ಸಾರಾಂಶ
ಕನ್ನಡಪ್ರಭ ವಾರ್ತೆ, ಚಾಮರಾಜನಗರ
ಬಣ್ಣಾರಿ ಸಕ್ಕರೆ ಕಾರ್ಖಾನೆಯು ಇಳುವರಿಯಲ್ಲಿ ಕಡಿಮೆಯನ್ನು ತೋರುತ್ತ ಜಿಲ್ಲೆಯ ರೈತರಿಗೆ ಮೋಸ ಮಾಡುತ್ತಿದೆ ಎಂದು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆ ಹುಂಡಿ ಭಾಗ್ಯರಾಜ್ ಆರೋಪಿಸಿದರು.ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ತಜ್ಞರ ಸಮಿತಿಯನ್ನು ನೇಮಕ ಮಾಡಿ ಇಳುವರಿಯನ್ನು ಸರಿಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕಳೆದ ೧೫ ವರ್ಷಗಳಿಂದ ಸಕ್ಕರೆ ಕಾರ್ಖಾನೆ ಇಳುವರಿಯಲ್ಲಿ ಸಾಕಷ್ಟು ಹೆಚ್ಚಳವಿತ್ತು. ಆದರೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಇಳುವರಿ ಆಧಾರದ ಮೇಲೆ ಬೆಲೆ ನೀಡಲು ತೀರ್ಮಾನ ಆದಾಗ ಕಡಿಮೆ ಇಳುವರಿಯನ್ನು ಬಣ್ಣಾರಿ ಸಕ್ಕರೆ ಕಾರ್ಖಾನೆಯು ತೋರುತ್ತದೆ.ಬಣ್ಣಾರಿ ಸಕ್ಕರೆ ಕಾರ್ಖಾನೆಯು ೧ಕಬ್ಬು ನಾಟಿ ಮಾಡಿದ ಕಬ್ಬು ಬೆಳೆಗಾರರಿದ ವಿಶೇಷವಾಗಿ ಪ್ರತಿ ಎಕರೆಗೆ ೧೦೦೦೦ ರೂಪಾಯಿ ಪ್ರೋತ್ಸಾಹ ಧನ. ಈ ಅವಧಿಯಲ್ಲಿ ನಾಟಿ ಮಾಡಿದ ಪ್ರತಿ ಟನ್ ೧೫೦ ರೂಪಾಯಿ ಹೆಚ್ಚುವರಿ. ಕೂಳೆ ಕಬ್ಬಿಗೆ ಹೆಚ್ಚುವರಿ ೧೦೦ ರೂಪಾಯಿ ಪ್ರತಿ ಟನ್‌ಗೆ ಜೈವಿಕ ಗೊಬ್ಬರ ೫೦ ಪರ್ಸೆಂಟ್ ದರ ಯಂತ್ರಗಳಿಂದ ಕಟಾವು ಮಾಡಿಸುವ ರೈತರಿಗೆ ಎರಡುವರೆ ಸಾವಿರ ರೂಪಾಯಿ ಎಕರೆಗೆ ಪ್ರೋತ್ಸಾಹ ಧನ ಈ ವಿಚಾರಗಳನ್ನು ಗ್ರಾಮೀಣ ಭಾಗದ ರೈತರಿಗೆ ಪ್ರಚಾರ ಮಾಡುತ್ತ ಕಬ್ಬು ಬೆಳೆಗಾರ ರೈತರಿಗೆ ಮೂಗಿಗೆ ತುಪ್ಪ ಸವರುವ ಕೆಲಸವನ್ನು ಮಾಡುತ್ತಿದೆ ಎಂದು ಆರೋಪಿಸಿದರು.
