ಅಬಕಾರಿ ಇಲಾಖೆಯಿಂದ ಅಕ್ರಮ ಮದ್ಯ, ಬಿಯರ್ ನಾಶ

| Published : Mar 09 2024, 01:40 AM IST

ಸಾರಾಂಶ

ತುರುವೇಕೆರೆ ವಲಯ ವ್ಯಾಪ್ತಿಯಲ್ಲಿ ೨೦೨೨-೨೦೨೩ನೇ ಸಾಲಿನಲ್ಲಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಮದ್ಯ ಮತ್ತು ಬಿಯರನ್ನು ವಶಪಡಿಸಿಕೊಂಡಿದ್ದ ಅಬಕಾರಿ ಇಲಾಖೆ ಅವುಗಳನ್ನು ನಾಶ ಮಾಡಿದೆ ಎಂದು ಅಬಕಾರಿ ಉಪಅಧೀಕ್ಷಕ ಎಂ.ಎಚ್. ರಘು ತಿಳಿಸಿದರು.

ತುರುವೇಕೆರೆ: ತುರುವೇಕೆರೆ ವಲಯ ವ್ಯಾಪ್ತಿಯಲ್ಲಿ ೨೦೨೨-೨೦೨೩ನೇ ಸಾಲಿನಲ್ಲಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಮದ್ಯ ಮತ್ತು ಬಿಯರನ್ನು ವಶಪಡಿಸಿಕೊಂಡಿದ್ದ ಅಬಕಾರಿ ಇಲಾಖೆ ಅವುಗಳನ್ನು ನಾಶ ಮಾಡಿದೆ ಎಂದು ಅಬಕಾರಿ ಉಪಅಧೀಕ್ಷಕ ಎಂ.ಎಚ್. ರಘು ತಿಳಿಸಿದರು.

ಅಬಕಾರಿ ಇಲಾಖೆ ಆವರಣದಲ್ಲಿ ಅಬಕಾರಿ ಉಪ ಆಯುಕ್ತರ ಮಾರ್ಗದರ್ಶನದಲ್ಲಿ ಅಬಕಾರಿ ಇಲಾಖೆಯ ೧೫(ಎ) ಅಡಿಯಲ್ಲಿ ೪೨ ಪ್ರಕರಣ, ೧೭ ಘೋರ ಪ್ರಕರಣ, ಪೊಲೀಸ್ ಇಲಾಖೆಯ ೮ ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾಗಿದ್ದ ೬೫೦ ಲೀಟರ್ ಮದ್ಯ ಹಾಗೂ ೨೦.೩ ಲೀಟರ್ ಬಿಯರನ್ನು ನಾಶ ಮಾಡಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಹಸೀಲ್ದಾರ್ ವೈ.ಎಂ.ರೇಣುಕುಮಾರ್‌ ಉಪಸ್ಥಿತಿಯಲ್ಲಿ ಅಬಕಾರಿ ನಿರೀಕ್ಷಕ ದಿಲೀಪ್‌ಕುಮಾರ್, ಕೆಎಸ್‌ಬಿಸಿಎಲ್ ನ ಡಿಪೋ ಮ್ಯಾನೇಜರ್ ಸಿದ್ದಲಿಂಗಸ್ವಾಮಿ, ಅಬಕಾರಿ ಸಿಬ್ಬಂದಿಗಳಾದ ಕೇಶವ್ ಅಗಡಿ, ನರಸಿಂಹಮೂರ್ತಿ ಹಾಗೂ ರಮೇಶ್‌ ನೇತೃತ್ವದಲ್ಲಿ ಈ ಮದ್ಯವನ್ನು ನಾಶ ಮಾಡಲಾಯಿತು.