ಆರ್ಥಿಕ ಸ್ವಾವಲಂಬನೆಯಿಂದ ರೈತರು ಸದೃಢ: ಬಿ.ಆರ್.ರಾಮಚಂದ್ರ

| Published : Mar 14 2025, 12:32 AM IST

ಆರ್ಥಿಕ ಸ್ವಾವಲಂಬನೆಯಿಂದ ರೈತರು ಸದೃಢ: ಬಿ.ಆರ್.ರಾಮಚಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಮಂಡ್ಯ ಜಿಲ್ಲೆಯ ಏಳು ತಾಲೂಕುಗಳಿಂದಲೂ ಗುಣಮಟ್ಟದ ಹಾಲನ್ನು ಒಕ್ಕೂಟಕ್ಕೆ ಸರಬರಾಜು ಮಾಡುತ್ತಿರುವುದು ಸಂತಸ ತಂದಿದೆ. ಮನ್‌ಮುಲ್ ಸಿಬ್ಬಂದಿ ಹಾಗೂ ಅಕಾರಿಗಳ ವರ್ಗವು ರೈತರ ಕಷ್ಟ ಸುಖಗಳನ್ನು ನೋಡಬೇಕು. ಪಶು ವೈದ್ಯರು ರೈತರ ರಾಸುಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ವೈದ್ಯರಾದವರು ರೈತರನ್ನು ಪ್ರೀತಿಯಿಂದ ಕಾಣುವ ಮೂಲಕ ನೆರವಾಗಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಮನ್‌ಮುಲ್‌ನಿಂದ ಸಿಗುವ ಸೌಲಭ್ಯಗಳನ್ನು ರೈತರು ಬಳಸಿಕೊಳ್ಳುವ ಮೂಲಕ ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದು ಮನ್‌ಮುಲ್ ನಿರ್ದೇಶಕ ಬಿ.ಆರ್.ರಾಮಚಂದ್ರ ಸಲಹೆ ನೀಡಿದರು.

ನಗರದ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಹಕಾರ ಸಂಘಗಳ ಉಪ ಕಚೇರಿ(ಕೆರೆ ಅಂಗಳ) ಆವರಣದಲ್ಲಿ ಮನ್‌ಮುಲ್, ಹಾಲು ಉತ್ಪಾದಕರ ಘಟಕದ ಸಹಯೋಗದಲ್ಲಿ ಗುರುವಾರ ನಡೆದ ಹೈನುಗಾರಿಕೆ ರೈತ ಫಲಾನುಭವಿಗಳಿಗೆ ಚೆಕ್ ವಿತರಣೆ, ನೂತನ ನಿರ್ದೇಶಕರಿಗೆ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜಿಲ್ಲೆಯ ಏಳು ತಾಲೂಕುಗಳಿಂದಲೂ ಗುಣಮಟ್ಟದ ಹಾಲನ್ನು ಒಕ್ಕೂಟಕ್ಕೆ ಸರಬರಾಜು ಮಾಡುತ್ತಿರುವುದು ಸಂತಸ ತಂದಿದೆ. ಮನ್‌ಮುಲ್ ಸಿಬ್ಬಂದಿ ಹಾಗೂ ಅಕಾರಿಗಳ ವರ್ಗವು ರೈತರ ಕಷ್ಟ ಸುಖಗಳನ್ನು ನೋಡಬೇಕು. ಪಶು ವೈದ್ಯರು ರೈತರ ರಾಸುಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ವೈದ್ಯರಾದವರು ರೈತರನ್ನು ಪ್ರೀತಿಯಿಂದ ಕಾಣುವ ಮೂಲಕ ನೆರವಾಗಬೇಕು’ ಎಂದರು.

ರಾಸುಗಳಿಗೆ ವಿಮೆ ತೆಗೆದುಕೊಳ್ಳುವುದು ಮುಖ್ಯವಾಗಬೇಕು. ರಾಸುಗಳು ಆಕಸ್ಮಿಕವಾಗಿ ಮರಣ ಹೊಂದಿದ ಸಂದರ್ಭ ರೈತರಿಗೆ ಮನ್‌ಮುಲ್‌ನಿಂದ ಪರಿಹಾರ ಸಿಗುತ್ತದೆ. ಈ ಸೌಲಭ್ಯವನ್ನು ಪ್ರತಿಯೊಬ್ಬ ರೈತನೂ ಬಳಸಿಕೊಳ್ಳಬೇಕು. ಜೊತೆಗೆ ಹಾಲು ಉತ್ಪಾದಕರಿಗೆ ಗುಂಪು ವಿಮೆ ಪಡೆದುಕೊಂಡರೆ ಇದು ನಿಮ್ಮ ಸಹಾಯಕ್ಕೆ ಬರುತ್ತದೆ’ ಎಂದು ಸಲಹೆ ನೀಡಿದರು.

ಜಿಲ್ಲಾ ಸಹಕಾರ ಸಂಘದ ಉಪ ವ್ಯವಸ್ಥಾಪಕ ಮಂಜೇಶ್ ಮಾತನಾಡಿ, ಯಾವುದೇ ಸಂಘಟನೆ ಅಥವಾ ಪಕ್ಷಗಳಿರಲಿ, ಅದೆಲ್ಲವನ್ನು ಮರೆತು ಒಬ್ಬ ವ್ಯಕ್ತಿಯನ್ನು ಮರು ಆಯ್ಕೆ ಮಾಡುತ್ತಾರೆ ಎಂದರೆ ಗೆಲುವು ಪಡೆದ ವ್ಯಕ್ತಿಗಳು ರೈತರ ಸಮಸ್ಯೆಗಳನ್ನು ಆಲಿಸಿರುವುದೇ ಕಾರಣವಾಗಿದೆ. ಹಾಲು ಉತ್ಪಾದಕರು ಮತ್ತು ರೈತರ ಪರವಾಗಿ ಮತ್ತಷ್ಟು ಉತ್ತಮ ಕೆಲಸಗಳನ್ನು ಮಾಡಿಕೊಂಡು ಹೋಗಲಿ ಎಂದು ಮನವಿ ಮಾಡುತ್ತೇನೆ ಎಂದರು.

ಮನ್‌ಮುಲ್ ನಿರ್ದೇಶಕರಾದ ಯು.ಸಿ.ಶಿವಕುಮಾರ್, ಎಂ.ಎಸ್. ರಘುನಂದ್, ಬಿ.ಆರ್. ರಾಮಚಂದ್ರು ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಯೂನಿಯನ್ ನಿರ್ದೇಶಕ ಶಿವಕುಮಾರ್, ಡಾ.ಯಶವಂತ್ ಭಾಗವಹಿಸಿದ್ದರು.