ಪ್ರಸಕ್ತ ಸಾಲಿನ ಕಬ್ಬು ಬೆಳೆಗಾರರಿಗೆ ಈ ಯೋಜನೆಗಳನ್ನು ಜಿಲ್ಲಾಡಳಿತ ಹಾಗೂ ಸರ್ಕಾರ ಅರಿತು ಹೆಚ್ಚುವರಿ ಹಣವನ್ನುಮುಂದಿನ ವರ್ಷಕ್ಕೆ ಘೋಷಿಸಿರುವ ಸಕ್ಕರೆ ಕಾರ್ಖಾನೆಯ ಸ್ವಯಂ ಘೋಷಣೆಯನ್ನು ಕಡ್ಡಾಯವಾಗಿ ಪ್ರಸಕ್ತ ಸಾಲಿಗೆ ಅನ್ವಯವಾಗುವಂತೆ ಸರ್ಕಾರ ಆದೇಶವನ್ನು ನೀಡಬೇಕು ಎಂದರು.ತನಗೆ ಮನಬಂದಂತೆ ಇಳುವರಿಯನ್ನು ತೋರುತ್ತದೆ. ತನಗೆ ಕಬ್ಬು ಬೇಕಾದಾಗ ಇಂತಹ ತಂತ್ರಗಾರಿಕೆಯನ್ನು ಬಳಸುತ್ತದೆ ಆದ್ದರಿಂದ ಕಬ್ಬು ಬೆಳೆಯುವ ರೈತರು ಮತ್ತು ಪ್ರಸಕ್ತ ಸಾಲಿಗೆ ಕಬ್ಬು ಪೂರೈಕೆ ಮಾಡುವವರು ಕಾರ್ಖಾನೆಯ ಅಧಿಕಾರಿಗಳನ್ನು ಹಾಗೂ ಕಾರ್ಖಾನೆಯ ಮಾಲೀಕರನ್ನು ಪ್ರಶ್ನಿಸಿ ಪ್ರಸಕ್ತ ಸಾಲಿಗೆ ಕಟಾವು ಸಾಗಾಣಿಕೆಯನ್ನು ಬಿಟ್ಟು ರಾಜ್ಯ ಸರ್ಕಾರವು ೧೦.೨೫ಕ್ಕೆ ನಿಗದಿ ಪಡಿಸಿರುವ ಕಬ್ಬುದರ ೩೨೦೦ ನಿಗದಿ ಮಾಡಿದೆ ಅದರಂತೆ ಶೇ.೯.೫ ಇಳುವರಿ ಇರುವ ಬಣ್ಣಾರಿ ಸಕ್ಕರೆ ಕಾರ್ಖಾನೆಗೆ ೨೯೨೦ ರೂ ರೈತರಿಗೆ ಪಾವತಿಗೆ ಆದೇಶ ನೀಡಬೇಕು ಎಂದರು.
ಕಟಾವು ಸಾಗಾಣಿಕೆಯನ್ನು ಹೊರತುಪಡಿಸಿ ರೈತನ ಖಾತೆಗೆ ನೇರವಾಗಿ ಜಮೆ ಆಗಬೇಕು. ಇಳುವರಿ ಆಧಾರದ ಮೇಲೆ ರಾಜ್ಯ ಸರ್ಕಾರ ದರ ನಿಗದಿಗೆ ಮುಂದಾಗಿರುವುದರಿಂದ ಜಿಲ್ಲೆಯ ರೈತರಿಗೆ ಇದು ಮೋಸವಾಗುತ್ತದೆ ಒಂದು ಪರ್ಸೆಂಟ್ ಇಳುವರಿಗೆ ಇರುವ ಹಣವನ್ನು ಕಡಿಮೆ ಅಂದರೆ ೩೨೦ನ್ನು ಕಡಿತಗೊಳಿಸಿ ಉಳಿದ ಹಣವನ್ನು ಪಾವತಿಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದರು.ಸರ್ಕಾರವು ಕಳೆದ ವಾರದ ಆದೇಶದಲ್ಲಿ ಕೇಂದ್ರ ಸರ್ಕಾರದ ಎಫ್‌ಆರ್‌ಪಿಯ ಮಾನದಂಡವನ್ನು ಇಲ್ಲಿಗೆ ಅನ್ವಯಿಸಿದೆ, ಮುಖ್ಯಮಂತ್ರಿಗಳ ಸ್ವಕ್ಷೇತ್ರದಲ್ಲಿರುವ ರೈತರಿಗೆ ಅನ್ಯಾಯವಾಗುತ್ತಿರುವುದನ್ನು ಅವರು ಪರಿಗಣಗೆ ತೆಗೆದುಕೊಂಡಿರುವುದಿಲ್ಲ. ಈ ಭಾಗದ ರೈತರು ಜಾಗೃತರಾಗಿ ಈ ತಾಂತ್ರಿಕ ಕಾರಣದಿಂದ ಆಗಿರುವ ಅನ್ಯಾಯವನ್ನು ಸರಿಪಡಿಸಲು ಜಾಗೃತರಾಗಿ ಹೋರಾಟಕ್ಕೆ ಬರಬೇಕೆಂದು ಮನವಿ ಮಾಡಿದರು.
