ಸಾರಾಂಶ
ಕನ್ನಡಪ್ರಭ ವಾರ್ತೆ ಹುಮನಾಬಾದ್
ಮನೆಗೊಂದು ಮರ, ಊರಿಗೊಂದು ವನ ಎಂಬ ನಾಣ್ನುಡಿಯಂತೆ ಪ್ರತಿಯೊಬ್ಬರೂ ಮರಗಿಡ ಬೆಳೆಸುವ ಪ್ರಾಮಾಣಿಕ ಪ್ರಜ್ಞೆ ಮೆರೆಯಬೇಕೆಂದು ಹಿರೇಮಠ ಸಂಸ್ಥಾನದ ರೇಣುಕ ವೀರ ಗಂಗಾಧರ ಶಿವಾಚಾರ್ಯ ಹೇಳಿದರುಅವರು ಪಟ್ಟಣದ ವೀರಭದ್ರೇಶ್ವರ ದೇವಸ್ಥಾನ ಮುಂಭಾಗ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಭರವಸೆ ಬೆಳಕು ಜನ ಸೇವಾ ಟ್ರಸ್ಟ್ ಹಾಗೂ ಸಾನ್ವಿ ಮೆಲೋಡಿ ಆರ್ಕೆಸ್ಟ್ರಾ ಹುಮನಾಬಾದ ವತಿಯಿಂದ ಆಯೋಜಿಸಿದ ಪ್ರತಿ ಮನೆಗೊಂದು ಮರ, ಲಕ್ಷ ವೃಕ್ಷ ಕಾರ್ಯಕ್ರಮದಡಿಯಲ್ಲಿ ಗಿಡ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿ, ಆಧುನಿಕತೆ ನಾಗಾಲೋಟದಲ್ಲಿ ಬೆಳೆಯುತ್ತಿರುವ ಜನಸಂಖ್ಯೆ ಬೇಡಿಕೆ ಪೊರೈಸಲು ಪರಿಸರ ವಿನಾಶದ ಅಂಚಿಗೆ ತಲುಪಿದೆ.
ಇದರಿಂದ ದಿನದಿನಕ್ಕೆ ಮಳೆ ಪ್ರಮಾಣ ಕ್ಷೀಣಿಸುತ್ತಿದೆ. ಇಂದಿನ ವಿದ್ಯಾರ್ಥಿಗಳು, ಯುವಕರು, ತಮ್ಮ ಮನೆ ಸುತ್ತ ಮುತ್ತಲಿನ ಪ್ರದೇಶದಲ್ಲಿ ಈಗಲಾದರೂ ಎಚ್ಚೆತ್ತುಕೊಂಡು ಮರಗಿಡ ಕಡಿದು ನಾಶ ಮಾಡುವುದರಿಂದ ಪ್ರಕೃತಿಯಲ್ಲಿ ಉಂಟಾಗುವ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸುವುದಕ್ಕೆ ಮುಂದಾಗಬೇಕು ಎಂದು ಸಲಹೆ ನೀಡಿದರು.ಡಿವೈಎಸ್ಪಿ ಜೆ.ಎಸ್ ನ್ಯಾಮೇಗೌಡರ್ ಮಾತನಾಡಿ, ಇಂದಿನ ಯುವಕರು ಪರಿಸರ ಉಳಿವಿಗಾಗಿ ಗಿಡ ಬೆಳೆಸಿ, ಕಾಡು ಸಂರಕ್ಷಿಸಿದರೆ ಮುಂದಿನ ದಿನಗಳಲ್ಲಿ ಅವು ನಮ್ಮನ್ನು ರಕ್ಷಿಸುತ್ತವೆ. ಪ್ರತಿಯೊಬ್ಬರೂ ಪ್ರಕೃತಿ ವಿರುದ್ಧ ಸಮರ ಸಾರದೆ ಅದರ ಜತೆಯಲ್ಲಿ ಸಾಗಬೇಕು ಎಂದು ತಿಳಿಸಿದರು.
ಬಳಿಕ ಭರವಸೆ ಬೆಳಕು ಜನ ಸೇವಾ ಟ್ರಸ್ಟ್ ಹಾಗೂ ಸಾಕ್ಷಿ ಹಿರೇಮಠ, ರೇವಣಸಿದ್ದಯ್ಯ ಹಿರೇಮಠ ಪಟ್ಟಣದ ಪ್ರಮುಖ ಮಾರ್ಗಗಳಲ್ಲಿರುವ ಅಂಗಡಿ ಮಾಲಿಕರಿಗೆ ಗೀಡಗಳನ್ನು ನೀಡಿ ಅದನ್ನು ತಮ್ಮ ಮನೆ ಮಗುವಿನಂತೆ ಬೆಳೆಸಿ ಪೋಷಿಸುವಂತೆ ಜಾಗೃತಿ ಮೂಡಿಸಿದರು.ಕೆ.ಎಂಎಫ್ ನಿರ್ದೇಶಕ ರೇವಣಸಿದ್ದಪ್ಪ ಪಾಟೀಲ್, ಉದ್ಯಮಿ ದತ್ತಕುಮಾರ ಚಿದ್ರಿ, ಪಿಎಲ್‌ಡಿ ಬ್ಯಾಂಕ ಅಧ್ಯಕ್ಷ ಮಲ್ಲಿಕಾರ್ಜುನ ಮಾಳಶಟ್ಟಿ, ಶ್ರೀರಾಮ್ ಸೇನೆಯ ಅಧ್ಯಕ್ಷ ಗುರುಸ್ವಾಮಿ. ಜ್ಯೋತಿಬಾ ಸಾಟೆ, ಶಿವಕುಮಾರ್. ಪರಮೇಶ್ವರ್ ಅರವಿಂದ್ ಜೋಗಿರೆ ಸೇರಿದಂತೆ ಅನೇಕರಿದ್ದರು.