ಪ್ರತಿಯೊಬ್ಬರಲ್ಲಿಯು ಯೋಗ್ಯತೆ ಅನುಗುಣವಾದ ಶಕ್ತಿ ಇದೆ: ಶ್ರೀ

| Published : Mar 18 2024, 01:47 AM IST

ಪ್ರತಿಯೊಬ್ಬರಲ್ಲಿಯು ಯೋಗ್ಯತೆ ಅನುಗುಣವಾದ ಶಕ್ತಿ ಇದೆ: ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಶಹಾಪುರ ನಗರಕ್ಕೆ ಕಾರ್ಯಕ್ರಮಕ್ಕೆಂದು ಆಗಮಿಸಿದ್ದ ಶ್ರೀಮದಾರ್ಯ ಅಕ್ಷೋಭ್ಯ ತೀರ್ಥ ಮೂಲ ಸಂಸ್ಥಾನ ಬಾಳಗಾರು ಮಠದ ಶ್ರೀ ಅಕ್ಷೋಭ್ಯ ರಾಮಪ್ರಿಯ ಶ್ರೀಪಾದರು ಆಶೀರ್ವಚನ ನೀಡಿದರು.

ಕನ್ನಡಪ್ರಭ ವಾರ್ತೆ ಶಹಾಪುರ

ಭಗವಂತ ಪ್ರತಿಯೊಬ್ಬರಿಗೂ ಅವರವರ ಯೋಗ್ಯತೆಗೆ ಅನುಗುಣವಾಗಿ ಶಕ್ತಿ ಕೊಟ್ಟಿದ್ದಾನೆ. ಸಾಧನಾ ಶರೀರ ಸಾಮಾನ್ಯವಲ್ಲ, ಸಾಧಾರಣವೂ ಅಲ್ಲ. ಅದರಲ್ಲಿ ಅಪಾರ ಶಕ್ತಿ ಇದ್ದು, ಸರ್ವರೂ ಅದರ ಸದುಪಯೋಗ ಪಡೆದುಕೊಂಡು ಸನ್ಮಾರ್ಗದಿಂದ ಸತತವಾಗಿ ವಿಹಿತ ಕರ್ಮ ಮಾಡುವ ಮೂಲಕ ಅಂತಃ ಸತ್ವ ಬೆಳೆಸಿಕೊಂಡು ಮುನ್ನಡೆಯಬೇಕು ಎಂದು ಶ್ರೀ ಅಕ್ಷೋಭ್ಯತೀರ್ಥ ಮೂಲ ಸಂಸ್ಥಾನ ಬಾಳಗಾರು ಮಠದ ಶ್ರೀಅಕ್ಷೋಭ್ಯ ರಾಮಪ್ರಿಯತೀರ್ಥರು ಹೇಳಿದರು.

ನಗರದ ಹಳಪೇಟೆ ಮಲ್ಹಾರಾವ ದೇಶಪಾಂಡೆ ಮನೆಗೆ ಆಗಮಿಸಿದ್ದ ವೇಳೆ ಸರ್ವ ಹಳಪೇಟೆ ಭಕ್ತರನ್ನುದ್ದೇಶಿಸಿ ಆಶೀರ್ವಚನ ನೀಡಿದ ಪೂಜ್ಯರು, ಪ್ರತಿಯೊಬ್ಬರು ನ್ಯಾಯದಿಂದ, ಭಕ್ತಿಯಿಂದ, ಸನ್ಮಾರ್ಗದಿಂದ ಜೀವನ ಸಾಗಿದರೆ ಭಾರತ ಅಷ್ಟೇ ಅಲ್ಲ. ಇಡೀ ವಿಶ್ವವೇ ಸುಂದರವಾಗಲು ಸಾಧ್ಯವಿದೆ ಎಂದರು.

ಪ್ರತಿಯೊಂದು ಸಾಮಾಜಿಕ ಕಾರ್ಯಗಳು ಭಗವಂತನ ಪೂಜೆಯೆಂದು ಭಾವಿಸಿರಿ. ಪ್ರತಿಯೊಬ್ಬರಲ್ಲಿ ಸ್ವಾರ್ಥ, ಅಹಂಕಾರ, ಮಮಕಾರಾದಿಗಳು ದೂರವಾದಲ್ಲಿ ಮಾಡುವ ಸಾಧನೆಯು ಸಫಲವಾಗುತ್ತದೆ. ಜೀವನದಲ್ಲಿ ಅಡ್ಡಿಯಾಗುವ ದೋಷ ನಿವಾರಿಸಿಕೊಂಡು, ಶುದ್ಧ ಅಂತಃಕರಣದಿ ಶ್ರೀಹರಿಯ ಸೇವೆ ಮಾಡುವುದರಿಂದ ಗುಣಪೂರ್ಣನಾದ ಭಗವಂತನ ಅನುಗ್ರಹ ನಿಶ್ಚಿತ. ಈ ದಿಸೆಯಲ್ಲಿ ಹಳಪೇಟೆ ಸದ್ಭಕ್ತರು ಭಾರತೀಯ ಸಂಸ್ಕೃತಿ ಸಂಪ್ರದಾಯಗಳ ಪಾಲನೆ ಮಾಡುತ್ತಿದ್ದು, ಶ್ರೀ ಗುರು ಕಾರುಣ್ಯ ಅವರೆಲ್ಲರಿಗೂ ಲಭಿಸಲಿ ಎಂದರು.

ಈ ವೇಳೆ ವಿಶೇಷವಾಗಿ ಪಾದಪೂಜೆ ಕಾರ್ಯಕ್ರಮ ಜರುಗಿತು. ಪ್ರಮುಖರಾದ ಎಸ್.ವಿ. ದೇಸಾಯಿ, ಹಯವದನಾಚಾರ್ಯ, ಶ್ರೀಗಿರಿ ಆಚಾರ್ಯ, ಗೋಪಾಲದಾಸರು, ಶಾಂತಮೂರ್ತಿ, ಓಣಿಯ ಕೊನೇರಾಚಾರ್ಯ ಸಗರ, ನರಸಿಂಹಾಚಾರ್ಯ ರೊಟ್ಟಿ, ಭೀಮಸೇನರಾವ ಶಿರವಾಳ, ಶ್ಯಾಮರಾವ ಬೂದುನೂರ, ಗುಂಡೇರಾವ ದೇಶಪಾಂಡೆ, ಧೀರೇಂದ್ರ ಭಕ್ರಿ, ಮುರಳಿಧರ ಕುಲಕರ್ಣಿ, ಗುರುರಾಜ ದೇಶಪಾಂಡೆ ಸೇರಿ ಶ್ರೀಲಕ್ಷ್ಮಿ ಚಂದ್ರಲಾಂಬ ಮಹಿಳಾ ಭಜನಾ ಮಂಡಳಿಯ ಸದಸ್ಯರು, ಪಾಲ್ಗೊಂಡಿದ್ದರು.