ಕಳೆದ 2014ರಲ್ಲಿ ಡಾ.ಸ್ವಾಮಿನಾಥನ್ ವರದಿ ಜಾರಿ ಮಾಡುವ ಭರವಸೆ ನೀಡಿದ್ದೀರಿ. ಅಲ್ಲದೆ 2022ರ ವೇಳೆಗೆ ರೈತರ ಆದಾಯ ದ್ವಿಗುಣ ಮಾಡುವ ಆಶ್ವಾಸನೆ ನೀಡಿದ್ದೀರಿ. ಈಗ ತಾವು ನೀಡಿದ ಭರವಸೆಗಳು ರೈತರ ಮೂಗಿಗೆ ತುಪ್ಪ ಸವರುವ ನೆಪಮಾತ್ರದ ಪ್ರಯತ್ನಗಳಾಗಿವೆ. ಇದನ್ನು ಗಮನಿಸಿದರೆ ತಾವು ರೈತ ಮುಕ್ತ ಭಾರತ ಮಾಡುವ ಹುನ್ನಾರವಾಗಿದೆ.

ಮದ್ದೂರು:

ಕಬ್ಬು ಮತ್ತು ಅದರ ಉತ್ಪನ್ನಗಳನ್ನು ಅಬಕಾರಿ ವ್ಯಾಪ್ತಿಯಿಂದ ಹೊರಗಿಡುವಂತೆ ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ದೇಶಹಳ್ಳಿ ಮೋಹನ್ ಕುಮಾರ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಗ್ರಪಡಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಬ್ಬು ಹಾಗೂ ಕಬ್ಬಿನ ಉತ್ಪನ್ನಗಳನ್ನು ಅಬಕಾರಿ ವ್ಯಾಪ್ತಿಯಿಂದ ಹೊರಗಿಟ್ಟರೆ ಪ್ರತಿ ಟನ್ ಕಬ್ಬಿಗೆ 10 ಸಾವಿರ ರು ಕಬ್ಬು ಬೆಳೆಗಾರರಿಗೆ ದೊರಕಲಿದೆ. ಈ ಮೂಲಕ ಕಬ್ಬು ಬೆಳೆಗಾರರ ಶೋಷಣೆಗೆ ಕಡಿವಾಣ ಹಾಕುವಂತೆ ಮನವಿ ಮಾಡಿದ್ದಾರೆ.

ಕಳೆದ 2014ರಲ್ಲಿ ಡಾ.ಸ್ವಾಮಿನಾಥನ್ ವರದಿ ಜಾರಿ ಮಾಡುವ ಭರವಸೆ ನೀಡಿದ್ದೀರಿ. ಅಲ್ಲದೆ 2022ರ ವೇಳೆಗೆ ರೈತರ ಆದಾಯ ದ್ವಿಗುಣ ಮಾಡುವ ಆಶ್ವಾಸನೆ ನೀಡಿದ್ದೀರಿ. ಈಗ ತಾವು ನೀಡಿದ ಭರವಸೆಗಳು ರೈತರ ಮೂಗಿಗೆ ತುಪ್ಪ ಸವರುವ ನೆಪಮಾತ್ರದ ಪ್ರಯತ್ನಗಳಾಗಿವೆ. ಇದನ್ನು ಗಮನಿಸಿದರೆ ತಾವು ರೈತ ಮುಕ್ತ ಭಾರತ ಮಾಡುವ ಹುನ್ನಾರವಾಗಿದೆ ಎಂದು ಟೀಕಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರೇ ತಾವು ಕಬ್ಬಿಗೆ ಎಂಎಸ್ ಪಿ ನಗದು ಬೇಡ. ಎಫ್‌ಆರ್‌ಪಿ ನಿಗದಿ ಮಾಡುವುದು, ಸಾಲ ಮನ್ನಾ ಮಾಡುವ ಉಸಿ ಭರವಸೆ ನೀಡುವುದು ಬಿಟ್ಟು ಮೊದಲು ಕಬ್ಬನ್ನು ಅಬಕಾರಿ ವ್ಯಾಪ್ತಿಯಿಂದ ಹೊರಗಿಡುವುದನ್ನು ಮಾಡುವಂತೆ ಸಲಹೆ ನೀಡಿದ್ದಾರೆ.

ಕೇಂದ್ರ ಸಚಿವ ಎಚ್‍.ಡಿ.ಕುಮಾರಸ್ವಾಮಿ ಚಿಲ್ಲರೆ ರಾಜಕಾರಣ ಬಿಟ್ಟು ಅಬಕಾರಿ ವ್ಯಾಪ್ತಿ ಕಬ್ಬನ್ನು ಹೊರಗೆ ಇಡುವಂತೆ ಕೇಂದ್ರದ ಮೇಲೆ ಒತ್ತಾಯ ತರುವ ಕೆಲಸ ಮಾಡಬೇಕು. ರಾಜ್ಯದ ಎಲ್ಲಾ ಸಂಸದರು ಈ ಬಗ್ಗೆ ಧ್ವನಿ ಎತ್ತಿ ಹೋರಾಟ ಪ್ರಾರಂಭ ಮಾಡುವಂತೆ ಆಗ್ರಹಿಸಿದ್ದಾರೆ.