ಅಭಿವೃದ್ಧಿ ವಿಚಾರದಲ್ಲಿ ಎಲ್ಲರ ಸಹಕಾರ ಅಗತ್ಯ: ಸಂಗಣ್ಣ ಕರಡಿ

| Published : Mar 18 2024, 01:45 AM IST

ಅಭಿವೃದ್ಧಿ ವಿಚಾರದಲ್ಲಿ ಎಲ್ಲರ ಸಹಕಾರ ಅಗತ್ಯ: ಸಂಗಣ್ಣ ಕರಡಿ
Share this Article
  • FB
  • TW
  • Linkdin
  • Email

ಸಾರಾಂಶ

ಸಿಂಧನೂರಿನಲ್ಲಿ ಹಿರೇಹಳ್ಳ ಸೇತುವೆಯನ್ನು ಕೊಪ್ಪಳ ಸಂಸದ ಸಂಗಣ್ಣ ಕರಡಿ ಉದ್ಘಾಟಿಸಿ ಮಾತನಾಡಿದರು. ಪ್ರಧಾನ ಮಂತ್ರಿ ಆದಿ ಆದರ್ಶ ಗ್ರಾಮ ಯೋಜನೆಯಡಿ ಸಿಂಧನೂರು ತಾಲೂಕಿನ ರಾಗಲಪರ್ವಿ, ಯದ್ದಲದೊಡ್ಡಿ, ಮಸ್ಕಿ ತಾಲೂಕಿನ ಭೋಗಾಪುರ, ವೀರಾಪೂರ ಗ್ರಾಮಗಳು ಆಯ್ಕೆಗೊಂಡಿದ್ದು, ಒಟ್ಟು ರು. 56 ಲಕ್ಷ ವೆಚ್ಚದಲ್ಲಿ ಗ್ರಾಮಗಳ ಅಭಿವೃದ್ಧಿಗೆ ಮೂಲಸೌಕರ್ಯ ಕಲ್ಪಿಸಲಾಗುವುದು ಎಂದರು.

ಕನ್ನಡಪ್ರಭ ವಾರ್ತೆ ಸಿಂಧನೂರು

ಚುನಾವಣೆ ಸಮಯದಲ್ಲಿ ರಾಜಕಾರಣ ಮಾಡಬೇಕು. ಆದರೆ ಅಭಿವೃದ್ಧಿ ವಿಚಾರ ಅಂತ ಬಂದಾಗ ಮಾತ್ರ ಎಲ್ಲರ ಸಹಕಾರ ನೀಡುವುದು ಅಗತ್ಯವಾಗಿದೆ ಎಂದು ಕೊಪ್ಪಳ ಸಂಸದ ಸಂಗಣ್ಣ ಕರಡಿ ಹೇಳಿದರು.

ನಗರದಲ್ಲಿ ಅಗಲೀಕರಣಗೊಂಡ ಹಿರೇಹಳ್ಳ ಸೇತುವೆ ಉದ್ಘಾಟಿಸಿ ಅವರು ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಯೋಜನೆಯಡಿ ರು.17.43 ಕೋಟಿ ವೆಚ್ಚದಲ್ಲಿ ಹಿರೇಹಳ್ಳ ಸೇತುವೆ ಅಗಲೀಕರಣ ಕಾಮಗಾರಿ ಮಾಡಲಾಗಿದೆ. 360 ಮೀ. ಉದ್ದ, 30 ಮೀ. ಅಗಲವಿದೆ. ಪ್ರಧಾನ ಮಂತ್ರಿ ಆದಿ ಆದರ್ಶ ಗ್ರಾಮ ಯೋಜನೆಯಡಿ ಸಿಂಧನೂರು ತಾಲೂಕಿನ ರಾಗಲಪರ್ವಿ, ಯದ್ದಲದೊಡ್ಡಿ, ಮಸ್ಕಿ ತಾಲೂಕಿನ ಭೋಗಾಪುರ, ವೀರಾಪೂರ ಗ್ರಾಮಗಳು ಆಯ್ಕೆಗೊಂಡಿದ್ದು, ಒಟ್ಟು ರು. 56 ಲಕ್ಷ ವೆಚ್ಚದಲ್ಲಿ ಗ್ರಾಮಗಳ ಅಭಿವೃದ್ಧಿಗೆ ಮೂಲಸೌಕರ್ಯ ಕಲ್ಪಿಸಲಾಗುವುದು ಎಂದರು.

ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿ, ಜೇವರ್ಗಿ-ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿ 150ಎ ನಿರ್ಮಾಣ, ಹಿರೇಹಳ್ಳ ಸೇತುವೆ ಅಗಲೀಕರಣ, ದಢೇಸುಗೂರು ಸೇತುವೆ ನಿರ್ಮಾಣ ಹಾಗೂ ಸಿಂಧನೂರು ಬೈಪಾಸ್ ನಿರ್ಮಾಣ ಕಾಮಗಾರಿಗಳಿಗೆ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದಲ್ಲಿ ಅನುಮೋದನೆ ಲಭಿಸಿತ್ತು. ನಂತರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಬಂದಿತು. ಕರಡಿ ಸಂಗಣ್ಣ ಸಂಸದರಾದ ನಂತರ ಭೂಸ್ವಾಧೀನ ಪ್ರಕ್ರಿಯೆ ಚುರುಕುಗೊಂಡಿತು. ಈ ಕಾಮಗಾರಿ ಪೂರ್ಣಗೊಳಿಸುವಲ್ಲಿ ಸಂಗಣ್ಣನವರ ಶ್ರಮವಿದೆ ಎಂದರು. ಈ ಸಂದರ್ಭದಲ್ಲಿ ವಿವಿಧ ಪಕ್ಷಗಳ ಮುಖಂಡರು, ಕಾರ್ಯಕರ್ತರು ಗ್ರಾಮಸ್ಥರು ಇದ್ದರು.