ಜನಪದ ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ: ಡಾ.ಗುರುಪಾದ ಮರಿಗುದ್ದಿ

| Published : Sep 30 2024, 01:23 AM IST

ಸಾರಾಂಶ

ಸಂಸ್ಕೃತಿಯ ಮೂಲವಾದ ಜನಪದವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಸಂಕೇಶ್ವರದ ಹಿರಿಯ ಸಾಹಿತಿ ಡಾ.ಗುರುಪಾದ ಮರಿಗುದ್ದಿ ಹೇಳಿದರು.

ಕನ್ನಡಪ್ರಭ ವಾರ್ತೆ ಗೋಕಾಕ

ಸಂಸ್ಕೃತಿಯ ಮೂಲವಾದ ಜನಪದವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಸಂಕೇಶ್ವರದ ಹಿರಿಯ ಸಾಹಿತಿ ಡಾ.ಗುರುಪಾದ ಮರಿಗುದ್ದಿ ಹೇಳಿದರು.

ಭಾನುವಾರ ನಗರದ ಶ್ರೀ ರಾಮಲಿಂಗೇಶ್ವರ ಸಭಾಂಗಣದಲ್ಲಿ ಚುಟುಕು ಸಾಹಿತ್ಯ ಪರಿಷತ್‌ ಗೋಕಾಕ ಘಟಕ ಹಾಗೂ ಗೋಕಾವಿ ಗೆಳೆಯರ ಬಳಗದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಲೇಖಕರ ಸಮ್ಮಿಲನ, ಉಪನ್ಯಾಸ, ಕಾವ್ಯಗೋಷ್ಠಿ ಹಾಗೂ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಬರಹ ಎಂದರೆ ಸಂಸ್ಕೃತಿ ಆಸ್ವಾದನೆ, ದೇಸಿ ಸಂಸ್ಕೃತಿ ಪೋಷಿಸೋಣ. ಜನಪದದಲ್ಲಿ ಸುಕ್ಷ್ಮ ತತ್ವಜ್ಞಾನವಿದೆ. ಸಂವೇದನಶೀಲ ಬರಹ ಸಾಹಿತಿಗಳಿಂದ ಮೂಡಿ ಬರಲಿ. ಕಾವ್ಯ ಮೇಳದಲ್ಲಿ ಮನಸುಗಳು ಸಮ್ಮಿಲನಗೊಳ್ಳಲಿ. ಕಲೆ, ಸಾಹಿತ್ಯ, ಸಂಸ್ಕೃತಿಯಿಂದ ಗೋಕಾವಿ ನಾಡು ಸಮೃದ್ಧವಾಗಿದೆ. ಹಲವಾರು ಮಹಾನ ಸಾಹಿತಿಗಳನ್ನು ನೀಡಿ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದೆ. ಯುವ ಪೀಳಿಗೆಯಲ್ಲಿ ನಮ್ಮ ಕಲೆ, ಸಾಹಿತ್ಯ, ಸಂಸ್ಕೃತಿಯ ಅರಿವು ಮೂಢಿಸಿ ನಮ್ಮ ಪರಂಪರೆ ಮುಂದುವರಿಸಲು ಎಲ್ಲರೂ ಶ್ರಮಿಸೋಣ ಎಂದರು.

ದತ್ತಿ ನಿಧಿ ಪ್ರಶಸ್ತಿ ವಿಭೂಷಿತ ಸಾಹಿತಿ ಈಶ್ವರ ಮಮದಾಪೂರ ಹಾಗೂ ಛಾಯಾಶ್ರೀ ರಾಜ್ಯ ಪ್ರಶಸ್ತಿ ಪುರಸ್ಲೃತ ಬಿ.ಪ್ರಭಾಕರ(ಪ್ರವೀಣ) ಅವರನ್ನು ಕನ್ನಡ ಸಾಹಿತ್ಯ ಪರಿಷತ್‌ ಹಾಗೂ ಗೋಕಾವಿ ಗೆಳೆಯರ ಬಳಗ, ಚುಟುಕು ಸಾಹಿತ್ಯ ಪರಿಷತ್‌ ವತಿಯಿಂದ ಸತ್ಕರಿಸಲಾಯಿತು.

ಅತಿಥಿಗಳಾದ ಅಶೋಕ ಲಗಮಪ್ಪಗೋಳ, ಎಂ.ಐ. ಜೋತಾವರ, ಮಹಾಂತೇಶ ತಾಂವಶಿ, ಭಾರತಿ ಮದಭಾಂವಿ, ಶಕುಂತಲಾ ಹಿರೇಮಠ, ಡಾ.ಲಕ್ಷ್ಮಣ ಚೌರಿ, ವೈ.ಎಲ್. ಪಾಟೀಲ, ಜಯಾನಂದ ಮಾದರ ಇದ್ದರು.ಶಂಕರ ಕ್ಯಾಸ್ತಿ ಸ್ವಾಗತಿಸಿದರು. ಆನಂದ ಸೋರಗಾಂವಿ ನಿರೂಪಿಸಿದರು. ಆನಂದ ಮಾಳೋದೆ ವಂದಿಸಿದರು.