ಕಾಂಗ್ರೆಸ್‌ ಅಭ್ಯರ್ಥಿ ರಾಧಾಕೃಷ್ಣಗೆ ಸ್ವಾಗತ ಕೋರಿದ ಅಭಿಮಾನಿಗಳು

| Published : Mar 29 2024, 12:55 AM IST

ಸಾರಾಂಶ

ಪ್ರಿಯಾಂಕ್‌ ಖರ್ಗೆ ಅಭಿಮಾನಿ ಬಳಗದ ತಾಲೂಕು ಘಟಕದ ಅಧ್ಯಕ್ಷ ಶರಣು ಗೌರೆ ಅವರು, ತಮ್ಮ ತಂಡದ ಸದಸ್ಯರೊಂದಿಗೆ ದಾರಿಯುದ್ದಕ್ಕೂ ಹೂವಿನ ಹಾರಿಸುತ್ತ ಸ್ವಾಗತಿಸಿದರು.

ಕನ್ನಡಪ್ರಭ ವಾರ್ತೆ ಕಮಲಾಪುರ

ಕಲಬುರಗಿ ಲೋಕಸಭಾ ಮೀಸಲು ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಘೋಷಣೆಯಾದ ನಂತರ ರಾಧಾಕೃಷ್ಣ ಅ‍ವರು ಮೊದಲ ಬಾರಿಗೆ ಕಲಬುರಗಿಗೆ ಭೇಟಿ ನೀಡುವ ದಾರಿಯಲ್ಲಿ ಕಮಲಾಪುರ ತಾಲೂಕಿನ ಗಡಿಗ್ರಾಮ ಕಿಣ್ಣಿ ಸಡಕ್‌ನಲ್ಲಿ ಅವರನ್ನು ಸ್ವಾಗತಿಸಲಾಯ್ತು.

ಪ್ರಿಯಾಂಕ್‌ ಖರ್ಗೆ ಅಭಿಮಾನಿ ಬಳಗದ ತಾಲೂಕು ಘಟಕದ ಅಧ್ಯಕ್ಷ ಶರಣು ಗೌರೆ ಅವರು, ತಮ್ಮ ತಂಡದ ಸದಸ್ಯರೊಂದಿಗೆ ದಾರಿಯುದ್ದಕ್ಕೂ ಹೂವಿನ ಹಾರಿಸುತ್ತ ಸ್ವಾಗತಿಸಿದರು.

ಸುಮಾರು 15 ಕಿಮೀ ರಸ್ತೆ ಉದ್ದಕ್ಕೂ 100ಕ್ಕೂ ಹೆಚ್ಚು ಬೈಕ್ ಗಳ ಮುಖಾಂತರ ಬೈಕ್ ರ್‍ಯಾಲಿ ಮಾಡಲಾಯಿತು. ಕಮಲಾಪುರ ಪಟ್ಟಣದ ಬಸ್ ನಿಲ್ದಾಣದಿಂದ ಕಿರಣ ಬಜಾರ್ ಮಾರ್ಗವಾಗಿ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಓಕಳಿ ಕ್ರಾಸ್ ಬಳಿ ಜೆಸಿಬಿಯಿಂದ ಹೂಗಳನ್ನು ಹಾಕಿ ಕುಣಿತದೊಂದಿಗೆ ರಾಧಾಕೃಷ್ಣರಿಗೆ ಸ್ವಾಗತಿಸಲಾಯ್ತು. ರಾಷ್ಟ್ರೀಯ ಹೆದ್ದಾರಿ ಸಮೀಪದ ಡಾ. ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬೈಕ್ ರ್‍ಯಾಲಿ ಕೊನೆಗೊಂಡಿತು.

ಮುಖಂಡರಾದ ಸಚಿವ ಡಾ . ಶರಣಪ್ರಕಾಶ ಪಾಟೀಲ್, ಕಾಂಗ್ರೆಸ್, ಶಾಮ ಮುನಾಟಿಕರ್, ಬ್ಲಾಕ್ ಕಾಂಗ್ರೆಸ ಅಧ್ಯಕ್ಷ ವೈಜನಾ ತಡಕಲ್, ಗುರುರಾಜ್ ಮಾಟೂರ, ಸಂತೋಷ್ ರಾಂಪುರೆ, ಅಮರ ಚಿಕ್ಕೆಗೌಡ, ಬಸವರಾಜ ಮಠಪತಿ, ತಾಜುದ್ದೀನ್ ಪಟೇಲ್, ಗುರುರಾಜ ಬೊಮ್ಮಾಣೆ, ಮಂಜು ಸಿಕೆ, ಪ್ರದೀಪ ಭಾಲ್ಕಿ, ಪರಮೇಶ್ವರ ಓಕಳಿ, ಅಶೋಕ ಕುಮಾರ ಗೌರೆ, ಮಹೆಶ ಪಸಾರ, ಸಂತೋಷ್ ಶಾಖ, ರವಿ ರಾಜನಾಳ, ಮಲ್ಲಪ್ಪ ಗೊಬ್ಬರವಡಿ , ಮಹೇಶ ಹಾಲು, ಕಾಂಗ್ರೆಸ್ ಕಾರ್ಯಕರ್ತರು ಇದ್ದರು.