ಸಾರಾಂಶ
ಭೂಮಿ ಮೇಲೆ ವಾಸಿಸುವ ಪ್ರತಿಯೊಂದು ಪ್ರಾಣಿ, ಪಕ್ಷಿಗಳಿಗೆ ನೀರು ಅವಶ್ಯವಾಗಿದೆ. ನೀರು ಎಲ್ಲರಿಗೂ ಜೀವ ಜಲ. ಅಂತರ್ಜಲದ ಮಟ್ಟ ದಿನದಿಂದ ದಿನಕ್ಕೆ ಇತ್ತೀಚೆಗೆ ಕುಸಿಯುತ್ತಿದೆ.
ಮರಿಯಮ್ಮನಹಳ್ಳಿ: ನೀರು ಅಮೂಲ್ಯವಾದದ್ದು, ವ್ಯರ್ಥ ಮಾಡದೇ ಪ್ರತಿಯೊಬ್ಬರು ಮಿತವಾಗಿ ನೀರು ಬಳಕೆ ಮಾಡಬೇಕು ಎಂದು ಎಸ್.ಎಲ್.ಆರ್ ಮೆಟಾಲಿಕ್ಸ್ ಕಂಪನಿಯ ವೈದ್ಯ ಡಾ. ಜಿ.ಎಂ. ಸೋಮೇಶ್ವರ ಹೇಳಿದರು.
ಇಲ್ಲಿನ ಬಸ್ ನಿಲ್ದಾಣದಲ್ಲಿ ಸೋಮವಾರ ಎಸ್.ಎಲ್.ಆರ್. ಮೆಟಾಲಿಕ್ಸ್ ಮತ್ತು ಚೈತನ್ಯ ಗ್ರಾಮೀಣ ಅಭಿವೃದ್ಧಿ ಎಜ್ಯೂಕೇಷನಲ್ ಟ್ರಸ್ಟ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕುಡಿಯುವ ನೀರಿನ ಅರವಟ್ಟಿಗೆ ಉದ್ಘಾಟಿಸಿ ಅವರು ಮಾತನಾಡಿದರು.ಭೂಮಿ ಮೇಲೆ ವಾಸಿಸುವ ಪ್ರತಿಯೊಂದು ಪ್ರಾಣಿ, ಪಕ್ಷಿಗಳಿಗೆ ನೀರು ಅವಶ್ಯವಾಗಿದೆ. ನೀರು ಎಲ್ಲರಿಗೂ ಜೀವ ಜಲ. ಅಂತರ್ಜಲದ ಮಟ್ಟ ದಿನದಿಂದ ದಿನಕ್ಕೆ ಇತ್ತೀಚೆಗೆ ಕುಸಿಯುತ್ತಿದೆ. ಇದಕ್ಕೆಲ್ಲ ಕಾರಣ ನಮ್ಮ ಆಧುನಿಕ ಜೀವನ ಶೈಲಿಯ ಪ್ರಭಾವ, ಕಾಡನ್ನು ಹೆಚ್ಚಾಗಿ ಕಡಿದು ಹಾಳು ಮಾಡಲಾಗುತ್ತದೆ. ಪರಿಣಾಮ ನಾವು ಬಿಸಿಲಿನ ತಾಪಮಾನ ಅನುಭವಿಸುತ್ತಿದ್ದೇವೆ ಎಂದು ಅವರು ಹೇಳಿದರು.
ಸ್ಥಳೀಯ ಪಪಂ ಮುಖ್ಯಾಧಿಕಾರಿ ಖಾಜಾ ಮೈನುದ್ದೀನ್ ಮಾತನಾಡಿ, ಪ್ರತಿಯೊಬ್ಬರಿಗೂ ನೀರು ಬೇಕಾಗಿರುವುದರಿಂದ ಮಿತವಾಗಿ ಬಳಸುವ ಮೂಲಕ ಮುಂದಿನ ಪೀಳಿಗೆಗೆ ಉಳಿಸಿಕೊಡುವ ಜವಾಬ್ದಾರಿ ಪ್ರತಿಯೊಬ್ಬರದ್ದಾಗಿದೆ ಎಂದು ಅವರು ಹೇಳಿದರು.ಎಸ್.ಎಲ್.ಆರ್. ಕಂಪನಿಯ ಸೇಫ್ಟಿ ಮ್ಯಾನೇಜರ್ ಹರಿಶಂತ್ ನಿಡುಗುಂದಿ ಮಾತನಾಡಿ, ಕುಡಿಯುವ ನೀರಿನ ಸಮಸ್ಯೆ ಬಿಸಿಲಿನ ತಾಪಮಾನ ಹೆಚ್ಚಿದ್ದಾಗ ಮತ್ತು ನೀರಿನ ಕೊರತೆ ಇದ್ದಾಗ ನೀರಿನ ಸಮಸ್ಯೆ ಗೊತ್ತಾಗಲಿದೆ. ನೀರಿನ ಸಮಸ್ಯೆ ಉಂಟಾಗುವ ಮೊದಲೇ ನೀರನ್ನು ಮಿತವಾಗಿ ಬಳಸುವುದನ್ನು ಪ್ರತಿಯೊಬ್ಬರು ರೂಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಸ್ಥಳೀಯ ಪಿಎಸ್ಐ ಮೌನೇಶ್ ರಾಥೋಡ್, ಡಣಾಯಕನಕೆರೆ ಗ್ರಾಪಂ ಸದಸ್ಯ ಗುಂಡಾ ಸ್ವಾಮಿ, ಆಯ್ಯನಹಳ್ಳಿ ಗ್ರಾಪಂ ಸದಸ್ಯ ಈಡಿಗರ ಮಂಜುನಾಥ, ಪಪಂ ಸದಸ್ಯರಾದ ಪರುಶುರಾಮ, ಎಲ್.ವಸಂತ, ಮರಡಿ ಸುರೇಶ್, ಪಪಂ ಎಂಜಿನಿಯರ್ ಹುಸೇನ್ ಬಾಷಾ, ಕಂಪನಿಯ ಸಿಎಸ್ಆರ್ ವಿಭಾಗದ ಸಿಬ್ಬಂದಿ ಮಲ್ಲಿಕಾರ್ಜುನ, ಮಾರುತಿ, ಸ್ಥಳೀಯ ಮುಖಂಡ ರುದ್ರೇಶ್ ನಾಯ್ಕ್, ಚೈತನ್ಯ ಗ್ರಾಮೀಣ ಅಭಿವೃದ್ಧಿ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷ ಯು.ಭೀಮರಾಜ, ಕಾರ್ಯದರ್ಶಿ ಅಶೋಕ ಉಪಸ್ಥಿತರಿದ್ದರು.