ಸಾರಾಂಶ
ಯಾವುದೇ ಆಮಿಷಕ್ಕೆ ಒಳಗಾಗದೆ ಮತದಾನ ಮಾಡುವ ಮೂಲಕ ಪ್ರಜಾ ಪ್ರಭುತ್ವವನ್ನು ಗಟ್ಟಿಗೊಳಿಸಬೇಕೆಂದು ಜನತೆಗೆ ವೀರಭದ್ರಪ್ಪ ಉಪ್ಪಿನ ಮನವಿ ಮಾಡಿದರು. ಜೈ ಹಿಂದ್ ಹಿರಿಯ ನಾಗರಿಕರ ಸಂಸ್ಥೆಯಲ್ಲಿ ಮತದಾನ ಜಾಗೃತಿ ಅಭಿಯಾನ ನಡೆಯಿತು.
ಕನ್ನಡಪ್ರಭ ವಾರ್ತೆ ಬೀದರ್
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಎಲ್ಲರೂ ತಪ್ಪದೆ ಮತದಾನ ಮಾಡಬೇಕೆಂದು ಬೀದರ್‌ನ ಜೈ ಹಿಂದ್ ಹಿರಿಯ ನಾಗರಿಕರ ಸಂಸ್ಥೆಯ ಕಾರ್ಯದರ್ಶಿ ವೀರಭದ್ರಪ್ಪ ಉಪ್ಪಿನ ಕರೆ ನೀಡಿದರು.ನಗರದ ಜೈ ಹಿಂದ್ ಹಿರಿಯ ನಾಗರಿಕರ ಸಂಸ್ಥೆಯಲ್ಲಿ ನಡೆದ ಮತದಾನ ಜಾಗೃತಿ ಅಭಿಯಾನದಲ್ಲಿ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾವುದೇ ಆಮಿಷಕ್ಕೆ ಒಳಗಾಗದೆ ಮತದಾನ ಮಾಡುವ ಮೂಲಕ ಪ್ರಜಾ ಪ್ರಭುತ್ವವನ್ನು ಗಟ್ಟಿಗೊಳಿಸಬೇಕೆಂದು ಜನತೆಗೆ ಮನವಿ ಮಾಡಿದರು.
ಕರ್ನಾಟಕ ವಚನ ಸಾಹಿತ್ಯ ಪರಿಷತ್ ಬೆಂಗಳೂರು ಇವರಿಂದ ಇತ್ತೀಚೆಗೆ ಬಳ್ಳಾರಿಯಲ್ಲಿ ನಡೆದ ನಾಲ್ಕನೇ ರಾಜ್ಯ ಸಮ್ಮೇಳನದಲ್ಲಿ ಬೀದರಿನ ಹಿರಿಯ ಸಾಹಿತಿ ಡಾ ಎಂ ಜಿ ದೇಶಪಾಂಡೆ ಅವರಿಗೆ ರಾಜ್ಯ ಮಟ್ಟದ ಅವ್ವ ಪ್ರಶಸ್ತಿ ನೀಡಲಾದ ನಿಮಿತ್ತ ದೇಶಪಾಂಡೆ ಅವರನ್ನು ಸನ್ಮಾನಿ ಸಲಾಯಿತು.3000 ಕಿಲೋ ಮೀಟರಗಳಷ್ಟು ಕಾರಿನಲ್ಲಿ ಪ್ರಯಾಣ ಮಾಡಿ, ಅಯೋಧ್ಯೆಯ ದರ್ಶನ ಪಡೆದ ಅಧ್ಯಕ್ಷ ರಾಮಕೃಷ್ಣ ಮುನಿಗ್ಯಾಲ್ ಹಾಗೂ ಇತರರನ್ನು ಇದೆ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸಂಘದ ಉಪಾಧ್ಯಕ್ಷರಾದ ವಿಜಯ ಕುಮಾರ ಸೂರ್ಯಾನ ಸ್ವಾಗತಿಸಿದರು. ಕೋಷಾಧ್ಯಕ್ಷ ಗಂಗಪ್ಪ ಸಾವಳೆ ವಂದಿಸಿದರು.
ರಾಮಕೃಷ್ಣ ಸಾಳೆ, ಶಿವಪುತ್ರ ಮೆಟಗೆ, ಮಚ್ಚೆಂದ್ರ ಏಕಲಾರ್ಕರ್, ಶಂಕರ್, ಮಲ್ಲಿಕಾರ್ಜುನ್ ಪಾಟೀಲ್, ವಿಜಯಕುಮಾರ ಅತನೂರ್, ಕೆವಿ ಪಾಟೀಲ್, ಬಸವರಾಜ ಘುಲೆ, ಗುಂಡೆರಾವ ದೇಶ ಮುಖ, ಸುಧಾಕರ ಗಾದಗಿ, ವೈಭವ, ಸಿಮ್ರಾನ ರಾಮಚಂದ್ರ ಗಾಜ್ರೆ, ಮಹಾಲಿಂಗಪ್ಪ ಬೆಲ್ದಾಳೆ ಮುಂತಾದವರು ಭಾಗವಹಿಸಿದ್ದರು.