ಮುಖ್ಯಮಂತ್ರಿಗಳ ಚಿನ್ನದ ಪದಕ ವಿಜೇತ ಅಧಿಕಾರಿ ಸಿಬ್ಬಂದಿಗೆ ಅಭಿನಂದನೆ

| Published : Apr 07 2025, 12:33 AM IST

ಮುಖ್ಯಮಂತ್ರಿಗಳ ಚಿನ್ನದ ಪದಕ ವಿಜೇತ ಅಧಿಕಾರಿ ಸಿಬ್ಬಂದಿಗೆ ಅಭಿನಂದನೆ
Share this Article
  • FB
  • TW
  • Linkdin
  • Email

ಸಾರಾಂಶ

ಮುಖ್ಯಮಂತ್ರಿಗಳ ಚಿನ್ನದ ಪದಕ ವಿಜೇತ ಅಧಿಕಾರಿ, ಸಿಬ್ಬಂದಿಗೆ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ಕಚೇರಿಯಲ್ಲಿ ಶುಕ್ರವಾರ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು 2022, 2023, 2024 ನೇ ಸಾಲಿನಲ್ಲಿ ಮುಖ್ಯಮಂತ್ರಿಗಳ ಚಿನ್ನದ ಪದಕ ವಿಜೇತ ಅಧಿಕಾರಿ, ಸಿಬ್ಬಂದಿಗೆ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ಕಚೇರಿಯಲ್ಲಿ ಶುಕ್ರವಾರ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ನಗರದ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ, ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಮಾದಕ ವಸ್ತುಗಳನ್ನು ಪತ್ತೆ ಹಚ್ಚಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ಅತೀ ಉತ್ತಮ ಮತ್ತು ಶ್ಲಾಘನೀಯ ಕರ್ತವ್ಯ ನಿರ್ವಹಿಸಿ 2024 ನೇ ಸಾಲಿನ ಮುಖ್ಯ ಮಂತ್ರಿ ಚಿನ್ನದ ಪದಕ ವಿಜೇತರನ್ನು ಗೌರವಿಸಿ ಅಭಿನಂದಿಸಲಾಯಿತು.

ಪೊಲೀಸ್ ಕಮಿಷನರ್‌ ಅನುಪಮ್ ಅಗರ್‌ವಾಲ್, ಎಸಿಪಿ ಧನ್ಯಾ ನಾಯಕ್, ಪೊಲೀಸ್ ನಿರೀಕ್ಷರಾದ ಬಾಲಕೃಷ್ಣ ಎಚ್.ಎನ್, ಮಹೇಶ್ ಪ್ರಸಾದ್, ಪಿ.ಎಸ್. ಗಳಾದ ಗುರಪ್ಪ ಕಾಂತಿ, ಸಂತೋಷ್ ಕುಮಾರ್ ಡಿ., ರಾಘವೇಂದ್ರ ನಾಯ್ಕ, ಎ.ಎಸ್.ಐ ಶೀನಪ್ಪ, ಎಆರ್‌ಎಸ್‌ಐ ರಿತೇಶ್, ಸಿ.ಎಚ್.ಸಿ ರೆಜಿ ವಿ.ಎಂ, ಅಂಜನಪ್ಪ, ಭೀಮಪ್ಪ ಉಪ್ಪಾರ, ಅಣ್ಣಪ್ಪ, ಉಮೇಶ್, ಸುಧೀರ್ ಕುಮಾರ್, ಸಂತೋಷ್ ಕುಮಾರ್, ದಾಮೋದರ್ ಕೆ, ವಿಜಯ್ ಶೆಟ್ಟಿ, ಸಿ.ಪಿ.ಸಿ ಪುರುಷೋತ್ತಮ್, ಶ್ರೀಧರ ವಿ, ಪ್ರಕಾಶ್ ಎಸ್. ಸತ್ತಗಿಹಳ್ಳಿ, ಅಭಿಷೇಕ್ ಎ.ಆರ್, 2023 ನೇ ಸಾಲಿನ ಮುಖ್ಯಮಂತ್ರಿ ಚಿನ್ನದ ಪದಕ ವಿಜೇತರಾದ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ, ಪಿ.ಎಸ್.ಐ ಶರಣಪ್ಪ ಭಂಡಾರಿ, ಎಎಸ್‌ಐ ಮೋಹನ್ ಕೆ.ವಿ, ಸಿಎಚ್‌ಸಿ ನಾಗರಾಜ ಚಂದರಗಿ, ಶ್ರೀಮುತ್ತು ಎಂ, ಎಫ್.ಪಿ.ಬಿ. 2022 ನೇ ಸಾಲಿನ ಮುಖ್ಯಮಂತ್ರಿ ಚಿನ್ನದ ಪದಕ ವಿಜೇತರಾದ ಪೊಲೀಸ್ ನಿರೀಕ್ಷಕರಾದ ಮೋಹನ್ ಕೊಟ್ಟಾರಿ, ಪಿ.ಎಸ್.ಐ ಸುದೀಪ್ ಎಂ.ವಿ, ಎಎಸ್‌ಐ ಸಂತೋಷ್ ಕುಮಾರ್ ಕೆ, ಸಿಎಚ್‌ಸಿ ಮಣಿಕಂಠ ಎಂ. ಇವರನ್ನು ಗೌರವಿಸಿ ಅಭಿನಂದಿಸಲಾಯಿತು.