ಶಾಲೆಗೆ ಹುಸಿ ಬಾಂಬ್‌ ಬೆದರಿಕೆ ಈಮೇಲ್‌ ಸಂದೇಶ: ತಪಾಸಣೆ

| Published : Feb 05 2025, 01:16 AM IST

ಸಾರಾಂಶ

Fake bomb threat email to school: Investigation underway

-ವಿದ್ವಂಸಕ ಕೃತ್ಯ ತಪಾಸಣೆ ದಳದಿಂದ ಶಾಲೆ ತಪಾಸಣೆ । ಮುನ್ನೆಚ್ಚರಿಕೆಯಾಗಿ ಶಾಲಾ ಮಕ್ಕಳಿಗೆ ರಜೆ ಘೋಷಿಸಿದ ಆಡಳಿತ ಮಂಡಳಿ

----

ಕನ್ನಡಪ್ರಭವಾರ್ತೆ ಕಲಬುರಗಿ

ಕರುಣೇಶ್ವರ ನಗರ ಬಡಾವಣೆಯ ಚಂದ್ರಶೇಖರ ಪಾಟೀಲ್ ಶಾಲೆಗೆ ಬಾಂಬ್ ಬೆದರಿಕೆ ಈಮೇಲ್‌ ಬಂದ ಹಿನ್ನೆಲೆ ಮಂಗಳವಾರ ಶಾಲೆ ಆರಂಭದ ಸಮಯದಲ್ಲಿ ಆತಂಕದ ವಾತಾವರಣ ಉಂಟಾಗಿತ್ತು.

ಶಾಲೆ ಆರಂಭವಾಗುತ್ತಿದ್ದಂತೆಯೇ ಆಡಲಿತ ಮಂಡಳಿಯ ಉದ್ಯೋಗಿಗಳು ಈಮೇಲ್‌ ಪರಿಶೀಲನೆ ಮಾಡುವಾಗ ಈಮೇಲ್‌ನಲ್ಲಿ ಶಾಲೆಗೆ ಆರ್‌ಡಿಎಕ್ಸ್‌ ಬಾಂಬ್‌ ಇಟ್ಟು ಸ್ಫೋಟಿಸುವ ಬೆದರಿಕೆ ಸಂದೇಶ ಗೋಚರವಾಗಿತ್ತು.

ಇದರಿಂದ ಭೀತಿಗೊಂಡ ಸಿಬ್ಬಂದಿ ತಕ್ಷಣ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾರೆ. ಆತಂಕದ ವಾತಾವರಣ ನಿರ್ಮಾಣವಾಗಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ಶಾಲೆಯ ಮಕ್ಕಳಿಗೆ ರಜೆ ನೀಡಿ ಮನೆಗೆ ಕಳುಹಿಸಿದ್ದಾರೆ.

ಸುದ್ದಿ ತಿಳಿದ ತಕ್ಷಣ ಶಾಲಾ ಆವರಣಕ್ಕೆ ಧಾವಿಸಿದ ಬಾಂಬ್ ಪತ್ತೆ ಹಾಗೂ ನಿಷ್ಕ್ರೀಯ ದಳ ಹಾಗೂ ವಿದ್ವಂಸಕ ಕೃತ್ಯ ತಪಾಸಣೆ ದಳ ತಂಡದಿಂದ ಸ್ಥಳ ಪರಿಶೀಲಿಸಲಾಗಿ ಯಾವುದೇ ರೀತಿಯ ಬಾಂಬ್ ಪತ್ತೆಯಾಗಿಲ್ಲ. ಇದೊಂದು ಸುಳ್ಳು ಬೆದರಿಕೆ ಈ-ಮೇಲ್ ಸಂದೇಶವೆಂದು ಧೃಢಪಟ್ಟಾಗ ಶಾಲಾ ಆಡಳಿತ ಮಂಡಳಿ, ಮಕ್ಕಳ ಪೋಷಕರು ನಿರಾಳರಾಗಿದ್ದಾರೆ.

