ಸಾರಾಂಶ
ದೇವಲಾಪುರ ಗ್ರಾಮದ ಹೊರವಲಯದಲ್ಲಿ ಬಹಳ ಹಿಂದಿನಿಂದಲೂ ವಿಶಿಷ್ಟ ಪರಂಪರೆ ಉಳಿಸಿ ಬೆಳೆಸಿಕೊಂಡು ಬರುತ್ತಿರುವ ರೈತಪಿ ವರ್ಗ ಈ ಬಾರಿಯೂ ಸಕಾಲದಲ್ಲಿ ಮಳೆ ಇಲ್ಲದ ಕಾರಣ ಮಳೆ ಬೀಳುವಂತೆ ಮೊರೆಗಾಗಿ ಪಾತ್ರರಾಯಸ್ವಾಮಿಗೆ ಈ ವರ್ಷವೂ ಅಭಿಷೇಕ ವಿಶೇಷ ಪೂಜೆ ಮಾಡಲಾಯಿತು.
ಕನ್ನಡಪ್ರಭ ವಾರ್ತೆ ದೇವಲಾಪುರ
ಮಳೆಗಾಗಿ ಪ್ರಾರ್ಥಿಸಿ ಪಾತ್ರರಾಯಸ್ವಾಮಿಗೆ ರೈತರು, ಗ್ರಾಮಸ್ಥರು ಅಭಿಷೇಕದೊಂದಿಗೆ ವಿಶೇಷ ಪೂಜೆ ನೆರವೇರಿಸಿದರು.ಗ್ರಾಮದ ಹೊರವಲಯದಲ್ಲಿ ಬಹಳ ಹಿಂದಿನಿಂದಲೂ ವಿಶಿಷ್ಟ ಪರಂಪರೆ ಉಳಿಸಿ ಬೆಳೆಸಿಕೊಂಡು ಬರುತ್ತಿರುವ ರೈತಪಿ ವರ್ಗ ಈ ಬಾರಿಯೂ ಸಕಾಲದಲ್ಲಿ ಮಳೆ ಇಲ್ಲದ ಕಾರಣ ಮಳೆ ಬೀಳುವಂತೆ ಮೊರೆಗಾಗಿ ಪಾತ್ರರಾಯಸ್ವಾಮಿಗೆ ಈ ವರ್ಷವೂ ಅಭಿಷೇಕ ವಿಶೇಷ ಪೂಜೆ ಮಾಡಲಾಯಿತು.
ರೈತರ ಬದುಕಿನ ಆಶಾಕಿರಣವಾಗಿ ಸಮೃದ್ಧ ಮಳೆ ಕಾಲಕ್ಕೆ ಸರಿಯಾಗಿ ಆಗಿ ರೈತಕುಲ ಉಳಿವು, ಬೆಳವಣಿಗೆಗೆ ಪ್ರಾರ್ಥಿಸಿದರು. ಇತಿಹಾಸ ಪರಂಪರೆ ಹೊಂದಿದ ಈ ದೇವರಿಗೆ ಪೂಜೆ ಮಾಡುವುದರಿಂದ ಸಮೃದ್ಧ ಮಳೆ ಬೆಳೆಯಾಗುವುದು ವಾಡಿಕೆಯಾಗಿದೆ ಎಂಬುದು ವಿಶೇಷ.ಗ್ರಾಮದ ಅಧಿ ದೇವತೆಯಾದ ಶ್ರೀಪಟ್ಟಲದಮ್ಮ ದೇವಿ ಸಮ್ಮುಖದಲ್ಲಿ ವಿಶೇಷ ಅಭಿಷೇಕ ಪೂಜೆ ಅಷ್ಟೋತ್ತರಗಳನ್ನು ನೆರವೇರಿಸಿ ದೇವರಿಗೆ ವಿಶೇಷ ಅಲಂಕಾರ ಮಾಡಲಾಯಿತು. ಈ ವೇಳೆ ಗ್ರಾಮಸ್ಥರು ಹಾಜರಿದ್ದು ಪ್ರಸಾದ ಪ್ರಸಾದ ವಿನಿಯೋಗ ಮಾಡಲಾಯಿತು.ಕೆಆರ್ ಎಸ್ ನೀರಿನ ಮಟ್ಟ
ಗರಿಷ್ಠ ಮಟ್ಟ - 124.80 ಅಡಿಇಂದಿನ ಮಟ್ಟ – 124.10 ಅಡಿ
ಒಳ ಹರಿವು – 5,039 ಕ್ಯುಸೆಕ್
ಹೊರ ಹರಿವು – 4,839 ಕ್ಯುಸೆಕ್
ನೀರಿನ ಸಂಗ್ರಹ – 48.475 ಟಿಎಂಸಿ