ಕನ್ನಡಪ್ರಭ ವಾರ್ತೆ ಬೆಳಗಾವಿಕಬ್ಬಿನ ಹೋರಾಟದಲ್ಲಿ ಭಾಗವಹಿಸಿದ್ದ ರೈತನೋರ್ವನನ್ನು ಬಂಧಿಸಿ ನಿರ್ಜನ ಪ್ರದೇಶದಲ್ಲಿ ಬಿಟ್ಟಿ ವೇಳೆ ಎದೆನೋವು ಕಾಣಿಸಿಕೊಂಡಿದ್ದು, ತೀವ್ರ ಅಸ್ವಸ್ಥರಾಗಿದ್ದರಿಂದ ಆಸ್ಪತ್ರೆ ಸೇರಿಸಲು ಆ್ಯಂಬುಲೆನ್ಸ್ ಇಲ್ಲದೇ ಪರದಾಡಿದ ಘಟನೆ ಹುಕ್ಕೇರಿ ತಾಲೂಕಿನ ಬಸ್ಸಾಪೂರೆ ಸಮೀಪ ಗುರುವಾರ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಕಬ್ಬಿನ ಹೋರಾಟದಲ್ಲಿ ಭಾಗವಹಿಸಿದ್ದ ರೈತನೋರ್ವನನ್ನು ಬಂಧಿಸಿ ನಿರ್ಜನ ಪ್ರದೇಶದಲ್ಲಿ ಬಿಟ್ಟಿ ವೇಳೆ ಎದೆನೋವು ಕಾಣಿಸಿಕೊಂಡಿದ್ದು, ತೀವ್ರ ಅಸ್ವಸ್ಥರಾಗಿದ್ದರಿಂದ ಆಸ್ಪತ್ರೆ ಸೇರಿಸಲು ಆ್ಯಂಬುಲೆನ್ಸ್ ಇಲ್ಲದೇ ಪರದಾಡಿದ ಘಟನೆ ಹುಕ್ಕೇರಿ ತಾಲೂಕಿನ ಬಸ್ಸಾಪೂರೆ ಸಮೀಪ ಗುರುವಾರ ನಡೆದಿದೆ.

ಜಮಖಂಡಿ ತಾಲೂಕಿನ ಶಿರಗುಪ್ಪಿ ಗ್ರಾಮದ ಬಸವರಾಜ್ ಸತ್ತೂರ(38) ಎದೆನೋವು ಕಂಡ ರೈತ ಮುಖಂಡ. ಹುಕ್ಕೇರಿ ತಾಲೂಕಿನ ಬಸ್ಸಾಪೂರದ ನಿರ್ಜನ ಸ್ಥಳದಲ್ಲಿ 20ಕ್ಕೂ ಅಧಿಕ ರೈತರನ್ನು ಬಿಟ್ಟು ಬರಲಾಗಿತ್ತು. ಆಗ ಅಲ್ಲಿ ಎದೆನೋವು ತೀವ್ರವಾಗಿದ್ದು, ಅಸ್ವಸ್ಥ ರೈತನನ್ನು ಐದಾರು ರೈತ ಮುಖಂಡರು ಎತ್ತಿಕೊಂಡು ಬಂದು ಬಸ್ಸಾಪೂರಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪ್ರಥಮ ಚಿಕಿತ್ಸೆ ನೀಡಲು ಮುಂದಾಗಿದ್ದಾರೆ. ಆಸ್ಪತ್ರೆಯಲ್ಲಿ ವೈದ್ಯರು ಇಲ್ಲದೇ ಮತ್ತೇ ಗೋಳಾಡಿದ್ದಾರೆ. ಕೂಡಲೇ ಮಾಧ್ಯಮ ಪ್ರತಿನಿಧಿಗಳಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಮಾಧ್ಯಮ ಪ್ರತಿನಿಧಿಗಳು ಬೆಳಗಾವಿ ನಗರದ ಡಿಸಿಪಿ ನಾರಾಯಣ ಬರಮಣಿ ಅವರಿಗೆ ಗಮನಕ್ಕೆ ತಂದ ತಕ್ಷವೇ ಪಾಶ್ಚಾಪೂರದಿಂದ ಆ್ಯಂಬುಲೆನ್ಸ್‌ ವ್ಯವಸ್ಥೆ ಮಾಡಿ ಜಿಲ್ಲಾ ಆಸ್ಪತ್ರೆಗೆ ಕರೆ ತಂದು ತುರ್ತು ಚಿಕಿತ್ಸೆ ಕೊಡಿಸಿದ ಪರಿಣಾಮ ಪ್ರಾಣಾಪಾಯದಿಂದ ರೈತ ಪಾರಾಗಿದ್ದಾನೆ. ಬೀಮ್ಸ್‌ ಆಸ್ಪತ್ರೆಗೆ ರೈತ ಮಹಿಳೆ ಆಶ್ಮಾ ಹಾಗೂ ಆಯೇಶಾ ಸನದಿ ಭೇಟಿ ನೀಡಿ ಆರೋಗ್ಯ ಕ್ಷೇಮ ವಿಚಾರಿಸಿ ಧೈರ್ಯ ತುಂಬಿದ್ದಾರೆ. ಇತ್ತ ಬಸ್ಸಾಪೂರಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಎತ್ತಿಕೊಂಡು ಬಂದ ರೈತನ ವಿಡಿಯೋ ವೈರಲ್‌ ಆಗಿದ್ದು, ರೈತನ ನಿಧನರಾಗಿರಬಹುದುದೆಂದು ಊಹಿಸಿ ಹಲವು ಕಡೆ ರೈತರು ಮೌನಾಚರಣೆ ಮಾಡಿ ಸಂತಾಪ ಸೂಚಿಸಿದ್ದಾರೆ. ಈ ವಿಷಯ ತಿಳಿದ ರೈತ ಬಸವರಾಜ ಸತ್ತೂರ

ಬಿಮ್ಸ್ ಆಸ್ಪತ್ರೆಯಿಂದ ಹೇಳಿಕೆ ಬಿಡುಗಡೆ ಮಾಡಿ ನಾನು ಚೆನ್ನಾಗಿದ್ದೇನೆ, ಯಾವುದೇ ರೀತಿ ಬೇರೆ ರೀತಿ ಬಿಂಬಿಸಬೇಡಿ ಎಂದು ಮನವಿ ಮಾಡಿದ್ದಾನೆ.