ರೋಮಾಂಚನಗೊಳಿಸಿದ ಎತ್ತುಗಳ ಚಕ್ಕಡಿ ಸ್ಪರ್ಧೆ

| Published : Jun 18 2024, 12:47 AM IST

ರೋಮಾಂಚನಗೊಳಿಸಿದ ಎತ್ತುಗಳ ಚಕ್ಕಡಿ ಸ್ಪರ್ಧೆ
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಾಪುರ ದುರ್ಗಾದೇವತೆ ದುರ್ಗಾದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಚಕ್ಕಡಿ ಸ್ಪರ್ಧೆ ನಡೆಯಿತು.

ಕನ್ನಡಪ್ರಭ ವಾರ್ತೆ ಲೋಕಾಪುರ

ಏಳು ವರ್ಷಕ್ಕೊಮ್ಮೆ ಜರುಗುವ ದುರ್ಗಾದೇವಿ ಜಾತ್ರಾ ಮಹೋತ್ಸವ ನಿಮಿತ್ತ ಜಾತ್ರಾ ಕಮಿಟಿ ಹಾಗೂ ಗ್ರಾಮದ ಹಿರಿಯರು ಚಕ್ಕಡಿ ಓಡಿಸುವ ಸ್ಪರ್ಧೆ ಆಯೋಜಿಸಿದ್ದರು. ಲೋಕಾಪುರ ಹಾಗೂ ಸುತ್ತಮುತ್ತಲಿನ ಸಹಸ್ರಾರು ರೈತರು ರೋಮಾಂಚನಕಾರಿಯಾದ ಚಕ್ಕಡಿ ಓಡಿಸುವ ವಿವಿಧ ಸ್ಪರ್ಧೆಯನ್ನು ಕಣ್ತುಂಬಿಕೊಂಡರು.

ನಿಮಿಷದ ಸುತಬಂಡಿ ಸ್ಪರ್ಧೆ, ನಿಮಿಷದ ಚಕ್ಕಡಿ ಸ್ಪರ್ಧೆ, ಚಕ್ಕಡಿ ಸ್ಪರ್ಧೆಗಳು ನೆರೆದಿದ್ದ ರೈತರು, ಯುವಕರನ್ನು ರಂಜಿಸಿದವು. ವಿವಿಧೆಡೆಯಿಂದ ಬಂದಿದ್ದ ರೈತರು ತಮ್ಮ ಜೋಡಿಯೇ ಬಹುಮಾನ ಪಡೆಯಬೇಕು ಎಂಬ ಜಿದ್ದಿನಿಂದ ಎತ್ತುಗಳನ್ನು ಹುರುದುಂಬಿಸುತ್ತ ಚಕ್ಕಡಿ ಜೋರಾಗಿ ಓಡಿಸಲು ಪ್ರಯತ್ನಿಸುತ್ತಿದ್ದರೆ, ನೆರೆದ ಜನಸ್ತೋಮ ಕೇಕೆ, ಚಪ್ಪಾಳೆ ಮೂಲಕ ಹುರುದುಂಬಿಸಿದರು.

ಬ.ಘಟ್ಟದ ಚಕ್ಕಡಿ ಸ್ಪರ್ಧೆ: ಲೋನಾರವಾಡಿ ಗ್ರಾಮದ ಶ್ರೀಕಾಂತ ಖೋತ ಅವರ ಎತ್ತುಗಳು ಪ್ರಥಮ, ಸೂಳಿಭಾವಿಯ ಪ್ರಕಾಶ ಕುರಿ ಅವರ ಜೋಡಿ ದ್ವಿತೀಯ, ಲಕ್ಷಾನಟ್ಟಿಯ ಲೋಕಣ್ಣ ಪುರುವಾರ ತೃತೀಯ, ತೆಲಗಿ ಗ್ರಾಮದ ಅರ್ಜುನ ಮಾಳೆಪ್ಪಗೋಳ ಚತುರ್ಥ, ನೀರಲಕೇರಿ ಗ್ರಾಮದ ಅಮೋಘಸಿದ್ದೇಶ್ವರ ಅವರು ಎತ್ತುಗಳು ೫ನೇ ಬಹುಮನ ಗಳಿಸಿದವು.

ಒಂದು ಕುದರೆ ಒಂದು ಎತ್ತು ಸ್ಪರ್ಧೆ : ಅಥಣಿಯ ಸಹದೇವ ವಾಘರೆ ಜೋಡಿ ಪ್ರಥಮ, ಲೋಕಾಪುರದ ಭೀಮಶಿ ಬಾರಕೇರ ಜೋಡಿ ದ್ವಿತೀಯ, ಕಾತರಕಿಯ ರಾಮಲಿಂಗೇಶ್ವರ ಪ್ರಸನ್ ತೃತೀಯ, ಲಕ್ಷಾನಟ್ಟ ಗ್ರಾಮದ ಕುಶಾಲ ಮಾಳೇದ ಚತುರ್ಥ, ಜಾಲಿಕಟ್ಟಿ ಗ್ರಾಮದ ಮುರಗಮ್ಮದೇವಿ ಪ್ರಸನ್ ಎತ್ತುಗಳು ೫ನೇ ಸ್ಥಾನ ಗಿಟ್ಟಿಸಿಕೊಂಡವು.

ಘ.ಘಟ್ಟದ ಚಕ್ಕಡಿ ಸ್ಪರ್ಧೆ: ಸಾಂಬ್ರಾ ಗ್ರಾಮದ ದುರ್ಗಾದೇವಿ ಪ್ರಸನ್ ಜೋಡಿ ಪ್ರಥಮ, ಗೋರಬಾಳದ ಗ್ರಾಮದೇವಿ ಪ್ರಸನ್ ಜೋಡಿ ತೃತೀಯ, ಮುರಗೋಡದ ಮಹಾಂತೇಶ್ವರ ಪ್ರಸನ್ನ ಚತುರ್ಥ, ಲೋಕಾಪುರದ ದುರ್ಗಾದೇವಿ ಪ್ರಸನ್ನ 5ನೇ ಬಹುಮಾನ ಪಡೆದುಕೊಂಡವು.

ಅ. ಘಟ್ಟದ ಚಕ್ಕಡಿ ಸ್ಪರ್ಧೆ: ಮದಭಾವಿಯ ರಾಮಚಂದ್ರ ವಿಡೆ ಪ್ರಥಮ, ದಾನೋಳ್ಳಿಯ ಬಂಡಾ ಶಿಂಧೆ ದ್ವಿತೀಯ, ಅತಾಲಟ್ಟಿಯ ಸೂರ್ಯಕಾಂತ ಸೊನ್ನಾರ ತೃತೀಯ, ದಾನ್ನೊಳ್ಳಿಯ ಬಂಡಾ ಖಿಲಾರಿ ಚತುರ್ಥ, ತಳಂಬಳಿಯ ಪುತೀರ ಬೋಸಕರ ೫ನೇ ಸ್ಥಾನ, ನಂವಾಳದ ರಂಜಿತ ಪಾಟೀಲ ಆರನೇ, ಸೂಳಿಭಾವಿಯ ಪ್ರಕಾಶ ಹುಲ್ಯಾಳ ಎತ್ತುಗಳು ಏಳನೇ ಬಹುಮಾನ ಪಡೆದವು.