ಪೊಲೀಸ್‌ ತಂಡ ಶಾಲೆಯ ಎಲ್ಲಾ ತರಗತಿ ಕೋಣೆಗಳು, ಡೆಸ್ಕ್‌, ಹೂವಿ ಕುಂಡಗಳು, ಎಲ್ಲಾ ಕೋಣೆಗಳು ಸೇರಿದಂತೆ 3 ಗಂಟೆಗಳ ಕಾಲ ಶಾಲೆಯನ್ನು ತಪಾಸಣೆಗೊಳಪಡಿಸಿದ್ದರು. ಎಲ್ಲಿಯೂ ಬಾಂಬ್‌ ಸುಳಿವು ಪತ್ತೆಯಾಗಲಿಲ್ಲ. ಇದೊಂದು ಹುಸಿಬಾಂಬ್‌ ಬೆದರಿಕೆ ಈಮೇಲ್‌ ಎಂದು ಪೊಲೀಸರು ತೀರ್ಮಾನಕ್ಕೆ ಬಂದಿದ್ದಾರೆ.

ಶಾಲೆಗೆ ಭೇಟಿ ನೀಡಿದ್ದ ನಗರ ಪೊಲೀಸ್‌ ಆಯುಕ್ತ ಡಾ. ಶರಣಪ್ಪ ಢಗೆ ಇದೊಂದು ಹುಸಿ ಬಾಂಬ್‌ ಕರೆ ಎಂದು ಹೇಳಿದ್ದಾರೆ. ತಮಿಳುನಾಡು ಮೂಲದಿಂದ ಬಂದ ಈಮೇಲ್‌ನಲ್ಲಿ ಬಾಂಬ್‌ ಸ್ಫೋಟದ ಸಂದೇಶವಿತ್ತು. ಇದು ಜಗನ್‌@ಮೇಲ್‌ನಿಂದ ಬಂದಿದೆ. ಆದರೆ, ಈ ಸಂದೇಶದಲ್ಲಿ ತಮಿಳುನಾಡು ರಾಜಕಾರಣದ ಮಾಹಿತಿಯೇ ಇತ್ತು. ಹೀಗಾಗಿ ಇದು ಮಿಸ್ಸಿಂಗ್‌ ಮೇಲ್‌, ಎಲ್ಲೋ ಕಳುಹಿಸಲು ಹೋಗಿ ಇಲ್ಲಿಗೆ ಮೇಲ್‌ ಆಗಿರೋ ಶಂಕೆಯೂ ಇದೆ ಎಂದಿದ್ದಾರೆ.

ಶಾಲೆಗೆ ಬಾಂಬ್ ಬೆದರಿಕೆ ಸಂದೇಶ ಬಂದಿದೆ ಎಂದಾಕ್ಷಣ ಪೊಲೀಸ್ ಹಾಗೂ ಬಾಂಬ್ ನಿಷ್ಕ್ರೀಯ ದಳದಿಂದ ತೀವ್ರ ತಪಾಸಣೆ ಮಾಡಲಾಗಿದೆ. ಶಾಲೆಯ ಎಲ್ಲಾ ಮೂಲೆಗಳಲ್ಲೂ ತಪಾಸಣೆ ನಡೆಸಲಾಗಿದೆ. ಈ ಮೇಲ್‌ ತಮಿಳುನಾಡಿನಿಂದ ಬಂದ ಕಾರಣ ಅಲ್ಲಿನ ಕೌಂಟರ್‌ ಪಾರ್ಟ್‌ ಪೊಲೀಸರು, ಗುಪ್ತವಾರ್ತೆ ಪೊಲೀಸ್‌ ತಂಡಕ್ಕೂ ಮಾಹಿತಿ ನೀಡಲಾಗಿದೆ. ಅಶೋಕ್ ನಗರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಡಾ. ಶರಣಪ್ಪ ಹೇಳಿದ್ದಾರೆ.

-------------

....ಕೋಟ್....

