ಸಂತೋಷಗೌಡ ಪಾಟೀಲ(31) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ರೈತ.
ರೋಣ: ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆ ಸಾಲಬಾಧೆ ಹೆಚ್ಚಳವಾಗುವುದೆಂದು ಆತಂಕಗೊಂಡು ತಾಲೂಕಿನ ಚಿಕ್ಕಮಣ್ಣೂರ ಗ್ರಾಮದ ರೈತರೊಬ್ಬರು ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಂತೋಷಗೌಡ ಪಾಟೀಲ (31) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ರೈತ. ಮೃತ ರೈತ ಸಂತೋಷಗೌಡ ಪಾಟೀಲ ಅವರು ಸವಡಿ ಗ್ರಾಮದ ಕೆವಿಜಿ ಬ್ಯಾಂಕಿನಲ್ಲಿ ₹2 ಲಕ್ಷ ಸಾಲ, ರೋಣದ ಎಸ್‌ಬಿಐನಲ್ಲಿ ₹5.60 ಲಕ್ಷ ಬೆಳೆಸಾಲ ಮಾಡಿದ್ದರು. ಪ್ರಸಕ್ತ ಸಾಲಿನ ಅನಾವೃಷ್ಟಿಯಿಂದಾಗಿ ಸಾಲಬಾಧೆ ತಾಳದೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ರೋಣ ಪೊಲೀಸರು ಭೇಟಿ ನೀಡಿ ಮೃತನ ತಾಯಿ ಪ್ರೇಮವ್ವ ಪಾಟೀಲ ನೀಡಿದ ದೂರಿನ ಆಧಾರದ ಮೇಲೆ ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಅಪಾಘಾತದಲ್ಲಿ ಕಾರು ಚಾಲಕ ಸಾವುನರಗುಂದ: ತಾಲೂಕಿನ ಭೈರನಹಟ್ಟಿ ಬಳಿ ಲಾರಿ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿ ಕಾರು ಚಾಲಕ ಮೃತಪಟ್ಟು ಹಾಗೂ ಲಾರಿ ಚಾಲಕ ಗಾಯಗೊಂಡ ಘಟನೆ ಭಾನುವಾರ ನಡೆದಿದೆ.ಮೃತಪಟ್ಟ ಚಾಲಕವನ್ನು ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ನೀರಲಕೇರಿಯ ಗ್ರಾಮದ, ಹಾಲಿವಸ್ತಿ ಧಾರವಾಡ ಗುಲಗಂಜಿಕೊಪ್ಪದ ಸಂಗಪ್ಪ ರಂಗಪ್ಪ ಮಜ್ಜಗಿ(41) ಎಂದು ಗುರುತಿಸಲಾಗಿದೆ. ಕೇರಳದ ಆಲವಟೋಲಿಯ ವಿಷ್ಣು ಸುರೇಂದ್ರನ್ ಚಿರಕಾಡತ ಎಂಬವರು ಗಾಯಗೊಂಡಿದ್ದಾರೆ. ಎರಡು ವಾಹನಗಳ ಚಾಲಕರು ಪರಸ್ಪರ ಅತಿವೇಗ ಮತ್ತು ಅಜಾಗರೂಕತೆಯಿಂದ ವಾಹನಗಳನ್ನು ಚಲಾಯಿಸಿದ್ದರಿಂದ ಅಪಘಾತ ಸಂಭವಿಸಿದೆ. ಈ ಕುರಿತು ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.