ಸ್ವಯಂ ಪ್ರೇರಣೆಯಿಂದ ಎಲ್ಲರು ರಕ್ತದಾನ ಮಾಡಿ ಜೀವ ಉಳಿಸಿ

| Published : Feb 10 2024, 01:50 AM IST

ಸಾರಾಂಶ

ಚಿಟಗುಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಎಚ್.ಐ.ವಿ ಏಡ್ಸ್-ಆರೋಗ್ಯ ಹಾಗೂ ರಕ್ತದಾನ ಕುರಿತು ಅರಿವು ಕಾರ್ಯಕ್ರಮ ಜರುಗಿತು.

ಕನ್ನಡಪ್ರಭವಾರ್ತೆ ಬೀದರ್

ರಕ್ತಕ್ಕೆ ಮತ್ಯಾವ ಪರ್ಯಾಯ ಇಲ್ಲ, ವೈದ್ಯಕೀಯ ಕ್ಷೇತ್ರ ಇಷ್ಟೇಲ್ಲ ಪ್ರಗತಿ ಸಾಧಿಸಿದ್ದರೂ ಸಹ ರಕ್ತಕ್ಕೆ ಬದಲಿ ವ್ಯವಸ್ಥೆ ಕಂಡು ಹಿಡಿಯಲಾಗಿಲ್ಲ. ಆದ್ದರಿಂದ ಅರ್ಹರು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡುವ ಮೂಲಕ ಮತ್ತೊಬ್ಬರ ಜೀವ ಉಳಿಸಬೇಕು ಎಂದು ಚಿಟಗುಪ್ಪ ತಾಲೂಕು ವೈದ್ಯಾಧಿಕಾರಿ ಡಾ. ವಿಜಯಕುಮಾರ ಹರ್ಸೇಕರ್ ಕರೆ ನೀಡಿದರು.

ಚಿಟಗುಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರೆಡ್ ರಿಬ್ಬನ್ ಕ್ಲಬ್ ಮತ್ತು ಕರ್ನಾಟಕ ರಾಜ್ಯ ಏಡ್ಸ ಪ್ರಿವೆನ್‌ಶೆನ್‌ ಸೂಸೈಟಿ, ಬೀದರ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಎಚ್.ಐ.ವಿ ಏಡ್ಸ್-ಆರೋಗ್ಯ ಹಾಗೂ ರಕ್ತದಾನ ಕುರಿತು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜನರಲ್ಲಿ ಮಾರಕ ರೋಗ ಏಡ್ಸ ಜಾಗೃತಿ ಮೂಡಿಸುವ ಮೂಲಕ ಇದನ್ನು ತಡೆಗಟ್ಟಲು ಸಾಧ್ಯ, ದಶಕಗಳ ಹಿಂದೆ ಏಡ್ಸ ರೋಗವು ಅತ್ಯಂತ ಅಪಾಯದ ಪ್ರಮಾಣದಲ್ಲಿ ಹರಡುತ್ತಿತ್ತು, ಜನರಲ್ಲಿ ಹೆಚ್ಚಿದ ಅರಿವಿನಿಂದ ಇಂದು ಸ್ವಲ್ಪ ನಿಯಂತ್ರಣದಲ್ಲಿದೆ ಎಂದರು.

ಎನ್‌ಎಸ್‌ಎಸ್ ಅಧಿಕಾರಿ ಡಾ ವೀರಶೆಟ್ಟಿ ಮೈಲೂರಕರ್ ಮಾತನಾಡಿ 18 ರಿಂದ 60 ವಯಸ್ಸಿನವರು ನಿಯಮಿತವಾಗಿ ರಕ್ತದಾನ ಮಾಡುವದರಿಂದ ತಮ್ಮ ಅರೋಗ್ಯದ ಜೊತೆಗೆ ಇನ್ನೊಬ್ಬರ ಜೀವ ರಕ್ಷಿಸಬಹುದು. ಒಬ್ಬರು ರಕ್ತದಾನ ಮಾಡುವದರಿಂದ ಮೂರಕ್ಕಿಂತ ಹೆಚ್ಚು ಜನರಿಗೆ ಸಹಾಯ ಮಾಡಬಹುದು ಎಂದು ತಿಳಿಸಿದರು.

ಚಿಟಗುಪ್ಪಾ ಸಮುದಾಯ ಅರೋಗ್ಯ ಕೇಂದ್ರದ ಆಪ್ತ ಸಮಾಲೋಚಕಿ ಗೀತಾ ಅವರು ವಿದ್ಯಾರ್ಥಿನಿಯರ ದೈಹಿಕ ಮಾನಸಿಕ ಆರೋಗ್ಯ ಕುರಿತು ಪ್ರತ್ಯೇಕವಾಗಿ ಆಪ್ತ ಸಮಾಲೋಚನೆ ನಡೆಸಿ ಅರಿವು ಮೂಡಿಸಿದರು. ವಿಶೇಷ ಉಪನ್ಯಾಸ ನೀಡಿದರು.

ಪ್ರಾಂಶುಪಾಲರಾದ ಡಾ ಸುರೇಂದರ್ ಸಿಂಗ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆಪ್ತಸಮಾಲೋಚಕ ನಂದಕುಮಾರ, ಡಾ. ಚಿತ್ರಶೇಖರ ಚಿರಳ್ಳಿ, ರಮೇಶ ಬಿರಾದರ, ಹಿರಿಯ ಸಹ ಪ್ರಾಧ್ಯಾಪಕ ಡಾ. ಕೆ. ಶಿವಕುಮಾರ, ಪ್ರೊ ಮೀನಾಕ್ಷಿ, ಡಾ. ರವೀಂದ್ರ ಟಿಳೆಕರ್, ಡಾ. ಸಯೀದಾ ಬಾನು, ಜಬಿವುಲ್ಲಾ, ಶಾಂತಕುಮಾರ ಪಾಟೀಲ, ಸೇರಿದಂತೆ ಅತಿಥಿ ಉಪನ್ಯಾಸಕರು, ವಿದ್ಯಾರ್ಥಿ-ವಿದ್ಯಾರ್ಥಿನಿಯರು ಭಾಗವಹಿಸಿದ್ದರು.