ಸಾರಾಂಶ
ಪಟ್ಟಣದ ಲೋಕೋಪಯೋಗಿ ಇಲಾಖೆ ಆವರಣದಲ್ಲಿ ನಡೆದ ರೈತರ ಅಕ್ಷೇಪಣೆ ಅರ್ಜಿ ಸಲ್ಲಿಕೆ ಸಭೆಯಲ್ಲಿ ಹೆದ್ದಾರಿ ಅಧಿಕಾರಿಗಳು ಹಾಗೂ ರೈತರ ನಡುವೆ ವಾದ ವಿವಾದ ಉಂಟಾಗಿ ಅಧಿಕಾರಿಗಳ ವಿರುದ್ದ ರೈತರು ಆಕ್ರೋಶ ವ್ಯಕ್ತಪಡಿಸಿದರು
ಕನ್ನಡಪ್ರಭ ವಾರ್ತೆ ತುರುವೇಕೆರೆ
ಪಟ್ಟಣದ ಲೋಕೋಪಯೋಗಿ ಇಲಾಖೆ ಆವರಣದಲ್ಲಿ ನಡೆದ ರೈತರ ಅಕ್ಷೇಪಣೆ ಅರ್ಜಿ ಸಲ್ಲಿಕೆ ಸಭೆಯಲ್ಲಿ ಹೆದ್ದಾರಿ ಅಧಿಕಾರಿಗಳು ಹಾಗೂ ರೈತರ ನಡುವೆ ವಾದ ವಿವಾದ ಉಂಟಾಗಿ ಅಧಿಕಾರಿಗಳ ವಿರುದ್ದ ರೈತರು ಆಕ್ರೋಶ ವ್ಯಕ್ತಪಡಿಸಿದರು. ತಾಲೂಕಿನಲ್ಲಿ ಹಾದು ಹೋಗಿರುವ ಜೀವರ್ಗಿ ಚಾಮರಾಜನಗರ ರಾಷ್ಟೀಯ ಹೆದ್ದಾರಿ ೧೫೦ ಎ ಕೆ.ಬಿ.ಕ್ರಾಸ್ - ಚುಂಚನಹಳ್ಳಿವರೆಗೂ ರಸ್ತೆ ಅಭಿವೃದ್ದಿ ಹಾಗೂ ಅಗಲೀಕರಣ ಸಲುವಾಗಿ ಭೂ ಸ್ವಾದೀನ ಸಂಬಂಧಿಸಿದಂತೆ ರಸ್ತೆ ನಿರ್ಮಾಣ ಮಾಡಲು ಭೂಮಿ ಸ್ವಾಧೀನಕ್ಕೆ ಒಳಪಡುವಂತಹ ರೈತರುಗಳಿಗೆ ನೋಟೀಸ್ ನೀಡಿ ಸಭೆ ಆಯೋಜಿಸಿಲಾಗಿತ್ತು. ರೈತರು ತಮ್ಮ ಖಾತೆ, ಪಹಣೆ ಜಮೀನು ಪತ್ರ ಸೇರಿದಂತೆ ಸೂಕ್ತ ದಾಖಲಾತಿಗಳನ್ನು ನೀಡುತ್ತಿದ್ದರು. ನಮ್ಮ ಜಮೀನಿನಲ್ಲಿ ಎಷ್ಟು ಅಡಿ ರಸ್ತೆಗೆ ಸ್ವಾಧೀನವಾಗುತ್ತದೆ ಎಂದು ಹೇಳುತ್ತಿಲ್ಲ ರೈತರು ಆಕ್ರೋಶ ವ್ಯಕ್ತಪಡಿಸಿದರು. ರೈತ ಕೆಂಪೇಗೌಡ ಮಾತನಾಡಿ, ರಾಷ್ರೀಯ ಹೆದ್ದಾರಿ ಅಧಿಕಾರಿಗಳು ಸರಿಯಾದ ಕ್ರಮ ಕೈಗೊಳ್ಳದೆ ತುರಾತರಿಯಲ್ಲಿ ರೈತರ ಸಭೆ ಕರೆದಿದ್ದಾರೆ. ರೈತರಿಂದ ಸಹಿ ಪಡೆಯುವ ಹುನ್ನರಾವಾಗಿದೆ ಎಂದರು. ರಾಷ್ಟ್ರೀಯ ಹೆದ್ದಾರಿಯ ಎಇಇ ಮೃತ್ಯಂಜಯ್ಯ ಮಾತಣಾಡಿ, ತಾಲೂಕಿನಲ್ಲಿ ಹಾದು ಹೋಗಲಿರುವ ರಾಷ್ಟೀಯ ಹೆದ್ದಾರಿ ಎರಡು ಪಥದ ರಸ್ತೆಯಾಗಿದೆ. ಈಗಿರುವ ರಸ್ತೆಯು ೩೦ ಮೀಟರ್ ಇದ್ದು, ಹೊಸ ರಸ್ತೆ ೪೫ ಮೀಟರ್ ನಲ್ಲಿ ರಸ್ತೆ ನಿರ್ಮಾಣವಾಗಲಿದೆ. ತಾಲೂಕಿನ ಬಾಣಸಂದ್ರ, ಟಿ.ಬಿ.ಕ್ರಾಸ್ ಬಳಿ ಬೈಪಾಸ್ ನಿರ್ಮಾಣವಾಗಲಿದೆ. ದೊಡ್ಡಶೆಟ್ಟೀಕೆರೆ, ಬದರಿಕಾಶ್ರಮದ ಬಳಿ ನೇರ ರಸ್ತೆ ನಿರ್ಮಣವಾಗಲಿದೆ. ಪಟ್ಟಣದ ಬೈಪಾಸ್ ಬಗ್ಗೆ ಯಾವುದೇ ಸರ್ವೆ ಆಗಿಲ್ಲ. ಮುಂದೆ ಸರ್ವೆ ನಂತರ ರೈತರಿಗೆ ನೋಟೀಸ್ ನೀಡಿ ತಿಳಿಸಲಾಗುವುದು ಎಂದು ತಿಳಿಸಿದರು.