ಸಾರಾಂಶ
ಬೀದರ್: ಜಿಲ್ಲೆಯಲ್ಲಿ ಕಾನೂನಿನ ಕಣ್ಣಿಗೆ ಮಣ್ಣೆರಚಿ ರಾಜಾರೋಷವಾಗಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಬರುವ ಬೇಡಜಂಗಮ, ಭೋವಿ ಮತ್ತು ಮಾಲಜಂಗಮ ಇವುಗಳ ಪದವನ್ನು ದುರುಪಯೋಗ ಪಡಿಸಿಕೊಂಡು ಇವುಗಳ ಹೆಸರಿನಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ನೀಡುವಲ್ಲಿ ಸಂಬಂಧಪಟ್ಟ ಕಂದಾಯ ಅಧಿಕಾರಿಗಳು ತಮ್ಮ ಜವಾಬ್ದಾರಿ ಮರೆತು, ಅಧಿಕಾರ ದುರ್ಬಳಕೆ ಮಾಡಿಕೊಂಡು ಮೇಲ್ಜಾತಿ ಜನಾಂಗಕ್ಕೆ ಸೇರಿದರೂ ಸರಿಯಾದ ರೀತಿಯಲ್ಲಿ ಪರಿಶೀಲನೆ ಮಾಡದೇ ಉದ್ದೇಶಪೂರ್ವಕವಾಗಿ ಸುಳ್ಳು ಜಾತಿ ಪ್ರಮಾಣ ಪತ್ರಗಳು ರಾಜಾರೋಷವಾಗಿ ನೀಡಿದ್ದಾರೆ ಎಂದು ಪರಿಶಿಷ್ಟ ಜಾತಿ/ಪಂಗಡ ಸುಳ್ಳು ಜಾತಿ ಪ್ರಮಾಣ ಪತ್ರಗಳ ವಿರೋಧಿ ಹೋರಾಟ ಸಮಿತಿ ದೂರಿದೆ. ಈ ಕುರಿತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಈ ಗಂಭೀರ ವಿಷಯವನ್ನು ಪುನಃ ತಮ್ಮ ಗಮನಕ್ಕೆ ತರಬೇಕೆಂದು ಹಾಗೂ ಜಿಲ್ಲೆಯಲ್ಲಿ ಕೆಲವರಿಗೆ ಜಾತಿ ಪ್ರಮಾಣ ಪತ್ರ ನೀಡಿರುವ ಅಧಿಕಾರಿಗಳ ಮೇಲೆ ಈ ಕೂಡಲೇ ಕಾನೂನಿನ ಸೂಕ್ತ ಕ್ರಮಕ್ಕೆ ಕೈಗೊಳ್ಳುವಂತೆ ಆಗ್ರಹಿಸಲಾಯಿತು. ಸಮಿತಿ ಗೌರವಾಧ್ಯಕ್ಷ ಉಮೇಶಕುಮಾರ ಸೋರಳ್ಳಿಕರ, ಜಿಲ್ಲಾಧ್ಯಕ್ಷ ಅಭಿ ಕಾಳೆ, ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಕುಮಾರ ಮೂಲಭಾರತಿ, ಮಹೇಶ ಗೋರನಾಳ್, ರಾಜಕುಮಾರ ಗುನಳ್ಳಿ, ಸಂತೋಷ ಎಣಕೂರೆ, ಚಂದ್ರಕಾಂತ ಆರ್. ನಿರಾಟೆ ಉಪಸ್ಥಿತರಿದ್ದರು.
------