ಸಾರಾಂಶ
ಶಿಗ್ಗಾಂವಿ: ನವರಾತ್ರಿ ಎಂದರೆ ಕೇವಲ ಒಂಬತ್ತು ದಿನಗಳ ಹಬ್ಬ ಮಾತ್ರವಲ್ಲ, ಅದು ನಮ್ಮ ಸಂಸ್ಕೃತಿ. ಭಕ್ತಿಯ, ಶಕ್ತಿಯ ಹಾಗೂ ಸಾಂಸ್ಕೃತಿಕ ಏಕತೆಯ ಮಹಾ ಉತ್ಸವ. ಪ್ರತಿಯೊಬ್ಬರು ದೇವಿಯನ್ನು ಶ್ರದ್ಧಾಭಕ್ತಿಯಿಂದ ಪೂಜಿಸಬೇಕು ಎಂದು ದ್ಯಾಮವ್ವದೇವಿ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಮಾಜಿ ಸಂಸದ ಮಂಜುನಾಥ ಕುನ್ನೂರ ಹೇಳಿದರು.ಪಟ್ಟಣದ ದ್ಯಾಮವ್ವದೇವಿ ದೇವಸ್ಥಾನದಲ್ಲಿ ದೇವಿ ಪುರಾಣ ಪ್ರವಚನವನ್ನು ಉದ್ಘಾಟಿಸಿ ಮಾತನಾಡಿದ ಅವರು, ದುಷ್ಟ್ಟ ಶಿಕ್ಷೆ ಶಿಷ್ಟ ರಕ್ಷೆಯ ಸಂಕೇತವಾದ ದೇವಿ ಪುರಾಣವು ಧರ್ಮದ ಜಯ, ಅಧರ್ಮದ ನಾಶ, ಸತ್ಯದ ಜಯ, ಅಸತ್ಯದ ಸೋಲು ಎಂಬ ಸಂದೇಶವನ್ನು ಸಾರುತ್ತದೆ ಎಂದು ಅಭಿಪ್ರಾಯಪಟ್ಟರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಗಂಜಿಗಟ್ಟಿಯ ವೈಜನಾಥಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಶ್ರೀ ದೇವಿ ಪುರಾಣವು ದೇಹದ ಪುರಾಣವೇ ಆಗಿದೆ ಎಂದರಲ್ಲದೆ ನಡೆ ನುಡಿ ಶುದ್ಧವಾಗಿಟ್ಟುಕೊಂಡು ಬದುಕುವ ಸಂಯಮದ ಬದುಕನ್ನು ಕಲಿಸುತ್ತದೆ ಎಂದರು.ಸಮ್ಮುಖ ವಹಿಸಿ ಮಾತನಾಡಿದ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ನವರಾತ್ರಿಯ ಪ್ರತಿದಿನವು ಒಂದೊಂದು ರೂಪದ ದೇವಿಯನ್ನು ಪೂಜಿಸುತ್ತೇವೆ. ಈ ಎಲ್ಲ ದಿನಗಳು. ಶಕ್ತಿ, ಭಕ್ತಿ, ಮುಕ್ತಿ ಎಂಬ ಈ ಮೂರು ಮೌಲ್ಯಗಳನ್ನು ಪ್ರತಿನಿಧಿಸುತ್ತವೆ. ಈ ಮೌಲ್ಯಗಳೇ ಈ ಹಬ್ಬದ ತತ್ವ ಎಂದು ಹೇಳಿದರುಕಾರ್ಯಕ್ರಮದಲ್ಲಿ ಪುರಸಭಾ ಅಧ್ಯಕ್ಷ ಸಿದ್ದಾರ್ಥಗೌಡ ಪಾಟೀಲ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಕಾಡಶೆಟ್ಟಿಹಳ್ಳಿಯ ಶಿವಬಸವ ಶಾಸ್ತ್ರಿಗಳವರಿಂದ ಪುರಾಣ ಪ್ರವಚನ ನೆರವೇರಿತು. ಗದುಗಿನ ಶಿವಾನಂದ ಮಂದೇವಾಲ ಅವರು ಸಂಗೀತ ಸೇವೆ ನೀಡಿದರು. ಬಸವರಾಜ ಚಳಗೇರಿಯವರು ತಬಲಾ ಸಾಥ್ ನೀಡಿದರು.
;Resize=(128,128))
;Resize=(128,128))