ಸಾರಾಂಶ
ನರಸಿಂಹರಾಜಪುರ, ಸೊಳ್ಳೆ ಮುಕ್ತ ಸಮಾಜ ನಿರ್ಮಿಸಲು ಎಲ್ಲರೂ ಕೈ ಜೋಡಿಸಬೇಕು ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ವೈ.ಎಂ.ಲಲಿತಾ ಮನವಿ ಮಾಡಿದರು.ತಾಲೂಕಿನ ಕಟ್ಟಿನಮನೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ನಡೆದ ವಿಶ್ವ ಸೊಳ್ಳೆ ದಿನಾಚರಣೆಯಲ್ಲಿ ಮಾತನಾಡಿ, ಪ್ರತಿವರ್ಷ ಆ.20 ರಂದು ವಿಶ್ವದಾದ್ಯಂತ ವಿಶ್ವ ಸೊಳ್ಳೆ ದಿನಾಚರಣೆ ನಡೆಸಲಾಗುತ್ತಿದ್ದು ಸೊಳ್ಳೆಗಳಿಂದ ಹರಡುವ ಕಾಯಿಲೆಗಳು, ಅವುಗಳ ಗುಣ ಲಕ್ಷಣಗಳು ಮತ್ತು ಸೊಳ್ಳೆ ನಿಯಂತ್ರಣದ ಬಗ್ಗೆ ಅರಿವು ಮೂಡಿಸುವುದೇ ಈ ಕಾರ್ಯಕ್ರಮದ ಉದ್ದೇಶ.
ಕಟ್ಟಿನಮನೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿಶ್ವ ಸೊಳ್ಳೆ ದಿನಾಚರಣೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಸೊಳ್ಳೆ ಮುಕ್ತ ಸಮಾಜ ನಿರ್ಮಿಸಲು ಎಲ್ಲರೂ ಕೈ ಜೋಡಿಸಬೇಕು ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ವೈ.ಎಂ.ಲಲಿತಾ ಮನವಿ ಮಾಡಿದರು.
ತಾಲೂಕಿನ ಕಟ್ಟಿನಮನೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ನಡೆದ ವಿಶ್ವ ಸೊಳ್ಳೆ ದಿನಾಚರಣೆಯಲ್ಲಿ ಮಾತನಾಡಿ, ಪ್ರತಿವರ್ಷ ಆ.20 ರಂದು ವಿಶ್ವದಾದ್ಯಂತ ವಿಶ್ವ ಸೊಳ್ಳೆ ದಿನಾಚರಣೆ ನಡೆಸಲಾಗುತ್ತಿದ್ದು ಸೊಳ್ಳೆಗಳಿಂದ ಹರಡುವ ಕಾಯಿಲೆಗಳು, ಅವುಗಳ ಗುಣ ಲಕ್ಷಣಗಳು ಮತ್ತು ಸೊಳ್ಳೆ ನಿಯಂತ್ರಣದ ಬಗ್ಗೆ ಅರಿವು ಮೂಡಿಸುವುದೇ ಈ ಕಾರ್ಯಕ್ರಮದ ಉದ್ದೇಶ. 1897 ರ ಆ.20 ರಂದು ಸರ್ ರೊನಾಲ್ಡ್ ರಾಸ್ ರವರು ಮಲೇರಿಯ ಕಾಯಿಲೆ ಉಂಟು ಮಾಡುವ ಪರಾವಲಂಬಿ ಜೀವಿಗಳು ಸೊಳ್ಳೆ ಹೊಟ್ಟೆಗಳಲ್ಲಿ ಕಂಡು ಹಿಡಿದ ನೆನಪಿಗಾಗಿ ಪ್ರತಿ ವರ್ಷ ಆ.20 ರಂದು ವಿಶ್ವ ಸೊಳ್ಳೆ ದಿನಾಚರಣೆ ನಡೆಸಲಾಗುತ್ತಿದೆ. ಎಲ್ಲಾ ಸಾರ್ವಜನಿಕರು ಸೊಳ್ಳೆಗಳಿಂದ ಬರುವ ಕಾಯಿಲೆಗಳ ಬಗ್ಗೆ ಅರಿತು ಸೊಳ್ಳೆಗಳನ್ನು ನಿಯಂತ್ರಿಸಲು ಸಹಕಾರ ನೀಡಬೇಕು. ಸಾರ್ವಜನಿಕರು ಹಾಗೂ ಆರೋಗ್ಯ ಇಲಾಖೆ ನಡುವೆ ಸಮನ್ವಯತೆ ಇದ್ದರೆ ಸೊಳ್ಳೆ ನಿಯಂತ್ರಣ ಸುಲಭವಾಗುತ್ತದೆ ಎಂದರು. ಕಟ್ಟಿನಮನೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ವಿನಯ್ ಮಾತನಾಡಿ, ಸೊಳ್ಳೆಗಳಲ್ಲಿ 3 ಸಾವಿರಕ್ಕಿಂತ ಹೆಚ್ಚು ಪ್ರಭೇದಗಳು ಪತ್ತೆಯಾಗಿದ್ದು ಮಲೆನಾಡಿನಲ್ಲಿ ಅನಾಫಿಲಿಸ್ ಈಡೀಸ್ ಮತ್ತು ಕ್ಯೂಲೆಕ್ಸ್ ಜಾತಿ ಸೊಳ್ಳೆಗಳು ಪ್ರಮುಖವಾಗಿ ಕಂಡುಬರುತ್ತಿದೆ. ಈ ಸೊಳ್ಳೆಗಳ ಗುಣಲಕ್ಷಣ ಬೇರೆ, ಬೇರೆಯಾಗಿದ್ದು ಇದರಿಂದ ಹರಡುವ ರೋಗಗಳ ಲಕ್ಷಣಗಳು ಕೂಡ ಬೇರೆಯಾಗಿರುತ್ತದೆ. ಮಲೇರಿಯ ವನ್ನು ಅನಾಫಿಲಿಸ್ ಹೆಣ್ಣು ಸೊಳ್ಳೆಗಳು ಹರಡುತ್ತದೆ. ಈಡಿಶ್ ಹೆಣ್ಣು ಸೊಳ್ಳೆಗಳು ಡೆಂಘೀ, ಚಿಕೂನ್ ಗುನ್ಯಾ, ಜೀಕ ರೋಗ ಹರಡುತ್ತದೆ. ಕ್ಯೂಲಿಕ್ಸ್ ಸೊಳ್ಳೆಗಳು ಮೆದುಳು ಜ್ವರ ಹರಡುತ್ತದೆ. ಸಾರ್ವಜನಿಕರು ಬಳಸುವ ನೀರಿನ ತಾಣಗಳನ್ನು ಮುಚ್ಚಿಟ್ಟು ಬಳಸುವುದು, ಘನ ತ್ಯಾಜ್ಯಗಳನ್ನು ಸೂಕ್ತವಾಗಿ ವಿಲೇವಾರಿ ಮಾಡುವುದು, ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡುವುದು, ಲಾವ ನಾಶ ಮಾಡುವ ಮೂಲಕ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ.ಬೇಬಿ, ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ಡೈಸಿ, ಆಶಾ ಮೇಲ್ವಿಚಾರಕಿ ಪೂರ್ಣಾವತಿ, ಆರೋಗ್ಯ ಇಲಾಖೆ ಆಶಾ, ಮಮತಾ , ಆರೋಗ್ಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.