ಪಂಚ ಇಂದ್ರಿಯಗಳಲ್ಲಿ ನೇತ್ರವು ಅಮೂಲ್ಯ

| Published : May 15 2024, 01:38 AM IST

ಸಾರಾಂಶ

ರಾಯಬಾಗ ತಾಲೂಕಿನ ಹಂದಿಗುಂದ ಗ್ರಾಮದಲ್ಲಿ ಮೂಡಲಗಿ ಕಣ್ಣಿನ ಆಸ್ಪತ್ರೆ ಸಂಯುಕ್ತ ಆಶ್ರಯದಲ್ಲಿ ಇತ್ತೀಚಿಗೆ ಹಮ್ಮಿಕೊಂಡ ನೇತ್ರ ಉಚಿತ ತಪಾಸಣಾ ಶಿಬಿರದಲ್ಲಿ ಮೂಡಲಗಿ ಕಣ್ಣಿನ ಆಸ್ಪತ್ರೆಯ ಮುಖ್ಯಸ್ಥರಾದ ಡಾ.ಬಿ.ಬಿ.ಅವರಾದಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಪಾಲಬಾವಿ

ನೇತ್ರವು ಮನುಷ್ಯನ ಜೀವನದಲ್ಲಿ ಬಹಳ ಮಹತ್ವ ಪಡೆದುಕೊಂಡಿದೆ ಎಂದು ಮೂಡಲಗಿ ಕಣ್ಣಿನ ಆಸ್ಪತ್ರೆಯ ಮುಖ್ಯಸ್ಥರಾದ ಡಾ.ಬಿ.ಬಿ.ಅವರಾದಿ ಹೇಳಿದರು.

ರಾಯಬಾಗ ತಾಲೂಕಿನ ಹಂದಿಗುಂದ ಗ್ರಾಮದಲ್ಲಿ ಮೂಡಲಗಿ ಕಣ್ಣಿನ ಆಸ್ಪತ್ರೆ ಸಂಯುಕ್ತ ಆಶ್ರಯದಲ್ಲಿ ಇತ್ತೀಚಿಗೆ ಹಮ್ಮಿಕೊಂಡ ನೇತ್ರ ಉಚಿತ ತಪಾಸಣಾ ಶಿಬಿರದಲ್ಲಿ ಮಾತನಾಡಿದ ಅವರು, ಮಾನವನ ಶರೀರದಲ್ಲಿ ಕಿವಿ, ನಾಲಿಗೆ, ಮೂಗು, ಚರ್ಮ ಎಷ್ಟು ಅವಶ್ಯಕತೆ ಇದೆಯೋ ನೇತ್ರವೂ ಅಷ್ಟೇ ಅವಶ್ಯವಾಗಿದೆ ಎಂದು ತಿಳಿಸಿದರು.ಶಿಬಿರದಲ್ಲಿ ಆಧುನಿಕ ತಂತ್ರಜ್ಞಾನದ ಯಂತ್ರೋಪಕರಣಗಳನ್ನು ಬಳಸಿ ನೂರಕ್ಕೂ ಹೆಚ್ಚು ಜನರಿಗೆ ಕಣ್ಣು ತಪಾಸಣೆ ಮಾಡಿದರು. ಕಪ್ಪಲಗುದ್ದಿ, ಸುಲ್ತಾನಪುರ, ಮಾರಾಕುಡಿ, ಪಾಲಬಾವಿ, ಸೈದಾಪುರ, ಮುಗಳಖೋಡ, ಹಂದಿಗುಂದ ನೆರೆಯ ಗ್ರಾಮಗಳಿಂದ ಆಗಮಿಸಿದ ಸಾರ್ವಜನಿಕರು ಕಣ್ಣಿನ ಚಿಕಿತ್ಸೆ ಮಾಡಿಸಿಕೊಂಡರು. ಈ ಸಂದರ್ಭದಲ್ಲಿ ಡಾ.ಸೂರಜ ಕೋರೆ, ಡಾ.ಅವಿನಾಶ ಅವರಾದಿ, ಶ್ರೀಶೈಲ ಬಡಿಗೇರ, ಸಿ.ಎಸ್.ಹಿರೇಮಠ, ಶಿವಾಜಿ ಮೇತ್ರಿ, ಹನುಮಂತ ನಾವಿ, ಅಡಿವೆಪ್ಪ ಉಳ್ಳಾಗಡ್ಡಿ, ಜಗದೀಶ ಗಸ್ತಿ, ಮಹಾದೇವ ಒಂಟಿ, ಶಂಕರ ಬೆಳಗಲಿ, ರವೀಂದ್ರ ಗಸ್ತಿ, ಪಾಂಡುರಂಗ ಜೆಡೆಪ್ಪಗೋಳ, ವಿಠ್ಠಲ ಕುರಿಬಾಗಿ, ವೀರಭದ್ರ ನಾವಿ, ಶಂಬು ನಾವಿ, ಗಣಪತಿ ಸುತಾರ, ಮರಿಯಾ ಕೆಂಚಣ್ಣವರ, ನೇತ್ರಾ ಕಟ್ಟಿಮನಿ ಸೇರಿದಂತೆ ಗ್ರಾಮಸ್ಥರು ಇದ್ದರು.