ಸಾರಾಂಶ
ನರಗುಂದ: ಬೆಳೆಹಾನಿಯಾಗಿದೆ ಎಂದು ನಮೂದಿಸಿಲ್ಲವೆಂದು ಆರೋಪಿಸಿ ಬುಧವಾರ ರೈತರೊಬ್ಬರು ತಾಲೂಕಿನ ಕೊಣ್ಣೂರು ಗ್ರಾಮದ ನಾಡಕಚೇರಿಯಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ತಾಲೂಕಿನ ಬೆಳ್ಳೇರಿ ರೈತ ಸಿದ್ದನಗೌಡ ಹಿರೇಗೌಡರ ಎಂಬವರೇ ಆತ್ಮಹತ್ಯೆಗೆ ಯತ್ನಿಸಿದ ರೈತ.ಇವರು ಕೊಣ್ಣೂರ ಗ್ರಾಮದ ನಾಡಕಚೇರಿಗೆ ಆಗಮಿಸಿ ಅತಿವೃಷ್ಟಿಯಿಂದ ಗೋವಿನಜೋಳ ಮತ್ತು ಈರುಳ್ಳಿ ಬೆಳೆಹಾನಿಯಾಗಿದೆ. ಆದರೂ ಗ್ರಾಮಲೆಕ್ಕಾಧಿಕಾರಿಯವರು ಬೆಳೆಹಾನಿಯಾಗಿದೆ ಎಂದು ನಮೂದು ಮಾಡಿಲ್ಲವೆಂದು ಅಧಿಕಾರಿಗಳ ಜತೆ ವಾಗ್ವಾದ ಮಾಡಿದ್ದಾರೆ. ಆಗ ಮಾತಿಗೆ ಮಾತು ಬೆಳೆದು ರೈತ ಸಿದ್ದನಗೌಡ ಹಿರೇಗೌಡರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ತಕ್ಷಣವೆ ಅವರನ್ನು ಅಲ್ಲಿದ್ದ ರೈತರು ನರಗುಂದದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕೆಎಂಸಿಆರ್‌ಐ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸದ್ಯ ರೈತ ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ.ತಹಸೀಲ್ದಾರ್ ಶ್ರೀಶೈಲ ತಳವಾರ ಮಾತನಾಡಿ, ತಾಲೂಕಿನ ರೈತರು ಭಯಪಡಬೇಕಾಗಿಲ್ಲ. ಬೆಳೆಹಾನಿಯಾದ ಪ್ರತಿಯೊಬ್ಬ ರೈತರಿಗೂ ಪರಿಹಾರ ನೀಡಲಾಗುತ್ತದೆ. ಆದರೆ ಕೆಲವು ರೈತರ ಎಫ್‌ಐಡಿ ಮತ್ತು ಇತರೆ ಕಾರಣಗಳಿಂದ ಬೆಳೆಹಾನಿ ಯಾದಿಯಲ್ಲಿ ಹೆಸರು ಇಲ್ಲ. ತಾಂತ್ರಿಕ ಕಾರಣಗಳನ್ನು ಸರಿಪಡಿಸಿಕೊಂಡು ಬಂದರೆ ಆ ರೈತರಿಗೂ ಬೆಳೆಹಾನಿ ಪರಿಹಾರ ನೀಡಲಾಗುವುದೆಂದು ತಿಳಿಸಿದರು.ಕೃಷಿ ಪ್ರಶಸ್ತಿಗೆ ಅರ್ಜಿ ಆಹ್ವಾನ
ಗದಗ: ರಾಜ್ಯದ ಕೃಷಿ ಉತ್ಪಾದನೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಲು ರೈತರ ಶ್ರಮ ಮತ್ತು ಕೃಷಿಯಲ್ಲಿ ಸಕ್ರಿಯ ಪಾಲುಗಾರಿಕೆ ಪ್ರಮುಖ ಕಾರಣವಾಗಿರುತ್ತದೆ. ಅಂತಹ ರೈತರನ್ನು ಗುರುತಿಸಲು ರಾಜ್ಯ, ಜಿಲ್ಲಾ ಮತ್ತು ತಾಲೂಕು ಮಟ್ಟಗಳಲ್ಲಿ ಕೃಷಿ ಪ್ರಶಸ್ತಿ ಬಹುಮಾನಗಳನ್ನು ನೀಡಲಾಗುತ್ತಿದೆ.ಪ್ರಸಕ್ತ ವರ್ಷದಲ್ಲಿ ಕೃಷಿ ಪ್ರಶಸ್ತಿಗಾಗಿ ಅರ್ಜಿಗಳನ್ನು ಆನ್‌ಲೈನ್‌ನಲ್ಲಿ ನೋಂದಾಯಿಸಬೇಕಿದೆ. ಇದಕ್ಕಾಗಿ ಕೃಷಿ ಇಲಾಖೆಯ ಕೆ-ಕಿಸಾನ್ ಪೋರ್ಟಲ್‌ನಲ್ಲಿ ನೂತನವಾಗಿ ಕೃಷಿ ಪ್ರಶಸ್ತಿಗೆ ಅರ್ಜಿ ನಮೂನೆಯನ್ನು ಅಳವಡಿಸಲಾಗಿರುತ್ತದೆ.ರೈತ ಸಂಪರ್ಕ ಕೇಂದ್ರಗಳ ಮೂಲಕ ಅಥವಾ ಸ್ವತಃ ಆನ್‌ಲೈನ್ ಮೂಲಕ(kkisan.karnataka.gov.in) ಲಿಂಕ್ ಬಳಸಿ ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಭೇಟಿ ನೀಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.;Resize=(128,128))
;Resize=(128,128))