ಸಾರಾಂಶ
ದೃಶ್ಯ ಮಾಧ್ಯಮಗಳಿಗಿಂತ ಮೊದಲು ಜನರು ಮನರಂಜನೆಗಾಗಿ ನಾಟಕ ನೋಡುವ ಹವ್ಯಾಸ ಇಟ್ಟುಕೊಂಡಿದ್ದರು. ಮೊಬೈಲ್ ಮತ್ತು ಟಿ.ವಿ ಪ್ರಭಾವ ಹೆಚ್ಚಾಗಿ ಈಗ ನಾಟಕ ನೋಡುವವರು ಕಡಿಮೆಯಾಗಿದ್ದಾರೆ. ನಾಟಕಗಳನ್ನು ನೋಡುವುದರಿಂದ ರಂಗಭೂಮಿ ಕಲೆ ಉಳಿಯುತ್ತದೆ.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಗ್ರಾಮೀಣ ಪ್ರದೇಶಗಳಲ್ಲಿರುವ ನಮ್ಮ ಸಂಸ್ಕೃತಿಯನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಎಂದು ರಾಜ್ಯ ಆರ್‌ಟಿಒ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್ ಅಭಿಪ್ರಾಯಪಟ್ಟರು.ತಾಲೂಕಿನ ಕುಪ್ಪಹಳ್ಳಿಯಲ್ಲಿ ಶ್ರೀಬಸವೇಶ್ವರ ಕೃಪಾಪೋಷಿತ ನಾಟಕ ಮಂಡಳಿಯಿಂದ ಪಿತೃಪಕ್ಷ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ಸಂಕ್ಷಿಪ್ತ ಮಹಾಭಾರತ ಅಥವಾ ಧರ್ಮರಾಜ್ಯ ಸ್ಥಾಪನೆ ಎಂಬ ಪೌರಾಣಿಕ ನಾಟಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೃಶ್ಯ ಮಾಧ್ಯಮಗಳಿಗಿಂತ ಮೊದಲು ಜನರು ಮನರಂಜನೆಗಾಗಿ ನಾಟಕ ನೋಡುವ ಹವ್ಯಾಸ ಇಟ್ಟುಕೊಂಡಿದ್ದರು. ಮೊಬೈಲ್ ಮತ್ತು ಟಿ.ವಿ ಪ್ರಭಾವ ಹೆಚ್ಚಾಗಿ ಈಗ ನಾಟಕ ನೋಡುವವರು ಕಡಿಮೆಯಾಗಿದ್ದಾರೆ. ನಾಟಕಗಳನ್ನು ನೋಡುವುದರಿಂದ ರಂಗಭೂಮಿ ಕಲೆ ಉಳಿಯುತ್ತದೆ ಎಂದರು.ಹಬ್ಬಹರಿದಿನಗಳಲ್ಲಿ ಮಾತ್ರ ನಾಟಕವಾಡಿದರೆ ಸಾಲದು. ಆಗಾಗ್ಗೆ ಗ್ರಾಮಗಳಲ್ಲಿ ಇಂಥ ಸಾಂಸ್ಕೃತಿಕ ಕಾರ್‍ಯಕ್ರಮ ಹಮ್ಮಿಕೊಳ್ಳಬೇಕು. ಅಭಿನಯ ಚತುರತೆ ಇನ್ನಷ್ಟ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ವೇಳೆ ಗ್ರಾಪಂ ಅಧ್ಯಕ್ಷೆ ಜಯಲಕ್ಷ್ಮಿ ಅಣ್ಣಪ್ಪ, ಗ್ರಹಿರಿಯ ಮುಖಂಡರಾದ ನಾಗೇಶ್ ಕುಮಾರ್, ಕೇಶವ್ ಮೂರ್ತಿ, ಅಣ್ಣಪ್ಪ, ಬಸಣ್ಣ, ಸತ್ಯರಾವ್ ಮೂರ್ತಿ, ಕೆ.ಎನ್.ಕೃಷ್ಣೇಗೌಡ, ಚಕ್ರಪಾಣಿ, ಕೃಷ್ಣ ನಾಯಕ, ಗಾರೆವಿಜಿ, ಯೋಗೇಶ್, ಉಮೇಶ್, ಗ್ರಾಪಂ ಸಾಧುಗೊನಹಳ್ಳಿ ಕುಮಾರ್, ಕರೋಟಿ ಕುಮಾರ್ ಹಲವರು ಉಪಸ್ಥಿತರಿದ್ದರು.ಕೆಪಿಸಿಸಿ ವತಿಯಿಂದ ಅ.2ರಂದು ಕಾಲ್ನಡಿಗೆ ಜಾಥಾಮಳವಳ್ಳಿ:ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರು ಬೆಳಗಾವಿ ಅಧಿವೇಶನದಲ್ಲಿ ಅಧ್ಯಕ್ಷತೆ ವಹಿಸಿ 100 ವರ್ಷ ತುಂಬಿದ ಹಿನ್ನೆಲೆಯಲ್ಲಿ ಸ್ಮರಣಾರ್ಥ ಹಾಗೂ ಮಹಾತ್ಮ ಗಾಂಧಿ ಜಯಂತಿ ಅಂಗವಾಗಿ ಅ.2ರಂದು ಕೆಪಿಸಿಸಿ ವತಿಯಿಂದ ಹಮ್ಮಿಕೊಂಡಿರುವ ಗಾಂಧಿ ಭಾರತ ಕಾರ್ಯಕ್ರಮದಡಿಯಲ್ಲಿ ಕಾಲ್ನಡಿಗೆ ಜಾಥಾವನ್ನು ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಅಂದು ಬೆಳಗ್ಗೆ 8 ಗಂಟೆಗೆ ಪಟ್ಟಣದ ಪ್ರವಾಸಿ ಮಂದಿರದ ಅಂಬೇಡ್ಕರ್ ವೃತ್ತದಿಂದ ಪಟ್ಟಣದ ಡಾ.ಬಿ.ಆರ್ ಅಂಬೇಡ್ಕರ್ ಭವನದವರೆಗೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ ನೇತೃತ್ವದಲ್ಲಿ ನಡೆಯಲಿದೆ.ಕಾರ್ಯಕ್ರಮದಲ್ಲಿ ತಾಲೂಕಿನ ಪ್ರತಿ ಪಂಚಾಯ್ತಿಯಿಂದ ಕನಿಷ್ಠ 100 ಜನರು ಭಾಗವಹಿಸಬೇಕು, ಆಗಮಿಸುವ ಪ್ರತಿಯೊಬ್ಬರು ಶ್ವೇತವಸ್ತ್ರ ಧರಿಸಿ ಭಾಗವಹಿಸಬೇಕು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ದೊಡ್ಡಯ್ಯ ಹಾಗೂ ಸಿ.ಪಿ ರಾಜು ಪ್ರಕರಣೆಯಲ್ಲಿ ಕೋರಿದ್ದಾರೆ.