ಮಹರ್ಷಿ ಭಗೀರಥರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಿ:ತಹಸೀಲ್ದಾರ್ ಸಂತೋಷ ಕುಮಾರ್

| Published : May 15 2024, 01:31 AM IST

ಮಹರ್ಷಿ ಭಗೀರಥರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಿ:ತಹಸೀಲ್ದಾರ್ ಸಂತೋಷ ಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ಭಗೀರಥ ಮಹರ್ಷಿಗಳು ಒಬ್ಬ ಮಹಾನ್ ಅಧ್ಯಾತ್ಮಿಕ ಆರಾಧಕರಾಗಿದ್ದು, ತಮ್ಮ ತಪೋಶಕ್ತಿಯ ಮೂಲಕ ಗಂಗೆಯನ್ನೇ ಧರೆಗೆ ತಂದಿದ್ದಾರೆಂಬ ಪ್ರತೀತಿಯಿದೆ. ಅವರು ತಮ್ಮ ತತ್ವ, ಸಿದ್ಧಾಂತಗಳು, ವಚನಗಳ ಮೂಲಕ ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಪಾವಗಡ

ಮಹರ್ಷಿ ಭಗೀರಥರ ಅದರ್ಶ ಹಾಗೂ ತತ್ವ ಸಿದ್ಧಾಂತಗಳನ್ನು ಪ್ರತಿಯೊಬ್ಬರೂ ಆಳವಡಿಸಿಕೊಳ್ಳಬೇಕೆಂದು ತಹಸೀಲ್ದಾರ್ ಸಂತೋಷ್ ಕುಮಾರ್‌ ಕರೆ ನೀಡಿದರು.

ತಾಲೂಕು ಆಡಳಿತ ಹಾಗೂ ತಾಲೂಕು ಉಪ್ಪಾರ ಸಮಾಜದ ವತಿಯಿಂದ ಮಂಗಳವಾರ ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮಹರ್ಷಿ ಭಗೀರಥರ ಜಯಂತ್ಯುತ್ಸವದಲ್ಲಿ ಮಹರ್ಷಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ಭಗೀರಥ ಮಹರ್ಷಿಗಳು ಒಬ್ಬ ಮಹಾನ್ ಅಧ್ಯಾತ್ಮಿಕ ಆರಾಧಕರಾಗಿದ್ದು, ತಮ್ಮ ತಪೋಶಕ್ತಿಯ ಮೂಲಕ ಗಂಗೆಯನ್ನೇ ಧರೆಗೆ ತಂದಿದ್ದಾರೆಂಬ ಪ್ರತೀತಿಯಿದೆ. ಅವರು ತಮ್ಮ ತತ್ವ, ಸಿದ್ಧಾಂತಗಳು, ವಚನಗಳ ಮೂಲಕ ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅಂತಹ ಮಹನೀಯರ ಅದರ್ಶ ರೂಢಿಸಿಕೊಂಡು ಸಮಾಜ ಕಟ್ಟುವಲ್ಲಿ ನಾವೆಲ್ಲಾ ಕಂಕಣ ಬದ್ಧರಾಗಬೇಕೆಂದು ಕರೆ ನೀಡಿದರು.

ತಾಲೂಕು ಉಪ್ಪಾರ ಸಮಾಜದ ಮುಖಂಡ ಕನಿಕಲಬಂಡೆ ಅನಿಲ್‌ಕುಮಾರ್‌ ಮಾತನಾಡಿ, ಭಗೀರಥ ಮಹರ್ಷಿಯು ದೈವಾಂಶ ಸಂಭೂತರಾಗಿದ್ದು, ತಮ್ಮ ವಚನಗಳ ಸಂದೇಶ ಹಾಗೂ ಧರ್ಮ ಜಾಗೃತಿ ಮೂಲಕ ಸಮಾಜವನ್ನು ಸರಿದಾರಿಯಲ್ಲಿ ಮುನ್ನಡೆಯುವಂತೆ ಎಚ್ಚರಿಸಿದ್ದಾರೆ. ಉಪ್ಪಾರ ಸಮಾಜದಲ್ಲಿ ಜನಿಸಿದ್ದು ನಮ್ಮೆಲ್ಲರ ಪುಣ್ಯ, ಉಪ್ಪಾರ ಸಮಾಜ ಪ್ರಗತಿಯತ್ತ ಸಾಗಬೇಕು, ಈ ಸಮಾಜವು ಶೈಕ್ಷಣಿಕ ಹಾಗೂ ಅರ್ಥಿಕ ಪ್ರಗತಿ ಕಾಣುವ ಮೂಲಕ ನೊಂದವರಿಗೆ ನೆರವಾಗಬೇಕು, ರಾಜಕೀಯ ಸ್ಥಾನಮಾನ ಪಡೆಯುವಂತಾಗಬೇಕು ಎಂದರು.

ತಾಲೂಕು ಕಂದಾಯ ತನಿಖಾಧಿಕಾರಿ ರಾಜ್‌ಗೋಪಾಲ್‌,ಉಪ್ಪಾರ ಸಮಾಜದ ಮುಖಂಡರಾದ ಕನಿಕಲ ಬಂಡೆ ಅಕ್ಕಲಪ್ಪ,ನಾರಾಯಣಪ್ಪ,ಅಶ್ವತ್ಥಪ್ಪ,ಗೋವಿಂದಪ್ಪ,ಕಡಪಲಕರೆ ಹನುಮಂತರಾಯಪ್ಪ ಹಾಗೂ ಕಂದಾಯ ಇಲಾಖೆಯ ವಿ.ಎ.ರಾಜೇಶ್ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.