ಸಕ್ಕರೆ ಕಾರ್ಖಾನೆಗಳ ಮುಂದೆ ತೂಕದ ಯಂತ್ರ ಅಳವಡಿಕೆಯಲ್ಲಿ ಕ್ರಮ ಕೈಗೊಂಡಿಲ್ಲ ಕಳೆದ ಎರಡು ವರ್ಷಗಳ ಹಿಂದೆ ಘೋಷಣೆಯಾಗಿರುವ ಪ್ರತಿ ಟನ್ ಕಬ್ಬಿಗೆ ₹೧೫೦ರಂತೆ ರಾಜ್ಯದಲ್ಲಿ ₹೯೫೦ ಕೋಟಿ ರೂಪಾಯಿ ಪಾವತಿ ಬಗ್ಗೆ ಸರ್ಕಾರ ಕ್ರಮ ಕೈಗೊಂಡಿಲ್ಲ ಎಂದರು.ಬಣ್ಣಾರಿ ಸಕ್ಕರೆ ಕಾರ್ಖಾನೆಯು ಸಕ್ಕರೆ ಕಾರ್ಖಾನೆ ಪ್ರಾರಂಭವಾದ ದಿನದ ಇಲ್ಲಿವರೆಗೂ ಸಹ ಲಾಭಾಂಶದಲ್ಲಿನ ಹಂಚಿಕೆಯ ಬಗ್ಗೆ ಸ್ಪಷ್ಟ ನಿರ್ಧಾರವನ್ನು ಸರ್ಕಾರ ಕೈಗೊಂಡಿರುವುದಿಲ್ಲ ರೈತರಿಗೆ ಲಾಭ ಅಂಶದಲ್ಲಿ ಒಂದು ರುಪಾಯಿ ಸಹ ಪಾವತಿ ಮಾಡಿರುವುದಿಲ್ಲ. ಜಿಲ್ಲಾಡಳಿತವು ಸಕ್ಕರೆ ಸಚಿವರು ಮತ್ತು ಸಕ್ಕರೆ ಆಯುಕ್ತರನ್ನು ಕರೆಸಿ ರೈತ ಮುಖಂಡರು, ಕಾರ್ಖಾನೆ ಮಾಲೀಕರ ಸಭೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಹಾಲಿನ ನಾಗರಾಜ್, ಜಿಲ್ಲಾ ಕಾರ್ಯದರ್ಶಿ ಮಲಿಯೂರು ಮಹೇಂದ್ರ, ತಾಲೂಕು ಅಧ್ಯಕ್ಷ ಸತೀಶ್, ಜಿಲ್ಲಾ ಸಂಚಾಲಕ ಹೊನ್ನೇಗೌಡನಹಳ್ಳಿ ಮಹೇಶ್ ಇದ್ದರು.;Resize=(128,128))
;Resize=(128,128))
;Resize=(128,128))