ಸಾರಾಂಶ
ಈಗಾಗಲೇ ಕಲುಷಿತಗೊಂಡಿರುವ ಭೂಮಿಯ ಫಲವತ್ತತೆಯನ್ನು ಮತ್ತೆ ಮರಳಿ ಪಡೆಯುವ ನಿಟ್ಟಿನಲ್ಲಿ ರೈತರು ಸಾವಯವ ಕೃಷಿಯತ್ತ ಹೆಚ್ಚಿನ ಗಮನ ಹರಿಸಬೇಕು. ನಮ್ಮ ಪೂರ್ವಿಕರು ನೂರು ವರ್ಷಕ್ಕೂ ಅಧಿಕ ಕಾಲ ಬದುಕುತ್ತಿದ್ದರು. ಏಕೆಂದರೆ ಅವರ ಆಹಾರ ಪದ್ಧತಿ ಸಾವಯವದಿಂದ ಕೂಡಿರುತ್ತಿತ್ತು.
ಕನ್ನಡಪ್ರಭ ವಾರ್ತೆ ಮಳವಳ್ಳಿ
ಅತಿ ಹೆಚ್ಚು ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಭೂಮಿ ಕಲುಷಿತಗೊಳಿಸುತ್ತಿರುವ ಪ್ರಸ್ತುತ ಸಾವಯವ ಕೃಷಿಗೆ ಹೆಚ್ಚು ಒತ್ತು ನೀಡಬೇಕು ಎಂದು ಸಂಪೂರ್ಣ ಸಾವಯವ ಕೃಷಿಕ ಸಂಘದ ಅಧ್ಯಕ್ಷ ಎಂ.ಎನ್.ಮಹೇಶ್ ಕುಮಾರ್ ತಿಳಿಸಿದರು.ತಾಲೂಕಿನ ದೊಡ್ಡೇಗೌಡನಕೊಪ್ಪಲು ಗ್ರಾಮದಲ್ಲಿ ಶಾಂತಿ ಪದವಿ ಪೂರ್ವ ಕಾಲೇಜು ವತಿಯಿಂದ ನಡೆಯುತ್ತಿರುವ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರದಲ್ಲಿ ಸಾವಯವ ಕೃಷಿಯ ಬಗ್ಗೆ ಉಪನ್ಯಾಸ ನೀಡಿ ಮಾತನಾಡಿ, ಭೂಮಿ ಹಾಗೂ ನಮ್ಮ ಆರೋಗ್ಯವನ್ನು ವೃದ್ಧಿಸುವ ಜವಾಬ್ದಾರಿ ಪ್ರತಿಯೊಬ್ಬರದ್ದಾಗಿದೆ. ಸಾವಯವ ಆಹಾರ ಸೇವನೆಯಿಂದ ಹಲವು ರೋಗಗಳನ್ನು ದೂರ ಮಾಡಬಹುದು ಎಂದರು.
ಈಗಾಗಲೇ ಕಲುಷಿತಗೊಂಡಿರುವ ಭೂಮಿಯ ಫಲವತ್ತತೆಯನ್ನು ಮತ್ತೆ ಮರಳಿ ಪಡೆಯುವ ನಿಟ್ಟಿನಲ್ಲಿ ರೈತರು ಸಾವಯವ ಕೃಷಿಯತ್ತ ಹೆಚ್ಚಿನ ಗಮನ ಹರಿಸಬೇಕು. ನಮ್ಮ ಪೂರ್ವಿಕರು ನೂರು ವರ್ಷಕ್ಕೂ ಅಧಿಕ ಕಾಲ ಬದುಕುತ್ತಿದ್ದರು. ಏಕೆಂದರೆ ಅವರ ಆಹಾರ ಪದ್ಧತಿ ಸಾವಯವದಿಂದ ಕೂಡಿರುತ್ತಿತ್ತು ಎಂದರು.ಇದೇ ವೇಳೆ ಜೀವಾಮೃತ, ಗೋ ಕೃಪಾಮೃತ ಇದರ ಮಹತ್ವ ನೀರು ಕಡಿಮೆ ಇದ್ದರೆ ಯಾವ ಬೆಳೆ ಬೆಳೆಯಬೇಕು ಎಂಬ ಅರಿವು ಮೂಡಿಸಲಾಯಿತು. ರೈತರು ಬೆಳೆದ ಬೆಳೆಗೆ ಹೇಗೆ ಮೌಲ್ಯವರ್ಧನೆ ಮಾಡಿ ಮಾರಾಟ ಮಾಡಬೇಕು ಎನ್ನುವುದನ್ನು ತಿಳಿಸಿಕೊಟ್ಟರು.
ಈ ವೇಳೆ ಪ್ರಮುಖರಾದ ಚಿಕ್ಕಣ್ಣ, ಶಿವಕುಮಾರ್, ಅಜಿತ್, ಹೇಮಲತಾ, ಶಿವಣ್ಣ, ಬೋರೇಗೌಡ, ಶಿಬಿರದ ವಿನೋದ್ ಕುಮಾರ್ ಹಾಗೂ ಮುಖಂಡರು ಇದ್ದರು.