ವಿಜಯಪುರ ಜಿಲ್ಲೆ ಸಂಪೂರ್ಣ ಬರಪೀಡಿತ ಜಿಲ್ಲೆ ಎಂದು ಘೋಷಿಸಬೇಕು ಹಾಗೂ ಮುದ್ದೇಬಿಹಾಳ ಮತ್ತು ತಾಳಿಕೋಟೆ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಬೇಕು ಎಂದು ಆಗ್ರಹಿಸಿ ಬಿಜೆಪಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಗುರುವಾರ ನಾಲ್ಕನೇ ದಿನಕ್ಕೆ ಕಾಲಿಟ್ಟಿತು.
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ವಿಜಯಪುರ ಜಿಲ್ಲೆ ಸಂಪೂರ್ಣ ಬರಪೀಡಿತ ಜಿಲ್ಲೆ ಎಂದು ಘೋಷಿಸಬೇಕು ಹಾಗೂ ಮುದ್ದೇಬಿಹಾಳ ಮತ್ತು ತಾಳಿಕೋಟೆ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಬೇಕು ಎಂದು ಆಗ್ರಹಿಸಿ ಬಿಜೆಪಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಗುರುವಾರ ನಾಲ್ಕನೇ ದಿನಕ್ಕೆ ಕಾಲಿಟ್ಟಿತು.ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಹಾಗೂ ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರು ಧರಣಿಯಲ್ಲಿ ಭಾಗವಹಿಸಿ ಮಾತನಾಡಿ, ಕಾಂಗ್ರೆಸ್ ಸರ್ಕಾರ, ಸ್ಥಳೀಯ ಶಾಸಕರು ಹಾಗೂ ಉಸ್ತುವಾರಿ ಸಚಿವರ ನಿರ್ಲಕ್ಷ್ಯದಿಂದ ಕ್ಷೇತ್ರದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನಾಲ್ಕು ತಿಂಗಳಿಂದ ತಾಲೂಕಿನಲ್ಲಿ ಮಳೆ ಕೊರತೆಯಿಂದ ಬರ ಪರಿಸ್ಥಿತಿ ನಿರ್ಮಾಣವಾಗಿದ್ದರೂ, ಅಧಿಕಾರಿಗಳೊಂದಿಗೆ ರೈತರ ಜಮೀನುಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸುವಲ್ಲಿ ವಿಫಲರಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಯರಝರಿ ಭಾಗದಲ್ಲಿ ಕಬ್ಬು ಉತ್ತಮವಾಗಿ ಬೆಳೆದಿದೆ ಎಂಬ ತಪ್ಪು ವರದಿಗಳಿಂದ ತಾಲೂಕು ಬರ ಘೋಷಣೆಯಿಂದ ಹೊರಗುಳಿದಿದೆ ಎಂದು ಆರೋಪಿಸಿದರು. ಪಟ್ಟಣದ ಸೇವಾಲಾಲ್ ವೃತ್ತದಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆ ಬಸವೇಶ್ವರ ವೃತ್ತದ ಮೂಲಕ ತಹಸೀಲ್ದಾರ್ ಕಚೇರಿ ಎದುರಿಗಿರುವ ಧರಣಿ ವೇದಿಕೆಯವರೆಗೆ ನಡೆಯಿತು.
ಹೋರಾಟದಲ್ಲಿ ಉದ್ಯಮಿ ಭರತಗೌಡ ಪಾಟೀಲ, ಒಬಿಸಿ ಮೋರ್ಚಾ ಅಧ್ಯಕ್ಷ ವೈ.ಟಿ ಗೌಡರ, ರಮೇಶ ಢವಳಗಿ, ಶಂಕರಗೌಡ ಶಿವಣಗಿ , ಗುರುನಾಥ ಬಿರಾದಾರ, ಲಕ್ಷ್ಮಣ ಬಿಜ್ಜೂರ, ಮಲ್ಲಯ್ಯಾ ಚೂಂಡಿ, ಚೆನ್ನಗಾವಿ ಶೆಟ್ರು, ಮಹಾದೇವ ಶಾಸ್ತ್ರೀ, ಸೋಮಗೌಡ ಮೇಟಿ, ರಾಜು ಮೇಟಿ, ಗಿರೀಶಗೌಡ ಪಾಟೀಲ್, ಚೇತನ ಸಂಗಮ, ಸಂಗಣ್ಣ ಹತ್ತಿ, ರೇಖಾ ಕಂಡಗೂಳಿ, ಸಂಗಮ್ಮ ದೇವರಳ್ಳಿ, ಗೌರಮ್ಮ ಹುನಗುಂದ, ಶೇಖರ ಆಲೂರ, ಸುಭಾಷ್ ಕಟ್ಟಿಮನಿ ಕಾಳಗಿ, ದಯಾನಂದ ಹಲಕಾವಟಗಿ, ಸಿದ್ರಾಮಪ್ಪ ಪ್ಯಾಟಿ, ಮಹಾಂತೇಶ ಪಟ್ಟಣದ, ಮಲಕೇಂದ್ರಗೌಡ ಪಾಟೀಲ್, ಹರೀಶ ನಾಟಿಕಾರ, ವಕೀಲರ ಸಂಘದ ಪ್ರತಿನಿಧಿಗಳು ಸೇರಿದಂತೆ ಹುಲ್ಲೂರು, ಕಾಳಗಿ, ಹಡಲಗೇರಿ ಪಂಚಾಯತಿ ರೈತರು ರೈತ ಮಹಿಳೆಯರು ಭಾಗವಹಿಸಿದ್ದರು.