜನಸಾಮಾನ್ಯರ ಹೃದಯ ಅಂತರಾಳಕ್ಕೆ ಧರ್ಮವನ್ನು ಕೊಂಡೊಯ್ಯುವ ಕೆಲಸ ಆಗಬೇಕು. ಬುದ್ಧನ ಪಂಚಶೀಲ ಪಾಲನೆ ಮಾಡಿ ಸುಖಿರಾಜ್ಯ ಕಟ್ಟೋಣ ಎಂದು ಸಲಹೆ ಮಾಡಿದರು.

ತಿ.ನರಸೀಪುರದ ಭೌಧಿರತ್ನಬಂತೇಜಿ ಸಾನಿಧ್ಯ ವಹಿಸಿದ್ದರು. ಸ್ವಾಗತ ಸಮಿತಿ ಜಿಲ್ಲಾ ಸಂಚಾಲಕ ವೆಂಕಟರಮಣಸ್ವಾಮಿ ಪಾಪು, ಸಹ ಸಂಚಾಲಕ ಶಿವಮಲ್ಲು, ಪ್ರಚಾರ ಸಮಿತಿ ಜಿಲ್ಲಾ ಸಂಚಾಲಕ ಸಿ.ಎಂ. ಕೃಷ್ಣಮೂರ್ತಿ, ಬಿಎಸ್‌ಐ ಜಿಲ್ಲಾಧ್ಯಕ್ಷ ಆ‌ರ್. ಬಸವರಾಜು, ಜಿ.ಪಂ.ಮಾಜಿ ಸದಸ್ಯರಾದ ಅಯ್ಯನಪುರ ಶಿವಕುಮಾರ್, ಕಮಲ್, ತಾ.ಪಂ. ಮಾಜಿ ಅಧ್ಯಕ್ಷ ಆರ್.ಮಹದೇವು, ಕೆಸ್ತೂರು ಸಿದ್ದರಾಜು, ನಿವೃತ್ತ ಅಧಿಕಾರಿ ಸಿದ್ದರಾಜು, ಸುಭಾಷ್ ಮಾಡ್ರಳ್ಳಿ,

ಸಿ.ಎಂ.ನರಸಿಂಹಮೂರ್ತಿ, ಎನ್.ನಾಗಯ್ಯ, ಸಿ.ಕೆ.ಮಂಜುನಾಥ್, ಹೊಸಹಳ್ಳಿ ಮಧುಸೂದನ್, ಕೆಂಪರಾಜು, ರಾಮಸಮುದ್ರ ನಾಗರಾಜು, ಎಂ.ಮಹೇಶ್, ಕಾಗಲವಾಡಿ ಶಿವಸ್ವಾಮಿ, ಕಾಗಲವಾಡಿ ಚಂದ್ರು, ಸಾಹಿತಿ ಕೋಡಿ ಉಗನೆ ಮಂಜು, ಮೂಡ್ನಾಕೂಡು ಪ್ರಕಾಶ್, ನಲ್ಲೂರು ಮಹಾದೇವಸ್ವಾಮಿ, ಕುಮಾರಸ್ವಾಮಿ, ಕಂದಹಳ್ಳಿ ನಂಜುಂಡಸ್ವಾಮಿ, ಸಿದ್ದಯ್ಯನಪುರ ಗೋವಿಂದರಾಜು, ವಾಸು, ಅಕ್ಷಯ್, ಯರಿಯೂರು ರಾಜಣ್ಣ, ನಗರಸಭಾ ಮಾಜಿ ಅಧ್ಯಕ್ಷೆ ಚಿನ್ನಮ್ಮ, ಸಾಹಿತಿ ಸೋಮಶೇಖರ್ ಬಿಸಲವಾಡಿ, ಮಾಡ್ರಳ್ಳಿ ಸುಭಾಷ್, ಬಾಬು, ಹೊಂಗನೂರು ಪುಟ್ಟಸ್ವಾಮಿ, ನಾಗಶಿಲ್ಪ ಉಮೇಶ್,

ಪುಷ್ಷಾಮರಿಸ್ವಾಮಿ, ಸುಶೀಲ, ಯಶೋಧರ, ಶಾಂತಲಕ್ಷ್ಮೀ, ಶಾಂತಮ್ಮ, ಪಾರ್ವತಮ್ಮ, ಹಾಗೂ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರದ ಕಟ್ಟೆಮನೆ, ಗಡಿಮನೆ, ಗ್ರಾಮಗಳ ಯಜಮಾನರು, ಡಾ.ಬಿ.ಆರ್.ಅಂಬೇಡ್ಕರ್ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಬುದ್ಧ ವಿಹಾರದ ಉಪಾಸಕರು, ಅಂಬೇಡ್ಕ‌ರ್, ಬುದ್ಧರ ಅನುಯಾಯಿಗಳು ಭಾಗವಹಿಸಿದ್ದರು.--------

3ಸಿಎಚ್ಎನ್‌9

ಅಂತಾರಾಷ್ಟ್ರೀಯ ಬೌದ್ಧ ಸಮ್ಮೇಳನ ನಿಮಿತ್ತವಾಗಿ ಹಮ್ಮಿಕೊಂಡಿರುವ ಧಮ್ಮ ಪಯಣ ಜಾಗೃತಿ ಜಾಥಾ ಟ್ಯಾಬ್ಲೋಗಳಿಗೆ ಬೌದ್ಧ ಬಿಕ್ಕುಗಳು, ಶಾಸಕ ಎ.ಆರ್.ಕೃಷ್ಣಮೂರ್ತಿ ಚಾಲನೆ ನೀಡಿದರು.