ಸಾರಾಂಶ
ಕಾಂಗ್ರೆಸ್ ಪಕ್ಷದಿಂದ ನನ್ನನ್ನು ಉಚ್ಛಾಟಿಸಿದ ಪತ್ರ ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆಯೇ ಹೊರತು, ನನ್ನ ಕೈಗಾಗಲೀ, ನನ್ನ ವಿಳಾಸಕ್ಕಾಗಲೀ ತಲುಪಿಲ್ಲ ಎಂದು ಸ್ವಾಭಿಮಾನಿ ಬಳಗದ ಪ್ರಮುಖ, ಲೋಕಸಭಾ ಚುನಾವಣೆ ಪರಾಜಿತ ಅಭ್ಯರ್ಥಿ ಜಿ.ಬಿ.ವಿನಯಕುಮಾರ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ, ದಾವಣಗೆರೆ
ಕಾಂಗ್ರೆಸ್ ಪಕ್ಷದಿಂದ ನನ್ನನ್ನು ಉಚ್ಛಾಟಿಸಿದ ಪತ್ರ ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆಯೇ ಹೊರತು, ನನ್ನ ಕೈಗಾಗಲೀ, ನನ್ನ ವಿಳಾಸಕ್ಕಾಗಲೀ ತಲುಪಿಲ್ಲ ಎಂದು ಸ್ವಾಭಿಮಾನಿ ಬಳಗದ ಪ್ರಮುಖ, ಲೋಕಸಭಾ ಚುನಾವಣೆ ಪರಾಜಿತ ಅಭ್ಯರ್ಥಿ ಜಿ.ಬಿ.ವಿನಯಕುಮಾರ ತಿಳಿಸಿದ್ದಾರೆ.ನನ್ನನ್ನು 6 ವರ್ಷದಿಂದ ಪಕ್ಷದಿಂದ ಉಚ್ಚಾಟಿಸಿದ ಬಗ್ಗೆ ಪತ್ರ ವಾಟ್ಸಪ್ ಗುಂಪುಗಳಲ್ಲಿ ಹರಿದಾಡುತ್ತಿದೆ. ಈ ಪತ್ರ 27.4.2024 ಎಂಬುದಾಗಿದ್ದು, ಪತ್ರ ಸಿದ್ಧವಾಗಿ, ವಾಟ್ಸಪ್ ಗ್ರೂಪ್‌ಗಳಿಗೆ ತಲುಪಲು ಬರೋಬ್ಬರಿ 4 ತಿಂಗಳ ಸಮಯ ಹಿಡಿದಿದೆ. ಉಚ್ಚಾಟನಾ ಆದೇಶ ಪತ್ರದ ಅಸಲಿಯತ್ತು ಗೊತ್ತಿಲ್ಲವಾದರೂ, ನನ್ನ ಹೆಸರನ್ನು ಅದರಲ್ಲಿ ಉಲ್ಲೇಖ ಆಗಿದ್ದರಿಂದ ಪ್ರಸ್ತಾಪ ಮಾಡುತ್ತಿದ್ದೇನೆ. ಲೋಕಸಭೆ ಚುನಾವಣೆ ಅನುಭವ ಹಾಗೂ ಪಾಠವು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುವ ತಂತ್ರಗಳನ್ನು ರೂಪಿಸುವಷ್ಟು ಕಲಿಸಿದೆ. ದಾವಣಗೆರೆ ಲೋಕಸಭಾ ಕ್ಷೇತ್ರದ 42,907 ಸ್ವಾಭಿಮಾನಿ ಮತದಾರು ನನ್ನಲ್ಲಿ ಆತ್ಮಸ್ಥೈರ್ಯ ತುಂಬಿದ್ದಾರೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷವು ಹೊಸಬರಿಗೆ ಸ್ವಾಗತ ಕೋರುವುದಿಲ್ಲ. ಹೊಸಬರನ್ನು ಗುರುತಿಸಿ, ಪಕ್ಷದ ಶಕ್ತಿ ವೃದ್ಧಿಗೆ ಅಂತಹವರನ್ನು ಬಳಸಿಕೊಳ್ಳುವುದಿಲ್ಲ ಎಂಬುದು ಪತ್ರ ಪುರಣಾದಿಂದ ಸ್ಪಷ್ಟವಾಗುತ್ತದೆ. ಶೋಷಿತ ಅಹಿಂದ ವರ್ಗಗಳು ಬರೀ ಓಟು ಹಾಕುವುದಕ್ಕೆ, ಬಾವುಟ, ಫ್ಲೆಕ್ಸ್, ಬ್ಯಾನಕ್ ಕಟ್ಟಲು, ಶಾಮಿಯಾನ, ಕುರ್ಚಿ ಹಾಕಲು, ಪೋಸ್ಟರ್ ಅಂಟಿಸಲು, ಪ್ರತಿಭಟನೆಗಳಲ್ಲಿ ಸಂಖ್ಯಾಬಲ ತೋರಿಸುವುದಕ್ಕಷ್ಟೇ ಸೀಮಿತಗೊಳಿಸುವ ಕೆಲಸವನ್ನು ಕಾಂಗ್ರೆಸ್ ಪಕ್ಷದಲ್ಲಿ ಆಗುತ್ತಿದೆ ಎಂದು ಬಿ.ವಿನಯಕುಮಾರ ದೂರಿದ್ದಾರೆ.- - - -2ಕೆಡಿವಿಜಿ9: ಜಿ.ಬಿ.ವಿನಯಕುಮಾರ