ಕಲಬುರಗಿ ನಗರದ ಖಾಸಗಿ ವಿದ್ಯಾಸಂಸ್ಥೆಯ ಈಮೇಲ್‌ಗೆ ಹುಸಿ ಬಾಂಬ್ ಸಂದೇಶ ಬಂದಿದ್ದು, ನಾನೇ ಖುದ್ದು ಪರಿಶೀಲನೆ ಮಾಡಿರುವೆ. ಜೊತೆಗೆ ಬಾಂಬ್ ಪತ್ತೆ ಹಾಗೂ ನಿಷ್ಕ್ರೀಯ ದಳ, ವಿದ್ವಂಸಕ ಕೃತ್ಯ ತಪಾಸಣೆ ದಳ ತಂಡದಿಂದ ಸ್ಥಳ ಪರಿಶೀಲಿಸಲಾಗಿ ಯಾವುದೇ ರೀತಿಯ ಬಾಂಬ್ ಪತ್ತೆಯಾಗಿರುವುದಿಲ್ಲ. ಇದೊಂದು ಸುಳ್ಳು ಬೆದರಿಕೆ ಈಮೇಲ್ ಸಂದೇಶವಾಗಿದ್ದು, ವಿದ್ಯಾರ್ಥಿಗಳು, ಪೋಷಕರು, ಸಾರ್ವಜನಿಕರು ಯಾವುದೇ ರೀತಿಯ ಆತಂಕಪಡುವ ಅಗತ್ಯವಿಲ್ಲ.

ಡಾ. ಶರಣಪ್ಪ ಎಸ್‌ಡಿ, ಪೊಲೀಸ್‌ ಆಯುಕ್ತರು, ಕಲಬುರಗಿ

------

ಫೋಟೋ: ಬಾಂಬ್‌ 1, ಬಾಬ್‌ 2 ಮತ್ತು ಬಂಬ್‌ 3

ಕಲಬುರಗಿಯಲ್ಲಿನ ಕರುಣೇಶ್ವರ ಬಡಾವಣೆಯಲ್ಲಿರುವ ಚಂದ್ರಕಾಂತ ಪಾಟೀಲ್‌ ಶಾಲೆಗೆ ಬಾಂಬ್‌ ಬೆದರಿಕೆ ಮೇಲ್‌ ಬಂದ ಹಿನ್ನೆಲೆ ಪೊಲೀಸರು ಶಾಲೆಯ ಎಲ್ಲಾ ತರಗತಿ ಕೋಣೆ ಸೇರಿದಂತೆ ತಪಾಸಣೆ ನಡೆಸಿದರು.

--

ಫೋಟೋ: ಬಾಂಬ್‌ 3 ಮತ್ತು ಬಾಂಬ್‌ 4

ಚಂದ್ರಕಾಂತ ಪಾಟೀಲ್ ಶಾಲೆಯ ಆವರಣದಲ್ಲೆಲ್ಲಾ ಬಾಂಬ್‌ಗಾಗಿ ಪೊಲೀಸರು 3 ಗಂಟೆ ಶೋಧ ನಡೆಸಿದರು.

--

ಫೋಟೋ- ಬಾಂಬ್‌ 5 ಮತ್ತು ಬಾಂಬ್‌ 6

ಕರುಣೇಶ್ವರ ನಗರದಲ್ಲಿರುವ ಚಂದ್ರಕಾಂತ ಪಾಟೀಲ್ ಶಾಲಾವರಣಕ್ಕೆ ನಗರ ಪೊಲೀಸ್‌ ಆಯುಕ್ತ ಡಾ. ಸಱಣಪ್ಪ ಬೇಟಿ ನೀಡಿ ಪರಿಶೀಲನೆ ನಡೆಸಿದರು.

--

ಫೋಟೋ- ಬಾಂಬ್‌ 7

ಕಲಬುರಗಿಯ ಕರುಣೇಶ್ವರ ಕಾಲೋನಿಯಲ್ಲಿರುವ ಚಂದ್ರಶೇಖರ ಪಾಟೀಲ್ ಶಾಲೆಗೆ ಬಾಂಬ್ ಬೆದರಿಕೆ ಹಿನ್ನೆಲೆ ಹಿರಿಯ ಪೊಲೀಸ್‌ ಅಧಕಾರಿಗಳ ಭೇಟಿ ಹಾಗೂ ಪರಿಶೀಲನೆ