ಕೊಪ್ಪಳ: ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿಗಳಿಗೆ ಶೀಘ್ರ ರೈತರಿಗೆ ಬರ ಪರಿಹಾರ ನೀಡಬೇಕು. ರೈತರ ಸಾಲ ಮನ್ನಾ ಮಾಡಬೇಕು ಹಾಗೂ ಬೆಳೆ ವಿಮಾ ಮಂಜೂರು ಮಾಡಬೇಕು ಎಂದು ಒತ್ತಾಯಿಸಿ ರೈತರ ಹಕ್ಕು ಕರ್ನಾಟಕ ರಾಜ್ಯ ರೈತ ಸಂಘದವರು ಮನವಿ ಸಲ್ಲಿಸಿದ್ದಾರೆ.

ಮನವಿಯಲ್ಲಿ ಉತ್ತರ ಕರ್ನಾಟಕದ್ಯಂತ ಬರದ ಛಾಯೆ ಆವರಿಸಿದೆ. ಕೆಲವೊಂದು ಕಡೆಗೆ ಮಳೆ ಸುರಿತಾ ಇದ್ದರೆ, ಇನೊಂದು ಕಡೆ ಇನ್ನುವರೆಗೂ ಮಳೆ ಬರ್ತಾ ಇಲ್ಲ, ಕೂಡಲೇ ಸರ್ಕಾರ ಇತ್ತ ಗಮನ ಹರಿಸಿ ರೈತರ ಕಷ್ಟಕ್ಕೆ ನೆರವಾಗಬೇಕು. ಈಗಾಗಲೇ ರೈತರು ಎಕರೆಗೆ ₹25 ಸಾವಿರ ಖರ್ಚು ಮಾಡಿ ಬಿತ್ತನೆ ಮಾಡಿದ ಮುಂಗಾರು ಬೆಳೆಗಳು ಒಣಗಿ ಸಂಪೂರ್ಣ ನಾಶವಾಗಿದೆ. ಶೀಘ್ರ ಸರ್ಕಾರ ಬರ ಘೋಷಿಸಿ ಎಕರಗೆ ₹25 ಸಾವಿರ ಬರ ಪರಿಹಾರ ಜಿಲ್ಲೆಯ ರೈತರಿಗೆ ನೀಡಬೇಕು.ರಾಷ್ಟ್ರೀಕೃತ ಬ್ಯಾಂಕಿನಲ್ಲಿರುವ ಎರಡು ಲಕ್ಷದವರೆಗೆ ಬಡ್ಡಿ ಸಮೇತವಾಗಿ ರೈತರ ಸಾಲ ಮನ್ನಾ ಮಾಡಬೇಕು. ಪ್ರಧಾನ ಮಂತ್ರಿ ಫಸಲ್ ಭೀಮಾ ವಿಮಾ ಯೋಜನೆ ಅಡಿಯಲ್ಲಿ ರೈತರು ತುಂಬಿರುವ ಬೆಳೆವಿಮೆ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ.

ರೈತರ ಹಕ್ಕು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಅಂದಪ್ಪ ರುದ್ರಪ್ಪ ಕೋಳೂರ, ರೈತ ಸಂಘಟನೆಯ ಸವಿತಾ ಉಮೇಶ ನಾಗರೆಡ್ಡಿ ಇತರರಿದ್ದರು.