ಸಾರಾಂಶ
ಟ್ರ್ಯಾಕ್ಟರ್ ರೋಟೋವೇಟರ್ ಯಂತ್ರಕ್ಕೆ ಸಿಲುಕಿ ರೈತನೋರ್ವ ಭೀಕರವಾಗಿ ಮೃತಪಟ್ಟಿರುವ ಘಟನೆ ಜಗಳೂರು ತಾಲೂಕಿನ ದಿದ್ಗಿಗೆ ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ನಡೆದಿದೆ.
- ಜಗಳೂರು ತಾಲೂಕು ದಿದ್ಗಿಗೆ ಗ್ರಾಮದಲ್ಲಿ ಮೃತಪಟ್ಟ ರೈತ ನಾರಪ್ಪ- ಡ್ರೈವರ್ ಪಕ್ಕದಲ್ಲಿ ಕುಳಿತಿದ್ದಾಗ ಅಚಾನಕ್ಕಾಗಿ ಯಂತ್ರಕ್ಕೆ ಸಿಲುಕಿದ ರೈತ
- - -ಕನ್ನಡಪ್ರಭ ವಾರ್ತೆ ಜಗಳೂರುಟ್ರ್ಯಾಕ್ಟರ್ ರೋಟೋವೇಟರ್ ಯಂತ್ರಕ್ಕೆ ಸಿಲುಕಿ ರೈತನೋರ್ವ ಭೀಕರವಾಗಿ ಮೃತಪಟ್ಟಿರುವ ಘಟನೆ ಜಗಳೂರು ತಾಲೂಕಿನ ದಿದ್ಗಿಗೆ ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ನಡೆದಿದೆ.ನಾರಪ್ಪ (30) ಮೃತಪಟ್ಟ ರೈತ. ಯಂತ್ರಕ್ಕೆ ಸಿಲುಕಿದ ನಾರಪ್ಪನ ತಲೆಭಾಗ. ದೇಹ ಛಿದ್ರವಾಗಿದೆ. ಭಾನುವಾರ ಉಳುಮೆ ಮಾಡುವ ಸಲುವಾಗಿ ರೋಟೋವೇಟರ್ ಯಂತ್ರ ಅಳವಡಿಸಿದ ಟ್ರ್ಯಾಕ್ಟರ್ ಬಾಡಿಗೆಗೆ ತರಲಾಗಿತ್ತು. ದಿದ್ದಿಗೆ ಗ್ರಾಮದಲ್ಲಿ ನಾರಪ್ಪ ಹೊಲದಲ್ಲಿ ಹೊಲದಲ್ಲಿ ಉಳುಮೆ ಮಾಡಲಾಗುತ್ತಿತ್ತು. ಈ ವೇಳೆ ಟ್ರ್ಯಾಕ್ಟರ್‌ನ ಡ್ರೈವರ್ ಪಕ್ಕದಲ್ಲಿಯೇ ಕುಳಿತುಕೊಂಡಿದ್ದ ನಾರಪ್ಪ ಅಚಾನಕ್ಕಾಗಿ ಯಂತ್ರಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಬಿಳಿಚೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ವಿಷಯ ತಿಳಿದು ಮಾಜಿ ಶಾಸಕ ಎಚ್.ಪಿ. ರಾಜೇಶ್ ದಿದ್ದಿಗೆ ಗ್ರಾಮದಲ್ಲಿ ಘಟನೆ ಸ್ಥಳಕ್ಕೆ ತೆರಳಿ ಕುಟುಂಬಸ್ಥರನ್ನು ಭೇಟಿಯಾಗಿ, ಸಾಂತ್ವನ ಹೇಳಿದ್ದಾರೆ.- - -
-17ಜೆಎಲ್ಆರ್01: ಯಂತ್ರಕ್ಕೆ ಸಿಲುಕಿ ಮೃತಪಟ್ಟ ರೈತ ನಾರಪ್ಪ. -17ಜೆಎಲ್ಆರ್01.ಜೆಪಿಜಿ:ಜಗಳೂರು ತಾಲೂಕಿನ ದಿದ್ದಿಗಿ ಗ್ರಾಮದಲ್ಲಿ ಟ್ರ್ಯಾಕ್ಟರ್‌ನ ರೋಟರ್ ಯಂತ್ರಕ್ಕೆ ಸಿಲುಕಿ ರೈತ ನಾರಪ್ಪ ದಾರುಣ ಸಾವು ಕಂಡಿದ್ದು, ಮಾಜಿ ಶಾಸಕ ಎಚ್.ಪಿ. ರಾಜೇಶ್ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು. ಈ ಸಂದರ್ಭ ನೊಂದ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ರೈತರು, ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿದ್ದರು.
;Resize=(128,128))
;Resize=(128,128))
;Resize=(128,128))